ಲಂಡನ್: ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಮುಂಬರುವ ಆ್ಯಶಸ್ ಸರಣಿಯಲ್ಲಿ ತಮ್ಮ ದೇಶದ ಬೌಲರ್ಗಳು ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಅತಿಥೇಯ ಆಸ್ಟ್ರೇಲಿಯಾಕ್ಕೆ ಹೊಡೆತ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎನ್ನುವುದರಲ್ಲಿ ನನಗೆ ಭರವಸೆಯಿಲ್ಲ ಎಂದಿದ್ದಾರೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆ್ಯಶಸ್ ಟೆಸ್ಟ್ ಸರಣಿ ಡಿಸೆಂಬರ್ 8ರಿಂದ ಬ್ರಿಸ್ಬೇನ್ನ ಗಬ್ಬಾದಲ್ಲಿ ಆರಂಭವಾಗಲಿದೆ. ಈ ಸರಣಿಯಲ್ಲಿ ಅನುಭವಿ ಜೇಮ್ಸ್ ಆ್ಯಂಡರ್ಸನ್ ಎದುರಾಳಿಗೆ ಸವಾಲಾಗುತ್ತಾರೆನ್ನುವುದರಲ್ಲಿ ನನಗೆ ಅನುಮಾನವಿದೆ ಎಂದು 2005ರ ಆ್ಯಶಸ್ ಟೆಸ್ಟ್ ಗೆದ್ದ ನಾಯಕ ವಾನ್ ಹೇಳಿದ್ದಾರೆ.
ಇಂಗ್ಲೆಂಡ್ ಕಳೆದ ತಿಂಗಳು ಓವಲ್ನಲ್ಲಿ ತನ್ನ ಕೊನೆಯ ಟೆಸ್ಟ್ ಆಡಿದೆ. ತಂಡದಲ್ಲಿರುವ ಜಿಮ್ಮಿ ಆಂಡರ್ಸನ್ ಅವರೇ ಇಂಗ್ಲೆಂಡ್‌ನ ವೇಗದ ಬೌಲರ್. ಇದು ನನ್ನ ಕಳವಳಕ್ಕೆ ಕಾರಣವಾಗಿದೆ. ಏಕೆಂದರೆ ಅವರ ವಯಸ್ಸು. ಆದರೆ ಪ್ರವಾಸಿ ತಂಡ ಇರುವ ಬೌಲಿಂಗ್ ದಾಳಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರಿಣಾಮಕಾರಿ ಆಗಬೇಕೆಂದರೆ ಖಂಡಿತ ಸ್ಕೋರ್ ಬೋರ್ಡ್ನಲ್ಲಿ ದೊಡ್ಡ ಮೊತ್ತವನ್ನು ದಾಖಲಿಸಬೇಕೆಂದು ಸೋಮವಾರ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
" ಆಸ್ಟ್ರೇಲಿಯಾದಲ್ಲಿ ಅನುಭವಿ ಬೌಲರ್ಗಳಾಗಿರುವ ಆ ಇಬ್ಬರು (ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್) ಯಶಸ್ವಿಯಾಗಬಹುದು ಅಥವಾ ಇಂಗ್ಲೆಂಡ್ ಆಸ್ಟ್ರೇಲಿಯಾದ ಮೇಲೆ ದೊಡ್ಡ ಪ್ರಮಾಣದ ಒತ್ತಡವನ್ನು ಹೇರಬೇಕಾದರೆ, ನಮ್ಮ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕೂ ಹೆಚ್ಚಿನ ರನ್ ಗಳಿಸಬೇಕು" ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ಬೌಲರ್ಗಳು ಆಸ್ಟ್ರೇಲಿಯನ್ ಬ್ಯಾಟರ್ಗಳ ಮೇಲೆ ಒತ್ತಡವನ್ನುಂಟು ಮಾಡುತ್ತಾರೆಂದು ನಾನು ಭಾವಿಸುವುದಿಲ್. ಅಂತಹ ಕೌಶಲ್ಯವನ್ನು, ವೇಗವನ್ನು ಹಾಗೂ ಪರಿಣಿತ ಸ್ಪಿನ್ ಬೌಲರ್ಗಳನ್ನು ತನ್ನ ಬತ್ತಳಿಕೆಯಲ್ಲಿ ಹೊಂದಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಆದರೆ ಅವರು ಒಳ್ಳೆಯ ರನ್ಗಳನ್ನು ದಾಖಲಿಸಿದರೆ, ಡಾಟ್ ಬಾಲ್ ಮತ್ತು ಮೇಡನ್ ಓವರ್ಗಳ ಮೂಲಕ ಆಸ್ಟ್ರೇಲಿಯನ್ನರ ವಿರುದ್ಧ ಮೇಲುಗೈ ಸಾಧಿಸಬಹುದು ಎಂದಿದ್ದಾರೆ.
ಅಲ್ಲದೆ ಆಸ್ಟ್ರೇಲಿಯನ್ನರ ಬ್ಯಾಟಿಂಗ್ ಲೈನ್ಅಪ್ ಹೇಳಿಕೊಳ್ಳುವಂತಿಲ್ಲ. ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಾಬುಶೇನ್ ಹೊರತುಪಡಿಸಿದರೆ ಉಳಿದ ಬ್ಯಾಟ್ಸ್ಮ್ಗಳು ನಮ್ಮ ಬೌಲರ್ಗಳಿಗೆ ಭೀತಿ ಉಂಟುಮಾಡಲಾರರು. ಅಲ್ಲದೆ ವಾರ್ನರ್ ಎಷ್ಟು ಸಮಯ ಆಡಬಲ್ಲರು? ಆತ ಆಸ್ಟ್ರೇಲಿಯಾದಲ್ಲಿ ಒಳ್ಳೆಯ ದಾಖಲೆ ಹೊಂದಿದ್ದಾರೆ. ಅವರು ಹಿಂದಿನ ವಾರ್ನರ್ ಆಗಿ ಈಗ ಉಳಿದಿಲ್ಲ ಎಂದು ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದಾರೆ.
ಇದನ್ನು ಓದಿ:ಪ್ರತಿಷ್ಠಿತ ಆ್ಯಶಸ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ : ಕರ್ರನ್,ಸ್ಟೋಕ್ಸ್, ಆರ್ಚರ್ ಅಲಭ್ಯ