ETV Bharat / sports

ತಾಹಿಲಾ ಮೆಕ್‌ಗ್ರಾತ್ ಸ್ಫೋಟಕ ಆಟ ವ್ಯರ್ಥ: ಯುಪಿ ವಿರುದ್ಧ ದೆಹಲಿಗೆ 42 ರನ್​ಗಳ ಜಯ - ವುಮೆನ್ಸ್​ ಪ್ರೀಮಿಯರ್​ ಲೀಗ್​

ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ಉತ್ತರ ಪ್ರದೇಶ ವಾರಿಯರ್ಸ್ ತಂಡದ ವಿರುದ್ಧ ದೆಹಲಿ ಕ್ಯಾಪಿಟಲ್ಸ್ ತಂಡ 42 ರನ್​ಗಳಿಂದ ಗೆಲುವು ಸಾಧಿಸಿದೆ.

delhi-capitals-vs-uttar-pradesh-warriors-dy-patil-stadium-wpl-2023-live-match-live-score
ಯುಪಿಗೆ ಗೆಲುವು ತಂದು ಕೊಡದ ತಾಲಿಯಾ ಮೆಕ್‌ಗ್ರಾತ್ ಸ್ಫೋಟಕ ಆಟ: ದೆಹಲಿಗೆ 42 ರನ್​ಗಳಿಂದ ಗೆಲುವು
author img

By

Published : Mar 7, 2023, 11:13 PM IST

Updated : Mar 8, 2023, 9:05 AM IST

ಮುಂಬೈ (ಮಹಾರಾಷ್ಟ್ರ): ಉತ್ತರ ಪ್ರದೇಶ ವಾರಿಯರ್ಸ್ ತಂಡದ ವಿರುದ್ಧ ದೆಹಲಿ ಕ್ಯಾಪಿಟಲ್ಸ್ 42 ರನ್​ಗಳ ಭರ್ಜರಿ ಜಯ ದಾಖಲಿಸಿದೆ. 222 ರನ್​ಗಳ ಬೃಹತ್​ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 169 ರನ್​ ಮಾತ್ರ ಗಳಿಸಲು ಶಕ್ತವಾಯಿತು. ತಾಹಿಲಾ ಮೆಕ್‌ಗ್ರಾತ್ (90 ಅಜೇಯ) ಸ್ಫೋಟಕ ಬ್ಯಾಟಿಂಗ್​ ನಡುವೆಯೂ ಯುಪಿ ವಾರಿಯರ್ಸ್ ತಂಡ ಸೋಲು ಅನುಭವಿಸಿತು.

ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ನ ಐದನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ಉತ್ತರ ಪ್ರದೇಶ ವಾರಿಯರ್ಸ್ ನಡುವೆ ನಡೆಯಿತು. ಉಭಯ ತಂಡಗಳು ತಮ್ಮ ಎರಡನೇ ಪಂದ್ಯವನ್ನು ಆಡಿದವು. ಟಾಸ್​ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್​ ಆಯ್ದುಕೊಂಡಿತ್ತು. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಮೆಗ್ ಲ್ಯಾನಿಂಗ್ ಪಡೆ ಉತ್ತಮ ಆರಂಭ ಪಡೆಯಿತು.

ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್​ 67 ರನ್​ಗಳ ಜೊತೆಯಾಟ ಆಡಿದರು. ಆದರೆ, ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮಿಂಚಿದ್ದ ಶಫಾಲಿ ವರ್ಮಾ ಬ್ಯಾಟ್​ನಿಂದ ದೊಡ್ಡ ಮೊತ್ತದ ರನ್​ಗಳು ಸಿಡಿಯಲಿಲ್ಲ. 14 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್​, ಬೌಂಡರಿಯೊಂದಿಗೆ 17 ರನ್ ​ಬಾರಿಸಿ ಶಫಾಲಿ, ತಾಲಿಯಾ ಮೆಕ್‌ಗ್ರಾತ್ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. ಮತ್ತೊಂದೆಡೆ, ಮೆಗ್ ಲ್ಯಾನಿಂಗ್ ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಿದರು.

ಶಫಾಲಿ ನಂತರ ಮರಿಝನ್ನೇ ಕಪ್ಪ್ ಎರಡು ಬೌಂಡರಿಗಳೊಂದಿಗೆ 16 ರನ್ ಗಳಿಸಿ ಔಟಾದರು. ಅದ್ಭುತ ಬ್ಯಾಟಿಂಗ್​ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿದ ನಾಯಕಿ ಲ್ಯಾನಿಂಗ್, ರಾಜೇಶ್ವರಿ ಗಾಯಕವಾಡ್​ ಬೌಲಿಂಗ್​ನಲ್ಲಿ ಬೌಲ್ಡ್​ ಆದರು. ಕೇವಲ 42 ಬಾಲ್​ಗಳಲ್ಲಿ ಭರ್ಜರಿ ಮೂರು ಸಿಕ್ಸರ್​ ಮತ್ತು 10 ಬೌಂಡರಿಗಳ ಸಮೇತ 70 ರನ್​ಗಳನ್ನು ಬಾರಿಸಿ ಲ್ಯಾನಿಂಗ್ ಮಿಂಚಿದರು.

ಡೆಲ್ಲಿ ಸ್ಫೋಟಕ ಫಿನಿಶ್​: ನಂತರದಲ್ಲಿ ಜೆಮಿಮಾ ರೋಡ್ರಿಗಸ್, ಜೆಸ್ ಜೊನಾಸೆನ್ ಹಾಗೂ ಆಲಿಸ್ ಕ್ಯಾಪ್ಸಿ ಬಿರುಸಿನಿಂದ ಬ್ಯಾಟ್​ ಬೀಸಿದರು. 22 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ ಜೆಮಿಮಾ ರೋಡ್ರಿಗಸ್ ಅಜೇಯ 34 ರನ್​ ಬಾರಿಸಿದರು. ಆಲಿಸ್ ಕ್ಯಾಪ್ಸಿ ಕೇವಲ 10 ಎಸತೆಗಳಲ್ಲಿ ಎರಡು ಸಿಕ್ಸರ್​ ಮತ್ತು ಒಂದು ಬೌಂಡರಿಯೊಂದಿಗೆ 21 ರನ್​​ಗಳ ಕೊಡುಗೆ ನೀಡಿದರು. ಜೆಸ್ ಜೊನಾಸ್ಸೆನ್ ಸ್ಫೋಟಕ ಬ್ಯಾಟಿಂಗ್ ಮಾಡಿ, 20 ಎಸೆತಗಳಲ್ಲಿ ತಲಾ ಮೂರು ಸಿಕ್ಸರ್​ ಮತ್ತು ಬೌಂಡರಿಗಳೊಂದಿಗೆ 42 ರನ್​ ಸಿಡಿಸಿ ಅಜೇಯರಾಗಿ ಉಳಿದರು. ದೆಹಲಿ ತಂಡದ ಪರ ರಾಜೇಶ್ವರಿ ಗಾಯಕವಾಡ್​, ತಾಲಿಯಾ ಮೆಕ್‌ಗ್ರಾತ್, ಸೋಫಿ ಎಕ್ಲೆಸ್ಟೋನ್ ಹಾಗೂ ಶಬ್ನಿಮ್ ಇಸ್ಮಾಯಿಲ್ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ: womens day: ನಾಳಿನ ವುಮೆನ್ಸ್​ ಪ್ರೀಮಿಯರ್​ ಲೀಗ್​ ಪಂದ್ಯ ವೀಕ್ಷಣೆಗೆ ಉಚಿತ ಅವಕಾಶ, ಮಹಿಳಾ ದಿನಾಚರಣೆಗೆ ಕೊಡುಗೆ

ತಾಹಿಲಾ ಏಕಾಂಗಿ ಹೋರಾಟ: 212 ರನ್​ಗಳ ಬೃಹತ್​ ಗೆಲುವಿನ ಗುರಿ ಪಡೆದ ಯುಪಿ ವಾರಿಯರ್ಸ್​ ಆರಂಭದಿಂದಲೂ ವಿಕೆಟ್​ ಕಳೆದುಕೊಳ್ಳುತ್ತ ಸಾಗಿತು. 31 ರನ್​ಗಳಿಗೆ 3 ವಿಕೆಟ್​ ಉರುಳಿದ್ದವು. ಆರಂಭಿಕರಾದ ಶ್ವೇತಾ ಶೆರಾವತ್​ 1, ಕಿರಣ್​ ನವ್ಗಿರೆ 2 ಹಾಗೂ ನಾಯಕಿ ಅಲೆಸ್ಸಾ ಹೀಲಿ 24 ರನ್​ ಬಾರಿಸಿ ಪೆವಿಲಿಯನ್​ ಸೇರಿಕೊಂಡಿದ್ದರು. ಆದರೆ ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಏಕಾಂಗಿಯಾಗಿ ಅಬ್ಬರಿಸಿದ ತಾಹಿಲಾ ಮೆಕ್​ಗ್ರಾತ್​ 50 ಎಸೆತಗಳಲ್ಲಿ 90 ರನ್​ ಸಿಡಿಸಿ ಅಜೇಯರಾಗುಳಿದರು. ಆದರೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ತಾಹಿಲಾ ಬ್ಯಾಟ್​ನಿಂದ 11 ಬೌಂಡರಿ ಹಾಗೂ 4 ಸಿಕ್ಸರ್​ಗಳು ಮೂಡಿಬಂದವು.

ಇನ್ನುಳಿದಂತೆ ದೀಪ್ತಿ ಶರ್ಮಾ 12, ದೇವಿಕಾ ವೈದ್ಯ 23 ರನ್​ ಗಳಿಸಿದರೂ ಸಹ ಆಕ್ರಮಣಕಾರಿ ಆಟ ಪ್ರದರ್ಶಿಸುವಲ್ಲಿ ವಿಫಲರಾದರು. ಬೃಹತ್​ ಮೊತ್ತದ ಎದುರು ಯುಪಿ ವನಿತೆಯರ ಬ್ಯಾಟಿಂಗ್​ ಮಂಕಾಗಿತ್ತು. 20 ಓವರ್​ಗಳಲ್ಲಿ 5 ವಿಕೆಟ್​ಗೆ 169 ರನ್​ ಮಾತ್ರ ಗಳಿಸಿ ಸೋಲೊಪ್ಪಿಕೊಂಡರು. ಡೆಲ್ಲಿ ಪರ ಜೆಸ್​ ಜೊನಾಸ್ಸೆನ್​ 3 ಹಾಗೂ ಮರಿಝನ್ನೆ ಕಪ್ಪ್ ಮತ್ತು ಶಿಖಾ ಪಾಂಡೆ ತಲಾ ಒಂದು ವಿಕೆಟ್​ ಪಡೆದರು. ಆಲ್​ರೌಂಡರ್​ ಪ್ರದರ್ಶನ ತೋರಿದ ಜೆಸ್​ ಜೊನಾಸ್ಸೆನ್​ ಪ್ಲೇಯರ್​ ಆಫ್​ ದಿ ಮ್ಯಾಚ್​ ಆಗಿ ಹೊರಹೊಮ್ಮಿದರು.

ಇದನ್ನೂ ಓದಿ: ಬಣ್ಣದಲ್ಲಿ ಮಿಂದೆದ್ದ ರಾಯಲ್​ ಬೆಡಗಿಯರು: ವುಮೆನ್ಸ್​ ಐಪಿಎಲ್​ನ ಹೋಳಿ ಸಂಭ್ರಮ

Last Updated : Mar 8, 2023, 9:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.