ಮೆಲ್ಬೋರ್ನ್(ಆಸ್ಟ್ರೇಲಿಯಾ): ಟಿ20 ಚಾಂಪಿಯನ್ ಇಂಗ್ಲೆಂಡ್ ತಂಡದ ಸ್ಟಾರ್ ಬೌಲರ್ ಸ್ಯಾಮ್ ಕರ್ರನ್ 13 ವಿಕೆಟ್ ಕಿತ್ತು ಟೂರ್ನಿಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಇದಲ್ಲದೇ, ವಿಶ್ವಕಪ್ನ ಫೈನಲ್ನಲ್ಲಿ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಈ ಎಲ್ಲ ಸಾಧನೆಗೆ ಭಾರತದ ಕ್ರಿಕೆಟ್ ಟೂರ್ನಿಯಾದ ಐಪಿಎಲ್ ಅನುಭವವೇ ಇದಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.
ವಿಶ್ವಕಪ್ ಗೆಲುವಿನ ಬಳಿಕ ಮಾತನಾಡಿದ ಸ್ಯಾಮ್ ಕರ್ರನ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿನ ಅನುಭವ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಲು ಸಹಕಾರಿಯಾಯಿತು. ಇದು ವಿಶ್ವಕಪ್ನಲ್ಲೂ ಪ್ರತಿಬಿಂಬಿಸಿ ಉತ್ತಮ ಪ್ರದರ್ಶನ ನೀಡಲು ಸಹಕಾರಿಯಾಯಿತು ಎಂದರು.
2 ನೇ ಬಾರಿಗೆ ಚುಟುಕು ಮಾದರಿಯ ವಿಶ್ವಕಪ್ ಎತ್ತಿಹಿಡಿದ ಇಂಗ್ಲೆಂಡ್ ತಂಡದ ತಾರಾ ಆಲ್ರೌಂಡರ್ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್ನಲ್ಲಿ ಅದ್ಭುತ ತಂಡಗಳ ಜೊತೆಗೆ ಕಣಕ್ಕಿಳಿದಿದ್ದೇನೆ. ಆ ತಂಡದ ಆಟಗಾರರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಇದೇ ನನಗೆ ಇಂದಿನ ಸಾಧನೆಗೆ ನೆರವಾಯಿತು. ಕಲಿಯುವುದು ಸಾಕಷ್ಟಿದೆ. ಇದೇ ಹುಮ್ಮಸ್ಸಿನಲ್ಲಿ ಮತ್ತೆ ಭಾರತದ ಟೂರ್ನಿಗೆ ಹಿಂದಿರುಗುವೆ ಎಂದು ಸ್ಯಾಮ್ ಹೇಳಿದರು.
-
Player of the Match ✅
— England Cricket (@englandcricket) November 13, 2022 " class="align-text-top noRightClick twitterSection" data="
Player of the Tournament ✅
Some cricketer, @CurranSM 👏 pic.twitter.com/9ABklZ7Gwn
">Player of the Match ✅
— England Cricket (@englandcricket) November 13, 2022
Player of the Tournament ✅
Some cricketer, @CurranSM 👏 pic.twitter.com/9ABklZ7GwnPlayer of the Match ✅
— England Cricket (@englandcricket) November 13, 2022
Player of the Tournament ✅
Some cricketer, @CurranSM 👏 pic.twitter.com/9ABklZ7Gwn
ಇಂದು ಮೆಲ್ಬೋರ್ನ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ವಿಕೆಟ್ಗಳಿಂದ ಬಗ್ಗುಬಡಿದ ಇಂಗ್ಲೆಂಡ್ ತಂಡ ಎರಡನೇ ಬಾರಿಗೆ ಚಾಂಪಿಯನ್ ಆಯಿತು. ಅಲ್ಲದೇ, 2019 ರ ಏಕದಿನ ವಿಶ್ವಕಪ್ ಗೆದ್ದಿದ್ದ ತಂಡ ಬಳಿಕ ಟಿ20 ವಿಶ್ವಕಪ್ ಗೆದ್ದು ಮೊದಲ ತಂಡ ಎಂಬ ದಾಖಲೆ ಬರೆಯಿತು.
ಓದಿ: ಕರ್ಮ ಯಾವಾಗಲೂ ಹಿಂತಿರುಗಿಸುತ್ತದೆ: ಶೋಯೆಬ್ ಅಖ್ತರ್ಗೆ ಮೊಹಮದ್ ಶಮಿ ಗುದ್ದು