ETV Bharat / sports

ಗಾಯಕ್ಕೊಳಗಾಗಿರುವ ಈ ಆಟಗಾರ ಶ್ರೀಲಂಕಾ ವಿರುದ್ಧದ ಸರಣಿಗೆ ಅಲಭ್ಯ? - ಶ್ರೀಲಂಕಾ ಟಿ20 ಸರಣಿ ದೀಪಕ್ ಚಾಹರ್

ವಿಂಡೀಸ್​ ವಿರುದ್ಧ ಪವರ್​ ಪ್ಲೇ ನಲ್ಲೇ 2 ವಿಕೆಟ್​ ಉರುಳಿಸಿದ್ದ ದೀಪಕ್​ ಬೌಲಿಂಗ್ ಮಾಡಲು ಓಡುತ್ತಿದ್ದಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹಾಗಾಗಿ, ಗುರುವಾರದಿಂದ ಆರಂಭವಾಗಲಿರುವ ಸಿಂಹಳೀಯರ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಗೆ ಅನುಮಾನ ಎನ್ನಲಾಗುತ್ತಿದೆ.

Deepak Chahar  doubtful for T20I series against Sri Lanka
ದೀಪಕ್ ಚಾಹರ್​ ಗಾಯ
author img

By

Published : Feb 21, 2022, 7:08 PM IST

ಕೋಲ್ಕತ್ತಾ : ವೆಸ್ಟ್​ ಇಂಡೀಸ್​ ವಿರುದ್ಧದ ಕೊನೆಯ ಟಿ-20 ಪಂದ್ಯದ ವೇಳೆ ಹ್ಯಾಮ್​ಸ್ಟ್ರಿಂಗ್​ಗೆ ಒಳಗಾಗಿ ಮೈದಾನ ತೊರೆದಿದ್ದ ವೇಗಿ ದೀಪಕ್​ ಚಾಹರ್​ ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಪವರ್​ ಪ್ಲೇ ನಲ್ಲೇ 2 ವಿಕೆಟ್​ ಉರುಳಿಸಿದ್ದ ದೀಪಕ್​ ಬೌಲಿಂಗ್ ಮಾಡಲು ಓಡುತ್ತಿದ್ದಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹಾಗಾಗಿ, ಗುರುವಾರದಿಂದ ಆರಂಭವಾಗಲಿರುವ ಸಿಂಹಳೀಯರ ವಿರುದ್ಧ 3 ಪಂದ್ಯಗಳ ಟಿ-20 ಸರಣಿಗೆ ಅನುಮಾನ ಎನ್ನಲಾಗುತ್ತಿದೆ. ಪಿಟಿಐ ವರದಿಯ ಪ್ರಕಾರ ದೀಪಕ್ ಚಹಾರ್ ಅವರ ಸ್ನಾಯು ಸೆಳೆತ ಯಾವ ಪ್ರಮಾಣದಲ್ಲಿದೆ ಎನ್ನುವುದನ್ನು ಬಿಸಿಸಿಐ ವೈದ್ಯಕೀಯ ತಂಡ ಕಂಡು ಹಿಡಿಯಲಾಗುತ್ತಿದೆ.

ಒಂದು ವೇಳೆ ಮಾಂಸಕಂಡದಲ್ಲಿ ಸೀಳು(tear) ಉಂಟಾಗಿದ್ದರೆ ದೀಪಕ್​ ಮುಂದಿನ ಸರಣಿಗಷ್ಟೇ ಅಲ್ಲ, ಇಡೀ ಐಪಿಎಲ್​ ಕೂಡ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್​ ಚಾಹರ್​ರನ್ನು ಬರೋಬ್ಬರಿ 14 ಕೋಟಿ ರೂ. ನೀಡಿ ಖರೀದಿಸಿದೆ. ಒಂದನೇ ವರ್ಗದ ಟಿಯರ್​(ಬಿರುಕು) ಆಗಿದ್ದರೆ ಚೇತಿರಿಸಿಕೊಳ್ಳಲು ಮತ್ತು ಪುನಶ್ಚೇತನಕ್ಕೆ 6 ವಾರಗಳ ಸಮಯ ಬೇಕಾಗಿರುತ್ತದೆ.

ಇದನ್ನೂ ಓದಿ: ವೃದ್ಧಿಮಾನ್​ ಸಹಾಗೆ ಪತ್ರಕರ್ತನಿಂದ ಬೆದರಿಕೆ, ಹೆಸರು ಬಹಿರಂಗಪಡಿಸುವಂತೆ ಬಿಸಿಸಿಐ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.