ETV Bharat / sports

ಪಂದ್ಯದ ಗತಿ ಬದಲಿಸಬಲ್ಲೇ ಎನಿಸಿದಾಗಲೆಲ್ಲ ಪಂತ್​ ತಮ್ಮಿಷ್ಟದಂತೆ ಆಡಬಹುದು: ಕೊಹ್ಲಿ

ಅದು ಅವನ ಸ್ವಾಭಾವಿಕ ಆಟ, ನಾವು ಕೂಡ ಅವನಿಂದ ಇದನ್ನೇ ಬಯಸುತ್ತೇವೆ. ಪಂದ್ಯದ ಗತಿ ಬದಲಿಸುವ ಆಟವನ್ನು ನಾವೆಲ್ಲಾ ರಿಷಭ್​ ಪಂತ್​ರಿಂದ ನಿರೀಕ್ಷಿಸುತ್ತೇವೆ. ಅವನ ಆಟ ನಮಗೆ ಸಮತೋಲನ ತಂದುಕೊಡುತ್ತದೆ. ಆತ ಇದೇ ದಾರಿಯಲ್ಲಿ ಮುಂದೆಯೂ ಆಡಲಿದ್ದಾರೆ ಎಂದು ಕೊಹ್ಲಿ ಯುವ ಆಟಗಾರನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದಾಗಿ ಹೇಳಿದ್ದಾರೆ.

Rishabh Pant kohli
ರಿಷಭ್ ಪಂತ್- ವಿರಾಟ್​ ಕೊಹ್ಲಿ
author img

By

Published : Aug 11, 2021, 8:55 PM IST

Updated : Aug 11, 2021, 9:01 PM IST

ಲಂಡನ್: ರಿಷಭ್ ಪಂತ್ ತಮ್ಮ ಕೌಶಲ್ಯ ಮತ್ತು ಉದ್ದೇಶಗಳಿಂದ ಪಂದ್ಯದ ಗತಿ ಬದಲಾಯಿಸಬಲ್ಲೇ ಎಂದು ಭಾವಿಸಿದರೆ, ಅವರು ಯಾವಾಗ ಬೇಕಾದರೂ ತಮ್ಮಿಷ್ಟದಂತೆ ಆಡುವ ಅವಕಾಶವನ್ನು ತೆಗೆದುಕೊಳ್ಳಬಹುದು ಎಂದು ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹೇಳಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲನೇ ಟೆಸ್ಟ್​ ಪಂದ್ಯ ಕೊನೆಯ ದಿನ ಸುರಿದ ಮಳೆಯ ಕಾರಣ ಡ್ರಾನಲ್ಲಿ ಅಂತ್ಯಗೊಂಡಿತ್ತು. ಇಂಗ್ಲೆಂಡ್​ ಭಾರತಕ್ಕೆ 209ರನ್​ಗಳ ಟಾರ್ಗೆಟ್​ ನೀಡಿತ್ತು. ಭಾರತಕ್ಕೆ ಕೊನೆಯ ದಿನ ಗೆಲ್ಲಲು 9 ವಿಕೆಟ್​ ಕೈಯಲ್ಲಿರುವಂತೆ 157 ರನ್​ ಗಳಿಸಬೇಕಿತ್ತು. ಆದರೆ, ವರುಣ ದೇವಾ ಭಾರತ ಗೆಲುವಿನ ಆಸೆಗೆ ತಣ್ಣೀರೆರಚಿದನು. ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ ಸ್ಫೋಟಕ ಪ್ರದರ್ಶನ ತೋರಿದ್ದ ಪಂತ್ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು.

ಆದರೆ ನಾಯಕ ಕೊಹ್ಲಿ ಪಂತ್​ ಆಟದ ಬೆನ್ನಿಗೆ ನಿಂತಿದ್ದು, ಅವರಿಗೆ ವಿಶ್ವಾಸ ಇದ್ದರೆ ಯಾವಾಗ ಬೇಕಾದರೂ ತಮ್ಮ ಸ್ವಾಭಾವಿಕ ಆಟ ಆಡಬಹುದು ಎಂದಿದ್ದಾರೆ. " ಅವನು ಮೂಲತಃ ಇದೇ ಮಾದರಿಯಲ್ಲಿ ಆಡುತ್ತಾನೆ. ಆ ರೀತಿಯಲ್ಲೇ ದೀರ್ಘ ಇನಿಂಗ್ಸ್ ಕಟ್ಟುವ ಸಾಮರ್ಥ್ಯ ಅವನಿಗಿದೆ. ಟೆಸ್ಟ್​ ಎಂದ ಮಾತ್ರಕ್ಕೆ ಆತ ಬಹಳ ರಕ್ಷಣಾತ್ಮಕವಾಗಿ ಆಡಬೇಕೆಂದಿಲ್ಲ. ಪರಿಸ್ಥಿತಿಯ ಬೇಡಿಕೆಯನ್ನು ಅರ್ಥಮಾಡಿಕೊಳ್ಳುವಷ್ಟು ಆತ ಬುದ್ಧಿವಂತನಾಗಿದ್ದಾನೆ.

ಒಂದು ವೇಳೆ ನಾವು ಪಂದ್ಯವನ್ನು ಉಳಿಸಲು ನೋಡುತ್ತಿದ್ದರೆ, ಅವನು ಆ ರೀತಿಯ ಹೊಡೆತಗಳಿಗೆ ಮುಂದಾಗುವುದನ್ನು ನೀವು ನೋಡಲು ಸಾಧ್ಯವಿಲ್ಲ. ಎಲ್ಲೆಲ್ಲಿ ಪಂದ್ಯದ ಪರಿಸ್ಥಿತಿ 50-50 ಇದೆಯೋ ಮತ್ತು ಅವನು ತನ್ನ ಆಟದಿಂದ ಪಂದ್ಯವನ್ನು ನಮ್ಮ ತಂಡದ ಕಡೆಗೆ ಬದಲಾಯಿಸಬಹುದು ಎಂದು ಆತ ಭಾವಿಸಿದರೆ, ಅವಕಾಶಗಳನ್ನು ತೆಗೆದುಕೊಳ್ಳುತ್ತಾನೆ, ಮುಂದೆಯೂ ತೆಗೆದುಕೊಳ್ಳಬಹುದು ಎಂದು ವರ್ಚುಯಲ್​ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಹೇಳಿದ್ದಾರೆ.

ಅದು ಅವನ ಸ್ವಾಭಾವಿಕ ಆಟ, ನಾವು ಕೂಡ ಅವನಿಂದ ಇದನ್ನೇ ಬಯಸುತ್ತೇವೆ. ಪಂದ್ಯದ ಗತಿಯನ್ನು ಬದಲಿಸುವ ಆಟವನ್ನು ನಾವೆಲ್ಲಾ ರಿಷಭ್​ ಪಂತ್​ರಿಂದ ನಿರೀಕ್ಷಿಸುತ್ತೇವೆ. ಅವನ ಆಟ ನಮಗೆ ಸಮತೋಲನ ತಂದುಕೊಡುತ್ತದೆ. ಆತ ಇದೇ ದಾರಿಯಲ್ಲಿ ಮುಂದೆಯೂ ಆಡಲಿದ್ದಾರೆ ಎಂದು ಕೊಹ್ಲಿ ಯುವ ಆಟಗಾರನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದಾಗಿ ಹೇಳಿದ್ದಾರೆ.

ಇನ್ನು ಅಜಿಂಕ್ಯ ರಹಾನೆ ಫಾರ್ಮ್​ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಕೊಹ್ಲಿ, ನಾವು ಆ ವಿಭಾಗದಲ್ಲಿ ಸಮಸ್ಯೆಯಿದೆ ಎಂದು ಭಾವಿಸಿಲ್ಲ. ಯಾವೊಬ್ಬ ಆಟಗಾರನ ವೈಯಕ್ತಿಕ ಫಾರ್ಮ್​ ಬಗ್ಗೆ ನಾವು ಚಿಂತೆ ಮಾಡುವುದಿಲ್ಲ. ಅವರು ತಂಡಕ್ಕೆ ಹೇಗೆ ಬಲ ತುಂಬಲಿದ್ದಾರೆ ಎನ್ನುವುದರ ಕಡೆಗೆ ನಮ್ಮ ಗಮನವಿರುತ್ತದೆ. ನಾವು ಕಠಿಣ ಪರಿಸ್ಥಿಯಲ್ಲಿ ಬ್ಯಾಟಿಂಗ್ ಮಾಡಲು ಎದುರು ನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ ಒಂದಿಬ್ಬರು ವಿಫಲರಾದರೆ, ಉಳಿದವರಲ್ಲಿ ಯಾರಾದರೂ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಈ ಮನೋಬಲವೇ ನಮ್ಮನ್ನು ಮೊದಲ ಪಂದ್ಯದಲ್ಲಿ ಗೆಲುವಿನ ಹಂಚಿಗೆ ತೆಗೆದುಕೊಂಡು ಬಂದಿತ್ತು ಎಂದು ತಿಳಿಸಿದ್ದಾರೆ.

ಇದನ್ನು ಓದಿ:ನನ್ನನ್ನು ನಾನು ಹೆಚ್ಚು ನಂಬುತ್ತೇನೆ, ಅದೇ ನನ್ನ ಯಶಸ್ಸಿಗೆ ಕಾರಣ: ರವೀಂದ್ರ ಜಡೇಜಾ

Last Updated : Aug 11, 2021, 9:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.