ETV Bharat / sports

'IPLನೇ ಬನಾದಿ ಜೋಡಿ'.. ಮೈದಾನದಲ್ಲೇ ಗರ್ಲ್​​ಫ್ರೆಂಡ್​ಗೆ ಪ್ರಪೋಸ್ ಮಾಡಿ, ಉಂಗುರ ತೊಡಿಸಿದ ಚಹರ್​! - ಇಂಡಿಯನ್​ ಪ್ರೀಮಿಯರ್ ಲೀಗ್​​

ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಪಂಜಾಬ್​ ತಂಡಗಳ ನಡುವಿನ ಪಂದ್ಯ ಮುಕ್ತಾಯದ ಬಳಿಕ ಮೈದಾನದಲ್ಲಿ ವಿಶಿಷ್ಠವಾದ ಘಟನೆಯೊಂದು ನಡೆದಿದ್ದು, ಈ ಘಟನೆಗೆ ಕ್ರಿಕೆಟರ್ಸ್​ ಸೇರಿದಂತೆ ಸಾವಿರಾರು ಜನರು ಸಾಕ್ಷಿಯಾಗಿದ್ದಾರೆ.

Deepak Chahar
ಮೈದಾನದಲ್ಲೇ ಗರ್ಲ್​​ಫ್ರೆಂಡ್​ಗೆ ಪ್ರಪೋಸ್ ಮಾಡಿ, ಉಂಗುರ ತೊಡಿಸಿದ ಚಹರ್​!
author img

By

Published : Oct 7, 2021, 7:57 PM IST

Updated : Oct 8, 2021, 8:42 AM IST

ದುಬೈ: 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿಂದು ಕಿಂಗ್ಸ್​ ಇಲೆವೆನ್​ ಪಂಜಾಬ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​​ ತಂಡಗಳ ನಡುವಿನ ಪಂದ್ಯದ ಬಳಿಕ ಅಪರೂಪದ ಘಟನೆ ನಡೆದಿದೆ.

ಚೆನ್ನೈ ಸೂಪರ್ ಕಿಂಗ್ಸ್​​ ತಂಡದ ವೇಗದ ಬೌಲರ್​​ ರಾಹುಲ್​ ಚಹರ್, ಪಂದ್ಯ ಮುಗಿಯುತ್ತಿದ್ದಂತೆ ತನ್ನ ಗರ್ಲ್​ಫ್ರೆಂಡ್​ಗೆ ಪ್ರಪೋಸ್​ ಮಾಡಿದ್ದು, ಉಂಗುರ ತೊಡಿಸಿದ್ದಾರೆ.

ಪಂಜಾಬ್​ ವಿರುದ್ಧದ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ನೇರವಾಗಿ ಗರ್ಲ್​ಫ್ರೆಂಡ್​ ಕುಳಿತುಕೊಂಡಿದ್ದ ಸ್ಥಳಕ್ಕೆ ತೆರಳಿರುವ ಚಹರ್​, ಕೈಬೆರಳಿಗೆ ಉಂಗುರ ತೊಡಿಸಿ ಲವ್​ ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ಜಯ ಭಾರದ್ವಾಜ್ ಯೆಸ್​ ಎಂಬ ಉತ್ತರ ನೀಡಿದ್ದಾರೆ.

Deepak Chahar proposed his girlfriend after CSK-PBKS Match
ಉಂಗುರ ತೊಡಿಸಿ ಪ್ರಪೋಸ್ ಮಾಡಿದ ದೀಪಕ್​ ಚಹರ್

ಇಂದಿನ ಪಂದ್ಯದಲ್ಲಿ 4 ಓವರ್​ ಮಾಡಿರುವ ಚಹರ್​​ 48 ರನ್​ ನೀಡುವ ಮೂಲಕ 1 ವಿಕೆಟ್ ಪಡೆದುಕೊಂಡಿದ್ದಾರೆ. ಇಂದಿನ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ಸೋಲು ಕಂಡಿದ್ದು, ಇದರ ಹೊರತಾಗಿ ಕೂಡ ಈಗಾಗಲೇ 14ನೇ ಆವೃತ್ತಿ ಐಪಿಎಲ್​​ನಲ್ಲಿ ಪ್ಲೇ-ಆಫ್​ಗೆ ಲಗ್ಗೆ ಹಾಕಿದೆ.

ನಟ ಸಿದ್ಧಾರ್ಥ್​​ ಭಾರದ್ವಾಜ್​ ಸಹೋದರಿ ಜೊತೆ ನಿಶ್ಚಿತಾರ್ಥ:

ನಟ ಸಿದ್ದಾರ್ಥ್ ಭಾರದ್ವಾಜ್ ಅವರ ಸಹೋದರಿ ಜಯ ಭಾರದ್ವಾಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ದೀಪಕ್​ ಚಹರ್​​, ಅವರನ್ನ ತಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಚೆನ್ನೈ-ಪಂಜಾಬ್ ನಡುವಿನ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಜಯ ಭಾರದ್ವಾಜ್​ ಕುಳಿತಿದ್ದ ಜಾಗಕ್ಕೆ ಹೋಗಿ ಉಂಗುರ ಹಾಕಿದ್ದಾರೆ.

ಈ ಹಿಂದೆ ಸಹ ಇಂತಹ ಅನೇಕ ಘಟನೆಗಳು ಕ್ರಿಕೆಟ್​ ಪಂದ್ಯದ ವೇಳೆ ನಡೆದಿದ್ದು, ಆದರೆ ಇದೇ ಮೊದಲ ಸಲ ಐಪಿಎಲ್​ ಟೂರ್ನಮೆಂಟ್​ ವೇಳೆ ಈ ಅಪರೂಪದ ಪ್ರಸಂಗ ನಡೆದಿದೆ.

ಇದನ್ನೂ ಓದಿರಿ: ರಾಹುಲ್​ ಆರ್ಭಟಕ್ಕೆ ಸಿಎಸ್​ಕೆ ಧೂಳೀಪಟ: 13 ಓವರ್​ಗಳಲ್ಲೇ ಪಂದ್ಯ ಮುಗಿಸಿದ ಪಂಜಾಬ್

Last Updated : Oct 8, 2021, 8:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.