ಮುಂಬೈ: ಭಾರತದ ವಿರುದ್ಧದ 5ನೇ ಟೆಸ್ಟ್ ಪಂದ್ಯ ರದ್ದಾಗುತ್ತಿದ್ದಂತೆ ಎಲ್ಲರ ಚಿತ್ತ ಇಂಡಿಯನ್ ಪ್ರೀಮಿಯರ್ ಕಡೆ ತಿರುಗಿದೆ. ಆದರೆ, ಐಪಿಎಲ್ನ ದ್ವಿತೀಯ ಭಾಗದಿಂದ ಕೆಲವು ಇಂಗ್ಲೆಂಡ್ ಆಟಗಾರರು ಹಿಂದೆ ಸರಿದಿದ್ದಾರೆ.
ಇಂಗ್ಲೆಂಡ್ನ ಸ್ಟಾರ್ ಬ್ಯಾಟ್ಸ್ಮನ್ ಜಾಜಿ ಬೈರ್ಸ್ಟೋವ್, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಮತ್ತು ಕ್ರಿಸ್ ವೋಕ್ಸ್ಈ ಬಾರಿಯ ಐಪಿಎಲ್ನಿಂದ ಹಿಂದೆ ಸರಿದರೆ, ಕೆಲವರು ಗಾಯದ ಕಾರಣದಿಂದ ಇಡೀ ಟೂರ್ನಮೆಂಟ್ನಿಂದಲೇ ಔಟ್ ಆಗಿದ್ದಾರೆ. ಇದೀಗ ಆ ಲಿಸ್ಟ್ಗೆ ಆಲ್ರೌಂಡರ್ ಕ್ರಿಸ್ ವೋಕ್ಸ್ ಕೂಡ ಸೇರಿಕೊಂಡಿದ್ದಾರೆ.
-
Just a look at what the newest addition to our pace battery, Ben Dwarshuis can do with the ball in hand 👀🔥#YehHaiNayiDilli #IPL2021 pic.twitter.com/u5t7Gw9Mlz
— Delhi Capitals (@DelhiCapitals) September 13, 2021 " class="align-text-top noRightClick twitterSection" data="
">Just a look at what the newest addition to our pace battery, Ben Dwarshuis can do with the ball in hand 👀🔥#YehHaiNayiDilli #IPL2021 pic.twitter.com/u5t7Gw9Mlz
— Delhi Capitals (@DelhiCapitals) September 13, 2021Just a look at what the newest addition to our pace battery, Ben Dwarshuis can do with the ball in hand 👀🔥#YehHaiNayiDilli #IPL2021 pic.twitter.com/u5t7Gw9Mlz
— Delhi Capitals (@DelhiCapitals) September 13, 2021
ಮೊದಲ ಹಂತದ 3 ಪಂದ್ಯಗಳಲ್ಲಿ 5 ವಿಕೆಟ್ ಪಡೆದುಕೊಂಡಿದ್ದ ಇಂಗ್ಲಿಷ್ ಆಲೌರೌಂಡರ್ ಕ್ರಿಸ್ ವೋಕ್ಸ್ ವೈಯಕ್ತಿಕ ಕಾರಣಗಳಿದಂದ ಟೂರ್ನಮೆಂಟ್ನಿಂದ ಹಿಂದೆ ಸರಿದಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಪ್ರಕಟಣೆ ಹೊರಡಿಸಿತ್ತು.
ಇನ್ನು ಅವರ ಜಾಗಕ್ಕೆ ಆಸ್ಟ್ರೇಲಿಯಾದ ವೇಗದ ಬೌಲರ್ ಬೆನ್ ಡ್ವಾರ್ಶಿಯಸ್ ಅವರನ್ನು ಬದಲೀ ಆಟಗಾರನಾಗಿ ಡೆಲ್ಲಿ ತಂಡಕ್ಕೆ ಆಯ್ಕೆ ಮಾಡಿದೆ. ಡ್ವಾರ್ಶಿಯಸ್ 82 ಟಿ-20 ಪಂದ್ಯಗಳಲ್ಲಿ 23 ಸರಾಸರಿಯಲ್ಲಿ 100 ವಿಕೆಟ್ ಪಡೆದಿದ್ದಾರೆ. ಬಿಬಿಎಲ್ನಲ್ಲಿ ಸಿಡ್ನಿ ಸಿಕ್ಸರ್ ಪರ ಆಡುವ ಅವರು 69 ಪಂದ್ಯಗಳಿಂದ 85 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದ ಸಾರ್ವಕಾಲಿಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.