ನವದೆಹಲಿ: ದೆಹಲಿಯ ಕ್ಲಬ್ ಟಿ20 ಟೂರ್ನಮೆಂಟ್ನಲ್ಲಿ ಡೆಲ್ಲಿ ಕ್ರಿಕೆಟರ್ ಸುಬೋಧ್ ಭಟಿ ಕೇವಲ 79 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಕ್ರಿಕೆಟ್ ಅಭಿಮಾನಿಗಳನ್ನು ನಿಬ್ಬೆರಗಾಗಿಸಿದ್ದಾರೆ. ಅವರು 17 ಸಿಕ್ಸರ್ ಮತ್ತು ಅಷ್ಟೇ ಬೌಂಡರಿಗಳ ಸಹಿತ 205 ರನ್ಗಳಿಸಿ ಅಜೇಯರಾಗುಳಿದಿದ್ದಾರೆ.
ಭಟಿ ಅವರ ಅಜೇಯ 205 ರನ್ ಮತ್ತು ತಂಡದ ಮತ್ತಿಬ್ಬರು ಬ್ಯಾಟ್ಸ್ಮನ್ಗಳ ನೆರವಿನಿಂದ 20 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಡೆಲ್ಲಿ ಇಲೆವೆನ್ ತಂಡ ಸಿಂಬಾ ಕ್ಲಬ್ ಪರ 256 ರನ್ಗಳಿಸಿತು. ಭಟಿ ಚುಟುಕು ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ದೇಶದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು.
30 ವರ್ಷದ ಬೋಧ್ ಭಟಿ ಡೆಲ್ಲಿ ಪರ 8 ಪ್ರಥಮ ದರ್ಜೆ ಪಂದ್ಯ , 24 ಲಿಸ್ಟ್ ಎ ಮತ್ತು 39 ಟಿ20 ಪಂದ್ಯಗಳನ್ನಾಡಿದ್ದಾರೆ. ಅವರು ಕ್ರಮವಾಗಿ 147, 132 ಮತ್ತು 120 ರನ್ಗಳಿಸಿದ್ದಾರೆ. ಬೌಲಿಂಗ್ನಲ್ಲಿ 19 , 37 ಮತ್ತು 47 ವಿಕೆಟ್ ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ 76 ರನ್ಗಳಿಸಿದ್ದು ಗರಿಷ್ಠ ರನ್ ಆದರೆ, ಐಸಿಸಿ ಮಾನ್ಯತೆ ಪಡೆದ ಟಿ20 ಟೂರ್ನಮೆಂಟ್ನಲ್ಲಿ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಆರ್ಸಿಬಿ ಪರ ಅಜೇಯ 175 ರನ್ಗಳಿಸಿರುವುದು ವೈಯಕ್ತಿಕ ದಾಖಲೆಯಾಗಿದೆ.
ಇದನ್ನು ಓದಿ: ಕರುಣ್ ನಾಯರ್ ಒಂದೆರಡು ಪಂದ್ಯದಲ್ಲಿ ವಿಫಲರಾಗಿದ್ದಕ್ಕೆ ಸೈಡ್ಲೈನ್ ಮಾಡಲಾಯ್ತು: ಸಂಜಯ್ ಬಂಗಾರ್