ಶಾರ್ಜಾ: ಐಪಿಎಲ್ ಎಂದರೆ ಹೊಡಿಬಡಿ ಆಟ, ಇಲ್ಲಿ ಬೌಲರ್ಗಳಿಗಿಂತ ಬ್ಯಾಟ್ಸ್ಮನ್ಗಳ ಅಬ್ಬರ ಹೆಚ್ಚಾಗಿರುತ್ತದೆ. ಆದರೆ ಮಂಗಳವಾರ ಶಾರ್ಜಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ ಇದಕ್ಕೆ ತದ್ವಿರುದ್ದವಾಗಿತ್ತು. ಇಡೀ 20 ಓವರ್ಗಳಲ್ಲಿ ಶಾರ್ಜಾದಂತಹ ಚಿಕ್ಕ ಮೈದಾನದಲ್ಲಿ ಹೊಡಿಬಡಿ ಬ್ಯಾಟರ್ಗಳ ದಂಡನ್ನೇ ಹೊಂದಿರುವ ಡೆಲ್ಲಿ ತಂಡ ಒಂದೇ ಒಂದು ಸಿಕ್ಸರ್ ಹೊಡೆಯಲು ಸಾಧ್ಯವಾಗಿಲ್ಲ ಎನ್ನುವುದು ಅಚ್ಚರಿಯ ಸಂಗತಿ.
ಈ ಪಂದ್ಯವನ್ನು ಹೊರೆತುಪಡಿಸಿದರೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಲ್ಲಿಯವರೆಗೆ 20(40 ಇನ್ನಿಂಗ್ಸ್) ಐಪಿಎಲ್ ಪಂದ್ಯಗಳು ನಡೆದಿದ್ದು 316 ಸಿಕ್ಸರ್ಗಳು ಸಿಡಿದಿದ್ದವು. ಇದೇ ಮೊದಲ ಬಾರಿಗೆ ಐಪಿಎಲ್ನ ತಂಡವೊಂದು ತನ್ನ 20 ಓವರ್ಗಳನ್ನು ಮುಗಿಸಿಯೂ ಒಂದೇ ಒಂದು ಸಿಕ್ಸರ್ ಸಿಡಿಸುವಲ್ಲಿ ವಿಫಲವಾಗಿದೆ.
ಶಾರ್ಜಾದಲ್ಲಿ ಆರ್ಸಿಬಿ 2014 ಮತ್ತು 2020ರಲ್ಲಿ ಕೇವಲ ಒಂದು ಸಿಕ್ಸರ್ ಸಿಡಿಸಿದ್ದು ಈ ಮೈದಾನದಲ್ಲಿನ ಅಂತ್ಯಂತ ಕಡಿಮೆ ಸಿಕ್ಸರ್ ಒಳಗೊಂಡಿಿದ್ದ ಇನ್ನಿಂಗ್ಸ್ಗಳಾಗಿದ್ದವು. ಇದೀಗ ಡೆಲ್ಲಿ ಆ ಲಿಸ್ಟ್ನ್ಲಲಿ ಮೊದಲ ಸ್ಥಾನಕ್ಕೇರಿದೆ.
ಡೆಲ್ಲಿ ತಂಡ 2021ರ ಐಪಿಎಲ್ನಲ್ಲಿ ಸಿಕ್ಸರ್ ಇಲ್ಲದೇ ಇನ್ನಿಂಗ್ಸ್ ಪೂರ್ಣಗಳಿಸಿದ ಮೊದಲ ತಂಡ ಎಂಬ ಅಪಕೀರ್ತಿಗೆ ಪಾತ್ರವಾಗಿದೆ. ಇಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 127 ರನ್ಗಳಿಸಿದೆ. ಪಂತ್ ಮತ್ತು ಸ್ಮಿತ್ ತಲಾ 39 ರನ್ಗಳಿಸಿದ್ದಾರೆ.
ಇದನ್ನು ಓದಿ: ನಾ ಮತ್ತೆ ಮೈದಾನದಲ್ಲಿ ಕಾಣಿಸಲ್ಲ.. SRH ಜತೆಗಿನ ಸಂಬಂಧ ಕಡಿದುಕೊಂಡ್ರಾ ವಾರ್ನರ್!?