ETV Bharat / sports

ಹರಿಣಗಳ ನಾಡಲ್ಲಿ ಟೀಂ ಇಂಡಿಯಾ ಕಠಿಣ ತಾಲೀಮು: ಕೊಹ್ಲಿಗೆ ಬ್ಯಾಟಿಂಗ್ ಟಿಪ್ಸ್​ ಕೊಟ್ಟ ಕೋಚ್​ ದ್ರಾವಿಡ್​ - SA vs IND test series

ದಕ್ಷಿಣ ಆಫ್ರಿಕಾದ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಆಟಗಾರರು ಒಂದು ವಾರ ಕಾಲ ತರಬೇತಿ ನಡೆಸಲಿದ್ದು, ರಾಹುಲ್​ ದ್ರಾವಿಡ್​ ಅವರು ನಾಯಕ ವಿರಾಟ್​ ಕೊಹ್ಲಿ ಸೇರಿದಂತೆ ಇತರ ಆಟಗಾರರಿಗೆ ಟಿಪ್ಸ್​ ನೀಡಿದರು.

Indian team training session
ಭಾರತ ಕ್ರಿಕೆಟ್​ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ
author img

By

Published : Dec 19, 2021, 1:17 PM IST

ಸೆಂಚುರಿಯನ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಟೆಸ್ಟ್​ ಸರಣಿಗೆ ಸಿದ್ಧತೆ ಆರಂಭಿಸಿದೆ. ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಅಭ್ಯಾಸ ನಡೆಸಿದ್ದು, ಕೋಚ್​ ರಾಹುಲ್​ ದ್ರಾವಿಡ್​ ಅವರು ನಾಯಕ ವಿರಾಟ್​ ಕೊಹ್ಲಿಗೆ ಬ್ಯಾಟಿಂಗ್​ ಸಲಹೆ ನೀಡಿದರು.

ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಆಟಗಾರರು ಒಂದು ವಾರ ಕಾಲ ತರಬೇತಿ ನಡೆಸಲಿದ್ದು, ರಾಹುಲ್​ ದ್ರಾವಿಡ್​ ನಾಯಕ ವಿರಾಟ್​ ಕೊಹ್ಲಿ ಸೇರಿದಂತೆ ಇತರ ಆಟಗಾರರಿಗೆ ಟಿಪ್ಸ್​ ನೀಡಿದರು. ಭಾರತ ತಂಡವು ಇಲ್ಲಿ ಡಿಸೆಂಬರ್ 26ರಂದು ಪ್ರಾರಂಭವಾಗುವ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಆರಂಭಿಸಲಿದೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್​ ಸರಣಿ ಮೇಲೆ ಕಣ್ಣಿಟ್ಟಿರುವ ವಿರಾಟ್​ ಪಡೆಗೆ ಗುರಿ ಸಾಧನೆ ಸುಲಭವಲ್ಲ. ನಾಯಕ ಕೊಹ್ಲಿ ಸೇರಿದಂತೆ ತಂಡದಲ್ಲಿನ ಕೆಲ ಪ್ರಮುಖ ಆಟಗಾರರು ಉತ್ತಮ ಫಾರ್ಮ್​ನಲ್ಲಿಲ್ಲ. ಅಲ್ಲದೆ, ಆರಂಭಿಕ ಆಟಗಾರ ರೋಹಿತ್​ ಶರ್ಮಾ ಕೂಡ ಗಾಯದಿಂದ ಸರಣಿಗೆ ಅಲಭ್ಯರಾಗಿದ್ದಾರೆ. ಇನ್ನೊಂದೆಡೆ ಯಾವುದೇ ಅಭ್ಯಾಸ ಪಂದ್ಯವಿಲ್ಲದೆ, ತಂಡವು ತ್ವರಿತವಾಗಿ ಪಿಚ್‌ಗಳಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ತಂಡವು ಅಭ್ಯಾಸದ ಅವಧಿಗೂ ಮುನ್ನ ಕೆಲಕಾಲ ಜಾಗಿಂಗ್ ಮತ್ತು ಸ್ಟ್ರೆಚಿಂಗ್​ನಲ್ಲಿ ನಿರತವಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ವಿಶ್ರಾಂತಿ ಪಡೆದ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಕೊಹ್ಲಿ ದ್ರಾವಿಡ್​ರಿಂದ ಸಲಹೆ, ಸೂಚನೆ ಪಡೆಯುತ್ತಿರುವುದು ಕಂಡುಬಂತು.

ಇದೇ ವೇಳೆ ಮೊಹಮ್ಮದ್ ಶಮಿ, ಅಶ್ವಿನ್ ಮತ್ತು ಅನುಭವಿ ವೇಗಿ ಇಶಾಂತ್ ಶರ್ಮಾ ಕೂಡ ನೆಟ್ಸ್‌ನಲ್ಲಿ ಬೌಲಿಂಗ್​​ ಮಾಡಿದರು. ಆಟಗಾರರು ತಾಲೀಮು ನಡೆಸುತ್ತಿರುವ ವಿಡಿಯೋ ತುಣುಕುಗಳೊಂದಿಗೆ ಬಿಸಿಸಿಐ ಟ್ವೀಟ್​ ಮಾಡಿದೆ.

ಇದನ್ನೂ ಓದಿ: ವಿರಾಟ್​​ ಕೊಹ್ಲಿ 'ವರ್ತನೆ' ಹಾಡಿ ಹೊಗಳಿ, ಅವರು ತುಂಬಾ ಜಗಳವಾಡ್ತಾರೆ ಎಂದ ಗಂಗೂಲಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.