ಕ್ರೈಸ್ಟ್ಚರ್ಚ್: ನ್ಯೂಜಿಲ್ಯಾಂಡ್ ತಂಡದ ಬ್ಯಾಟರ್ ಡೆವೊನ್ ಕಾನ್ವೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಮೊದಲ 5 ಟೆಸ್ಟ್ಗಳಲ್ಲೂ ಕನಿಷ್ಠ ಅರ್ಧಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಕಾನ್ವೆ, 2021ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅದೇ ಪಂದ್ಯದಲ್ಲಿ ಡಬಲ್ ಸೆಂಚುರಿ ಸಿಡಿಸಿ ಮಿಂಚಿ ನಂತರ 2ನೇ ಟೆಸ್ಟ್ ಪಂದ್ಯದಲ್ಲೂ 80 ರನ್ಗಳಿಸಿದ್ದರು. ನಂತರ ಏಜಸ್ಬೌಲ್ನಲ್ಲಿ ಭಾರತದ ವಿರುದ್ಧ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ 54 ರನ್ ಸಿಡಿಸಿ ಕಿವೀಸ್ಗೆ ಮೊದಲ ಐಸಿಸಿ ಟ್ರೋಫಿ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.
ಕಳೆದ ವಾರದಿಂದ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ 2 ಪಂದ್ಯಗಳ ಸರಣಿಯಲ್ಲೂ ಸತತ ಎರಡು ಶತಕ ಸಿಡಿಸಿದ್ದಾರೆ. ಮೊದಲ ಪಂದ್ಯದಲ್ಲಿ 122 ಮತ್ತು ಪ್ರಸ್ತುತ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ 109 ರನ್ಗಳಿಸಿದ್ದಾರೆ.
ಈ ಮೂಲಕ ವೃತ್ತಿ ಜೀವನದ ಮೊದಲ 5 ಟೆಸ್ಟ್ ಪಂದ್ಯಗಳಲ್ಲಿ 50+ ರನ್ಗಳಿಸಿದ ವಿಶ್ವದ ಏಕೈಕ ಬ್ಯಾಟರ್ ಆದರು. ಒಟ್ಟಾರೆ ಡೆವೊನ್ ಕಾನ್ವೆ 5 ಪಂದ್ಯಗಳಲ್ಲಿ ಒಂದು ದ್ವಿಶತಕದ ಸಹಿತ 3 ಶತಕ, 2 ಅರ್ಧಶತಕಗಳ ಸಹಿತ 623 ರನ್ಗಳಿಸಿದ್ದಾರೆ.
ಇದನ್ನೂ ಓದಿ: 3ನೇ ಟೆಸ್ಟ್ಗೆ ನಾನು ಸಂಪೂರ್ಣ ಫಿಟ್, ಆದರೆ ಆತ ಆಡುವುದು ಡೌಟ್: ವಿರಾಟ್ ಕೊಹ್ಲಿ