ETV Bharat / sports

Hardik Pandya: ನೆಟ್ಟಿಗರಿಂದ ಹಾರ್ದಿಕ್​ಗೆ ಛೀಮಾರಿ.. ಧೋನಿ, ವಿರಾಟ್, ಸಂಜು ನಡೆ ನೆನೆದ ಜಾಲತಾಣದ ಮಂದಿ​ - ETV Bharath Karnataka

ಮೂರನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ಹಾರ್ದಿಕ್​ ಪಾಂಡ್ಯ 17.5ನೇ ಬಾಲ್​ನಲ್ಲಿ ವಿನ್ನಿಂಗ್​​ ಶಾಟ್​ ಹೊಡೆದು ಜಯ ತಂದಿತ್ತರು. ಆದರೆ ಹಾರ್ದಿಕ್​ ಪಾಂಡ್ಯರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಒಳಗಾಗುತ್ತಿದೆ.

Hardik Pandya, Tilak Varma
ತಿಲಕ್​ ವರ್ಮಾ, ಹಾರ್ದಿಕ್​ ಪಾಂಡ್ಯ
author img

By

Published : Aug 9, 2023, 2:07 PM IST

ಜಾರ್ಜ್‌ಟೌನ್ (ಗಯಾನಾ): ಸೂರ್ಯ, ತಿಲಕ್​ ವರ್ಮಾ ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯಾರ ಅಬ್ಬರದ ಆಟಕ್ಕೆ ಭಾರತ ವಿಂಡೀಸ್​ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಜಯ ದಾಖಲಿಸಿತು. ಸೂರ್ಯ ಕುಮಾರ್​ ಯಾದವ್​ 188ರ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸಿ 83 ರನ್​ ಗಳಿಸಿದ್ದು ಮತ್ತು ಅವರ ಜೊತೆಗೆ ತಿಲಕ್​ ವರ್ಮಾ ವಿಕೆಟ್​ ಕಾಯ್ದುಕೊಂಡು ಜೊತೆಯಾಟ ಆಡಿದ್ದು ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದೆ.

ಆದರೆ ಪಂದ್ಯದ ಗೆಲುವಿನ ನಂತರ ಹಾರ್ದಿಕ್​ ಪಾಂಡ್ಯರ ನಡೆ ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಪಂದ್ಯದ ಗೆಲುವಿಗೆ 2 ರನ್​ ಬೇಕಿದ್ದಾಗ ಇನ್ನೂ ಎರಡು ಓವರ್​ 2 ಬಾಲ್​ ಬಾಕಿ ಇತ್ತು. ಸ್ಟ್ರೈಕ್​ನಲ್ಲಿದ್ದ ಹಾರ್ದಿಕ್​​ ಪಾಂಡ್ಯ 14 ರನ್​ ಗಳಿಸಿದ್ದರೆ, ನಾನ್​ ಸ್ಟ್ರೈಕ್​ ಎಂಡ್​ನಲ್ಲಿದ್ದ ತಿಲಕ್​ ವರ್ಮಾ 49 ರನ್​ ಗಳಿಸಿ ಕ್ರೀಸ್​ನಲ್ಲಿದ್ದರು. ಹಾರ್ದಿಕ್​ ಪಾಂಡ್ಯ 17.5ನೇ ಬಾಲ್​ನ್ನು ಸಿಕ್ಸ್​​ ಹೊಡೆದು ವಿನ್ನಿಂಗ್ಸ್​ ಶಾಟ್​ನಿಂದ ಪಂದ್ಯವನ್ನು ಗೆಲ್ಲಿಸುತ್ತಾರೆ. ಇತ್ತ 49 ರನ್​ ಗಳಿಸಿದ್ದ ತಿಲಕ್​ಗೆ ಒಂದು ರನ್​ಗೆ ಅವಕಾಶ ಮಾಡಿಕೊಟ್ಟಿದ್ದರೆ ಪಾದಾರ್ಪಣೆ ಮಾಡಿದ ಸರಣಿಯ ಮೂರನೇ ಪಂದ್ಯದಲ್ಲಿ ಎರಡನೇ ಅರ್ಧಶತಕ ದಾಖಲಾಗುತ್ತಿತ್ತು.

ಯುವ ಆಟಗಾರನಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಯಾದರೂ ಈ ನಡೆ ಮುಖ್ಯವಾಗುತ್ತದೆ. ಬಿಟ್ಟುಕೊಡುವುದನ್ನೂ ಕಲಿತಾಗ ಮಾತ್ರ ಒಬ್ಬ ನಾಯಕನಾಗಿ ರೂಪುಗೊಳ್ಳಲು ಸಾಧ್ಯ. ಈ ಹಿಂದೆ ಧೊನಿ ಮತ್ತು ವಿರಾಟ್​ ಅವಕಾಶ ನೀಡಿರುವ ವಿಡಿಯೋ ಟ್ವಿಟರ್​ನಲ್ಲಿ ಟ್ರೆಂಡ್​ ಆಗುತ್ತಿದೆ. ಅಲ್ಲದೇ ಇತ್ತೀಚೆಗೆ ನಡೆದ ಐಪಿಎಲ್​ನಲ್ಲಿ ಸಂಜು ಸ್ಯಾಮ್ಸನ್​ ಅರ್ಧಶತಕ ಮಾಡಿಕೊಳ್ಳದೇ ಜೈಸ್ವಾಲ್​ ಶತಕ ಪೂರೈಸಲು ಕ್ರೀಸ್​ ಬಿಟ್ಟುಕೊಟ್ಟ ನಡೆಯನ್ನೂ ನೆಟ್ಟಿಗರು ಪೋಸ್ಟ್​ ಮಾಡಿ ಒಬ್ಬ ನಾಯಕ ಹೀಗೆ ವರ್ತಿಸಬೇಕು ಎಂದು ಒಕ್ಕಣೆ ಬರೆದಿದ್ದಾರೆ.

2014ರ ಟಿ20 ವಿಶ್ವಕಪ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಗೆಲುವಿಗೆ ಆರು ರನ್ ಬೇಕಾಗಿದ್ದಾಗ 4ನೇ ವಿಕೆಟ್​ ಆಗಿ ರೈನಾ ವಿಕೆಟ್​ನ್ನು ಭಾರತ ಕಳೆದುಕೊಳ್ಳುತ್ತದೆ. 6ನೇ ವಿಕೆಟ್ ಆಗಿ ಧೋನಿ ಮೈದಾನಕ್ಕಿಳಿಯುತ್ತಾರೆ. ಮೈದಾನದಲ್ಲಿ ವಿರಾಟ್​ ಕೊಹ್ಲಿ ಅರ್ಧಶತಕ ದಾಖಲಿಸಿ ಮೈದಾನದಲ್ಲಿರುತ್ತಾರೆ. ಈ ಪಂದ್ಯದಲ್ಲಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ವಿರಾಟ್​ ಧೋನಿಗೆ ಮ್ಯಾಚ್​ ಫಿನಿಶ್​ ಮಾಡುವಂತೆ ಕ್ರೀಸ್​ ಬಿಟ್ಟುಕೊಡುತ್ತಾರೆ. ಆದರೆ ಧೋನಿ ಮ್ಯಾಚ್​​ ವಿನ್ನಿಂಗ್​​ ಬ್ಯಾಟಿಂಗ್​ ಮಾಡಿದ ಕೊಹ್ಲಿಗೇ ವಿನ್ನಿಂಗ್​ ಶಾಟ್​ ಹೊಡೆಯುವಂತೆ ಹೇಳುತ್ತಾರೆ. ಇದಕ್ಕಾಗಿ ಧೋನಿ ಸುಲಭದ ಎರಡು ಬಾಲ್​ನ್ನು ಡಾಟ್​ ಮಾಡಿ ಮುಂದಿನ ಓವರ್​ನಲ್ಲಿ ವಿರಾಟ್​ಗೆ ಕ್ರೀಸ್​ ಬಿಟ್ಟುಕೊಡುತ್ತಾರೆ. ಕೊಹ್ಲಿ ಬೌಂಡರಿ ಗಳಿಸಿ ಮ್ಯಾಚ್​ ವಿನ್​ ಮಾಡಿದ್ದರು.

ಐಪಿಎಲ್​ನ ಆರ್​ಸಿಬಿ ಪಂದ್ಯದಲ್ಲಿ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಗೇಲ್​ 98 ರನ್​ ಗಳಿಸಿ ನಾನ್​ ಸ್ಟ್ರೈಕರ್​ನಲ್ಲಿರುತ್ತಾರೆ. ಗೆಲುವಿಗೆ ಎರಡು ರನ್​ ಮಾತ್ರ ಬೇಕಿರುತ್ತದೆ. ಈ ವೇಳೆ ಕೆಕೆಆರ್​ ಬೌಲರ್​ ವೈಡ್​ ಹಾಕಿ ಒಂದು ರನ್​ ಕೊಡುತ್ತಾರೆ. ಈ ವೇಳೆ ಕೊಹ್ಲಿ ಬೌಲರ್​ ಮೇಲೆ ಕೋಪಗೊಂಡಿದ್ದರು. ಅವರು ಸಹ ಬಾಲ್​ ಡಾಟ್​ ಮಾಡಿ ಮುಂದಿನ ಓವರ್​ನಲ್ಲಿ ಗೇಲ್​ಗೆ ಕ್ರೀಸ್​ ಕೊಟ್ಟು ಶತಕ ಗಳಿಸಲು ನೆರವಾಗಿದ್ದರು.

ಈ ವರ್ಷದ ಐಪಿಎಲ್​ನಲ್ಲಿ ಸಂಜು ಸ್ಯಾಮ್ಸನ್​ ತಮ್ಮ ಅರ್ಧಶತಕದ ಅವಕಾಶವನ್ನು ಬಿಟ್ಟುಕೊಟ್ಟು, ಶತಕದ ಹೊಸ್ತಿಲಿನಲ್ಲಿದ್ದ ಜೈಸ್ವಾಲ್​ಗೆ ಕ್ರೀಸ್​ ಕೊಟ್ಟಿದ್ದರು. ಜೈಸ್ವಾಲ್​ ಶತಕಕ್ಕೆ 6 ರನ್​ ಬೇಕಿತ್ತು, ಸಂಜು ಅರ್ಧಶತಕಕ್ಕೆ ಎರಡು ರನ್​ ಸಾಕಿತ್ತು. ಪಂದ್ಯದ ಗೆಲುವಿಗೆ ರಾಜಸ್ಥಾನ ರಾಯಲ್ಸ್​ಗೆ ಕೇವಲ ಮೂರು ರನ್​ ಬೇಕಿತ್ತು. ಈ ವೇಳೆ ಬಾಲ್​ಗಳನ್ನು ಡಾಟ್​ ಮಾಡಿ ಜೈಸ್ವಾಲ್​ಗೆ ಸಿಕ್ಸ್​ ಹೊಡೆಯುವಂತೆ ಹೇಳಿ ಕ್ರೀಸ್​ ಬಿಟ್ಟುಕೊಟ್ಟಿದ್ದರು.

ವಿಂಡೀಸ್​ ಟಿ20 ಸಿರೀಸ್​​ನಲ್ಲಿ ಪಾದಾರ್ಪಣೆ ಮಾಡಿದ ತಿಲಕ್​ ವರ್ಮಾ ಮೂರು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕ್ರಮವಾಗಿ 39, 51 ಮತ್ತು 49 ರನ್​ ಗಳಿಸದ್ದಾರೆ. ನಿನ್ನೆ ಒಂದು ರನ್​ ಗಳಿಸಿದ್ದರೆ ಮೂರು ಪಂದ್ಯದಲ್ಲಿ ಎರಡು ಅರ್ಧಶತಕ ಗಳಿಸಿದಂತಾಗುತ್ತಿತ್ತು. ಆದರೆ ಹಾರ್ದಿಕ್​ ಕ್ರೀಸ್​ ಕೊಡದ ಕಾರಣ ತಿಲಕ್ ಅರ್ಧಶತಕದಿಂದ ವಂಚಿತರಾದರು.

ಇದನ್ನೂ ಓದಿ: Suryakumar Yadav: ಟಿ20ಯಲ್ಲಿ ಶತಕ ಸಿಕ್ಸ್​ ಪೂರೈಸಿದ ಸ್ಕೈ.. ಶಿಖರ್​ ದಾಖಲೆ ಮುರಿದ ಸೂರ್ಯ ಕುಮಾರ್​​ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.