ETV Bharat / sports

ಒಮಾನ್​ ತಂಡದ ಜೊತೆ ಸೀಮಿತ ಓವರ್​ಗಳ ಸರಣಿಗೆ ಮುಂಬೈ ತಂಡ ಪ್ರಕಟ

ಭಾರತ ತಂಡದ ಪರ ಆಡಿರುವ ಅನುಭವವುಳ್ಳ ಶಿವಂ ದುಬೆ ಐಪಿಎಲ್​ನಲ್ಲಿ ರಾಜಸ್ಥಾನ್​ ರಾಯಲ್ಸ್ ಪರವಾಗಿ ಆಡುತ್ತಿದ್ದಾರೆ. ಯಶಸ್ವಿ ಜೈಸ್ವಾಲ್ ಕೂಡ ಇದೇ ತಂಡದಲ್ಲಿ ಆಡುತ್ತಿದ್ದಾರೆ. ಈ 14 ಸದಸ್ಯರ ತಂಡ ಆಗಸ್ಟ್​ 19ರಂದು ಒಮಾನ್​ಗೆ ಪ್ರಯಾಣಿಸಲಿದೆ. ಸೆಪ್ಟೆಂಬರ್​ 2 ವರೆಗೆ ಅಲ್ಲಿಯೇ ಇರಲಿದ್ದು, ಈ ವೇಳೆ 6 ಸೀಮಿತ ಓವರ್​ಗಳ ಪಂದ್ಯಗಳನ್ನಾಡಲಿದೆ.

ಮುಂಬೈ ಒಮಾನ್
ಮುಂಬೈ ಒಮಾನ್
author img

By

Published : Aug 16, 2021, 8:50 PM IST

ಮುಂಬೈ: ಟಿ-20 ವಿಶ್ವಕಪ್​ಗೂ ಒಮಾನ್​ ದೇಶದ ವಿರುದ್ಧ ಕೋರಿಕೆಯ ಮೇರೆಗೆ ನಡೆಯುತ್ತಿರುವ 6 ಸೀಮಿತ ಓವರ್​ಗಳ ಪಂದ್ಯಕ್ಕೆ ಮುಂಬೈ 14 ಸದಸ್ಯರ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಸ್ಟಾರ್​ ಕ್ರಿಕೆಟಿಗರಾದ ಶಿವಂ ದುಬೆ, ಅಂಡರ್​ 19 ಸ್ಟಾರ್ ಯಶಸ್ವಿ ಜೈಸ್ವಾಲ್​ ಕೂಡ ಇದ್ದಾರೆ.

ಟಿ-20 ವಿಶ್ವಕಪ್​ ಕ್ವಾಲಿಫೈಯರ್ಸ್​ಗೆ ಆತಿಥ್ಯವಹಿಸಿರುವ ಒಮಾನ್​ ಕೂಡ ಈ ಬಾರಿ ಟಿ-20 ವಿಶ್ವಕಪ್​ ಅರ್ಹತಾ ಪಂದ್ಯವನ್ನಾಡಲಿದೆ. ಆದ್ದರಿಂದ ವಿಶ್ವಕಪ್​ಗೆ ತಯಾರಿಗೋಸ್ಕರ ರಣಜಿಯ ಪ್ರಬಲ ತಂಡವಾಗಿರುವ ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ಗೆ ಕೆಲವು ಪಂದ್ಯಗಳನ್ನಾಡುವಂತೆ ಮನವಿ ಮಾಡಿಕೊಂಡಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿದ್ದ ಮುಂಬೈ ಬೋರ್ಡ್ ಇದೀಗ ಆ ಸರಣಿಗಾಗಿ ತಂಡವನ್ನು ಘೋಷಿಸಿದೆ.

ಭಾರತ ತಂಡದ ಪರ ಆಡಿರುವ ಅನುಭವವುಳ್ಳ ಶಿವಂ ದುಬೆ ಐಪಿಎಲ್​ನಲ್ಲಿ ರಾಜಸ್ಥಾನ್​ ರಾಯಲ್ಸ್ ಪರವಾಗಿ ಆಡುತ್ತಿದ್ದಾರೆ. ಯಶಸ್ವಿ ಜೈಸ್ವಾಲ್ ಕೂಡ ಇದೇ ತಂಡದಲ್ಲಿ ಆಡುತ್ತಿದ್ದಾರೆ. ಈ 14 ಸದಸ್ಯರ ತಂಡ ಆಗಸ್ಟ್​ 19ರಂದು ಒಮಾನ್​ಗೆ ಪ್ರಯಾಣಿಸಲಿದೆ. ಸೆಪ್ಟೆಂಬರ್​ 2 ವರೆಗೆ ಅಲ್ಲಿಯೇ ಇರಲಿದ್ದು, ಈ ವೇಳೆ 6 ಸೀಮಿತ ಓವರ್​ಗಳ ಪಂದ್ಯಗಳನ್ನಾಡಲಿದೆ.

ಮುಂಬೈ ತಂಡ: ಶಾಮ್ಸ್ ಮುಲಾನಿ (ನಾಯಕ), ಆಕರ್ಷಿತ್ ಗೊಮೆಲ್, ಹಾರ್ಡಿ ತಮೋರ್, ಅರ್ಮಾನ್ ಜಾಫರ್, ಚಿನ್ಮಯ್ ಸುತಾರ್, ಶಿವಂ ದುಬೆ, ಅಮನ್ ಖಾನ್, ಸುಜಿತ್ ನಾಯಕ್, ಯಶಸ್ವಿ ಜೈಸ್ವಾಲ್, ಶಶಾಂಕ್ ಅತ್ತರ್ಡೆ, ಮೋಹಿತ್ ಅವಸ್ತಿ, ಸಾಯಿರಾಜ್ ಪಾಟೀಲ್, ದೀಪಕ್ ಶೆಟ್ಟಿ, ಧುರ್ಮಿಲ್ ಮಟ್ಕರ್

ಇದನ್ನು ಓದಿ:ಕೆಕೆಆರ್​ಗೆ ಖುಷಿ ಸುದ್ದಿ, ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಸ್ಟಾರ್​ ಓಪನರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.