ETV Bharat / sports

ಡಿವೋನ್ ಕಾನ್ವೆ, ಸೋಫಿ ಎಕ್ಲೆಸ್ಟೋನ್​ಗೆ 'ಜೂನ್ ತಿಂಗಳ ಐಸಿಸಿ ಪ್ಲೇಯರ್​ ಆಫ್​ ಮಂತ್​' ಪ್ರಶಸ್ತಿ

ಕಾನ್ವೆ ಜೂನ್​ನಲ್ಲಿ ಮಡೆದ 3 ಟೆಸ್ಟ್​ ಪಂದ್ಯಗಳಿಂದ 379 ರನ್​ಗಳಿಸಿದ್ದರು. ಸೋಫಿ ಎಕ್ಲೆಸ್ಟೋನ್ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ 8 ವಿಕೆಟ್ ಮತ್ತು ಏಕೈಕ ಟೆಸ್ಟ್‌ ಪಂದ್ಯದಲ್ಲೂ ಕೂಡ 8 ವಿಕೆಟ್ ಪಡೆದು ಐಸಿಸಿಯ ತಿಂಗಳ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಸೋಫಿ ಎಕ್ಲೆಸ್ಟೋನ್, ಡಿವೋನ್ ಕಾನ್ವೆ
ಸೋಫಿ ಎಕ್ಲೆಸ್ಟೋನ್, ಡಿವೋನ್ ಕಾನ್ವೆ
author img

By

Published : Jul 12, 2021, 3:57 PM IST

ಲಂಡನ್: ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿದ ನ್ಯೂಜಿಲ್ಯಾಂಡ್​ನ ಡಿವೋನ್ ಕಾನ್ವೆ ಮತ್ತು ಇಂಗ್ಲೆಂಡ್​ ಸ್ಪಿನ್ ಬೌಲರ್ ಸೋಫಿ ಎಕ್ಲೆಸ್ಟೋನ್ ಐಸಿಸಿ ಜೂನ್​ ತಿಂಗಳ ಆಟಗಾರ(ರ್ತಿ) ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕಾನ್ವೆ ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲುಲು ಮತ್ತು ನ್ಯೂಜಿಲೆಂಡ್ ವಿಶ್ವಟೆಸ್ಟ್​ ಚಾಂಪಿಯನ್​ ಆಗಲು ಪ್ರಮುಖ ಪಾತ್ರವಹಿಸಿದ್ದರು. ಅವರು ಜೂನ್​ನಲ್ಲಿ 3 ಟೆಸ್ಟ್​ ಪಂದ್ಯಗಳಿಂದ 379 ರನ್​ಗಳಿಸಿದ್ದರು. ಕಾನ್ವೆ ಈ ಪೈಪೋಟಿಯಲ್ಲಿ ತಮ್ಮ ದೇಶದ ಕೈಲ್ ಜೆಮೀಸನ್ ಹಾಗೂ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್​ರನ್ನು ಹಿಂದಿಕ್ಕಿ ಐಸಿಸಿ ಪ್ಲೇಯರ್ ಆಫ್​ ದ ಮಂತ್ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೆ ಈ ಪ್ರಶಸ್ತಿ ಪಡೆದ ಮೊದಲ ಕಿವೀಸ್ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಸೋಫಿ ಎಕ್ಲೆಸ್ಟೋನ್ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ 8 ವಿಕೆಟ್ ಮತ್ತು ಏಕೈಕ ಟೆಸ್ಟ್‌ ಪಂದ್ಯದಲ್ಲೂ ಕೂಡ 8 ವಿಕೆಟ್ ಪಡೆದಿದ್ದರು. ಅವರು ಪ್ಲೇಯರ್ ಆಫ್‌ ದ ಮಂಥ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರಿಗೂ ಮುನ್ನ ಟಮ್ಮಿ ಬ್ಯೂಮಾಂಟ್ ಫೆಬ್ರವರಿಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದರು. ಭಾರತದ ಬಿಗ್​ ಹಿಟ್ಟರ್​ ಶೆಫಾಲಿ ವರ್ಮಾ ಮತ್ತು ಆಲ್​ರೌಂಡರ್​ ಸ್ನೇಹ್ ರಾಣಾ ಕೂಡ ಪೈಪೋಟಿಯಲ್ಲಿದ್ದರು.

ಇದನ್ನೂ ಓದಿ: ಮಹಿಳಾ ಟಿ20: ಶೆಫಾಲಿ ಮಿಂಚಿಂಗು.. ಭಾರತಕ್ಕೆ 8 ರನ್​ಗಳ ರೋಚಕ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.