ETV Bharat / sports

ಅಂತಿಮ ಟಿ20 ಫೈಟ್​: ಇಂಗ್ಲೆಂಡ್​ ವಿರುದ್ಧ ಸರಣಿ ಕ್ಲೀನ್​ ಸ್ವೀಪ್​ನತ್ತ ಭಾರತ ಚಿತ್ತ - ಭಾರತ ಕ್ರಿಕೆಟ್​ ತಂಡದ ಇಂಗ್ಲೆಂಡ್ ಪ್ರವಾಸ

ಇಂಗ್ಲೆಂಡ್​ ಹಾಗೂ ಭಾರತ ತಂಡಗಳ ನಡುವೆ ಇಂದು ಸರಣಿಯ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ನ್ಯಾಟಿಂಗ್​​ಹ್ಯಾಮ್​ನಲ್ಲಿ​ ನಡೆಯಲಿದೆ. ಮೂರನೇ ಪಂದ್ಯವನ್ನೂ ಗೆದ್ದು ಟೀಂ ಇಂಡಿಯಾ ಕ್ಲೀನ್​ ಸ್ವೀಪ್​ ಮಾಡಲಿದೆಯಾ ಅಥವಾ ಕೊನೆಯ ಪಂದ್ಯದಲ್ಲಾದರೂ ಇಂಗ್ಲೆಂಡ್​ ಜಯ ಸಾಧಿಸುತ್ತದೆಯಾ? ಎಂಬ ಕುತೂಹಲ ಅಭಿಮಾನಿಗಳದ್ದು.

eng-vs-ind-3rd-t20i-india-eye-clean-sweep-against-england
ಅಂತಿಮ ಟಿ20 ಪೈಟ್​: ಇಂಗ್ಲೆಂಡ್​ ವಿರುದ್ಧ ಸರಣಿ ಕ್ಲೀನ್​ ಸ್ವೀಪ್​ನತ್ತ ಭಾರತ ಚಿತ್ತ
author img

By

Published : Jul 10, 2022, 2:07 PM IST

ನ್ಯಾಟಿಂಗ್​​ಹ್ಯಾಮ್​: ಟ್ವೆಂಟಿ-20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ನೂತನ ನಾಯಕ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿರುವ ಭಾರತ ತಂಡ ಕ್ಲೀನ್​ ಸ್ವೀಪ್​ನತ್ತ ಕಣ್ಣಿಟ್ಟಿದೆ. ನ್ಯಾಟಿಂಗ್​​ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್​ನಲ್ಲಿ ಇಂದು ಅಂತಿಮ ಟಿ-20 ಹಣಾಹಣಿ ನಡೆಯಲಿದೆ.

ಮೊದಲ ಪಂದ್ಯದಲ್ಲಿ 50 ರನ್​ ಹಾಗೂ ಶನಿವಾರ ನಡೆದ ಎರಡನೇ ಕಾದಾಟದಲ್ಲಿ 49 ರನ್​ಗಳಿಂದ ಇಂಗ್ಲೆಂಡ್​ ಮಣಿಸಿರುವ ಭಾರತ ಸರಣಿ ಗೆದ್ದ ವಿಶ್ವಾಸದಲ್ಲಿದೆ. ಪವರ್​ ಪ್ಲೇನಲ್ಲಿ ಭಾರತೀಯ ಬೌಲರ್​ಗಳೆದುರು ಆಂಗ್ಲ ದಾಂಡಿಗರು ಪರದಾಡುತ್ತಿರುವುದು ಭಾರತದ ಗೆಲುವನ್ನು ಸುಲಭವಾಗಿಸಿದೆ. ಈಗಾಗಲೇ ಸರಣಿ ಗೆದ್ದಿರುವ ಕಾರಣ ಕೊನೆಯ ಪಂದ್ಯದಲ್ಲಿ ಭಾರತ ತಂಡದಲ್ಲಿ ಒಂದೆರಡು ಬದಲಾವಣೆ ಮಾಡುವ ಸಾಧ್ಯತೆಯಿದೆ.

ಬೌಲಿಂಗ್​​ ವಿಭಾಗದಲ್ಲಿ ಉಮ್ರಾನ್ ಮಲಿಕ್ ಅಥವಾ ಅವೇಶ್ ಖಾನ್​​ಗೆ ಅವಕಾಶ ನೀಡಿ, ಭುವನೇಶ್ವರ್ ಕುಮಾರ್ ಇಲ್ಲವೇ ಹರ್ಷಲ್ ಪಟೇಲ್ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಬ್ಯಾಟಿಂಗ್​ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಯಶಸ್ವಿಯಾದ ರಿಷಬ್ ಪಂತ್ ಮತ್ತೊಮ್ಮೆ ಇನ್ನಿಂಗ್ಸ್​ ಆರಂಭಿಸುವ ನಿರೀಕ್ಷೆಯಿದೆ. ಫಾರ್ಮ್​ನಲ್ಲಿದ್ದ ದೀಪಕ್ ಹೂಡಾ ಅವರನ್ನು 2ನೇ ಪಂದ್ಯದಿಂದ ಕೈಬಿಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ದಿನೇಶ್ ಕಾರ್ತಿಕ್ ಅಥವಾ ಸೂರ್ಯಕುಮಾರ್ ಯಾದವ್ ಬದಲಿಗೆ ಹೂಡಾ ತಂಡಕ್ಕೆ ಮರಳಬಹುದಾಗಿದೆ. ಕಳೆದ ಪಂದ್ಯದಲ್ಲೂ ರನ್​​ ಗಳಿಸಲು ವಿಫಲವಾದ ವಿರಾಟ್​ ಕೊಹ್ಲಿ ಮೇಲೆ ಮತ್ತೆ ಒತ್ತಡ ಇರಲಿದೆ.

ಸರಣಿ ಸೋತಿರುವ ಇಂಗ್ಲೆಂಡ್​​ ತಂಡದಲ್ಲೂ ಕೆಲ ಬದಲಾವಣೆ ಅನಿವಾರ್ಯವಾಗಿದೆ. ಮೂರನೇ ಕ್ರಮಾಂಕದ ಬ್ಯಾಟರ್​​ ಡೇವಿಡ್ ಮಲಾನ್ ಕೈಬಿಟ್ಟು, ಮತ್ತು ಸ್ಫೋಟಕ ಆರಂಭಿಕ ಫಿಲ್ ಸಾಲ್ಟ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ ಮಿಂಚಿದ ರಿಚರ್ಡ್ ಗ್ಲೀಸನ್ 11ರ ಬಳಗದಲ್ಲಿ ಮುಂದುವರೆಯಲಿದ್ದು, ವೇಗಿ ಟೈಮಲ್ ಮಿಲ್ಸ್ ತಂಡಕ್ಕೆ ಮರಳಬಹುದಾಗಿದೆ. ಪಂದ್ಯವು ಭಾರತೀಯ ಕಾಲಮಾನ ಸಾಯಂಕಾಲ 7 ಗಂಟೆಗೆ ಆರಂಭವಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ರಿಷಭ್ ಪಂತ್(ವಿ.ಕೀ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಅವೇಶ್ ಖಾನ್, ರವಿ ಬಿಷ್ಣೋಯ್, ಉಮ್ರಾನ್ ಮಲಿಕ್

ಇಂಗ್ಲೆಂಡ್ ತಂಡ: ಜೇಸನ್ ರಾಯ್, ಜೋಸ್ ಬಟ್ಲರ್ (ನಾಯಕ/ವಿ.ಕೀ), ಡೇವಿಡ್ ಮಲಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕರನ್, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡನ್, ರಿಚರ್ಡ್ ಗ್ಲೀಸನ್, ಮ್ಯಾಥ್ಯೂ ಪಾರ್ಕಿನ್ಸನ್, ರೀಸ್ ಟೋಪ್ಲಿ, ಟೈಮಲ್ ಮಿಲ್ಸ್, ಫಿಲಿಪ್ ಸಾಲ್ಟ್

ಇದನ್ನೂ ಓದಿ: 2ನೇ T20 I ಗೆದ್ದು ಸರಣಿ ಕೈವಶ ಮಾಡಿದ ರೋಹಿತ್ ಬಳಗ.. ಬರ್ಮಿಂಗ್​ಹ್ಯಾಮ್​​ನಲ್ಲಿ ಆಂಗ್ಲರಿಗೆ ಸೋಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.