ETV Bharat / sports

ಕೊಹ್ಲಿ ಪುತ್ರಿಗೆ ಕಿಡಿಗೇಡಿಗಳ ಬೆದರಿಕೆ: ದೆಹಲಿ ಪೊಲೀಸರಿಗೆ ಮಹಿಳಾ ಆಯೋಗದಿಂದ ನೋಟಿಸ್ - ಸ್ವಾತಿ ಮಾಳಿವಾಲ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ದಾಖಲಾಗಿರುವ ಎಫ್​ಐಆರ್​, ಆರೋಪಿಗಳ ಗುರುತು ಮತ್ತು ಬಂಧನದ ಬಗ್ಗೆ ವಿವರ ಹಾಗೂ ತೆಗೆದುಕೊಂಡಿರುವ ಇತರೆ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಮಹಿಳಾ ಆಯೋಗ ಪೊಲೀಸರಿಗೆ ನೋಟಿಸ್​ ನೀಡಿದೆ.

DCW notice to Delhi Police over online threats to Virat Kohli's family
ವಿರಾಟ್​ ಕೊಹ್ಲಿ
author img

By

Published : Nov 2, 2021, 3:18 PM IST

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್​ ಕೊಹ್ಲಿ ಮತ್ತು ಪತ್ನಿ, ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಅವರ ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ದುಷ್ಕರ್ಮಿಗಳು ಬೆದರಿಕೆ ಹಾಕಿರುವ ಪ್ರಕರಣದಲ್ಲಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ದೆಹಲಿ ಮಹಿಳಾ ಆಯೋಗ ಮಂಗಳವಾರ ದೆಹಲಿ ಪೊಲೀಸರಿಗೆ ನೋಟಿಸ್​ ನೀಡಿದೆ.

ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋಲು ಕಂಡಿದ್ದಕ್ಕೆ ಹಾಗೂ ಮೊಹಮ್ಮದ್​ ಶಮಿ ವಿರುದ್ಧ ಧರ್ಮದ ಆಧಾರದ ಮೇಲೆ ಟೀಕಿಸುವವರ ವಿರುದ್ಧ ಕೊಹ್ಲಿ ಮಾತನಾಡಿದ್ದಕ್ಕೆ ಅವರ ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಬೆದರಿಕೆ ಹಾಕಿದ್ದರು. 9 ತಿಂಗಳ ಮುಗ್ಧ ಮಗುವಿಗೆ ಬೆದರಿಯೊಡ್ಡಿರುವುದು ಅವಮಾನಕರ ಸಂಗತಿ ಎಂದಿರುವ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಳಿವಾಲ್, ಟ್ವೀಟ್ ಮೂಲಕ ದೆಹಲಿ ಪೊಲೀಸರಿಗೆ ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಕೈಗೊಂಡಿರುವ ತನಿಖೆಯ ಮಾಹಿತಿಯನ್ನು ಹಂಚಿಕೊಳ್ಳುವಂತೆ ಸೂಚಿಸಿದ್ದಾರೆ.

"ಭಾರತ ತಂಡ ಸಾವಿರಾರು ಬಾರಿ ದೇಶ ಹೆಮ್ಮೆಪಡುವಂತೆ ಮಾಡಿದೆ. ಆದರೆ ಕೇವಲ ಒಂದು ಸೋಲಿಗೆ ಇಂತಹ ಮೂರ್ಖತನದ ಪ್ರದರ್ಶನವೇಕೆ?" ಎಂದು ಸ್ವಾತಿ ಮಾಳಿವಾಲ್ ಖಾರವಾಗಿ ಪ್ರಶ್ನಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ದಾಖಲಾಗಿರುವ ಎಫ್​ಐಆರ್​, ಆರೋಪಿಗಳ ಗುರುತು ಮತ್ತು ಬಂಧನದ ಬಗೆಗಿನ ವಿವರ ಹಾಗೂ ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಮಹಿಳಾ ಆಯೋಗ ಪೊಲೀಸರಿಗೆ ನೀಡಿರುವ ನೋಟಿಸ್​ನಲ್ಲಿ ತಿಳಿಸಿದೆ.

"ಒಂದು ವೇಳೆ ಯಾವುದೇ ಆರೋಪಿಯನ್ನು ಬಂಧಿಸದಿದ್ದರೆ, ಆರೋಪಿಗಳನ್ನು ಬಂಧಿಸಲು ದೆಹಲಿ ಪೊಲೀಸರು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ನವೆಂಬರ್ 8ರೊಳಗೆ ವಿವರಿಸಬೇಕು" ಎಂದು ಆಯೋಗ ತಾಕೀತು ಮಾಡಿದೆ.

ಇದನ್ನೂ ಓದಿ: ಕೊಹ್ಲಿ ಕುಟುಂಬಕ್ಕೆ ಬೆದರಿಕೆ ಹಾಕಿರುವ ಸುದ್ದಿ ಕೇಳಿ ತುಂಬಾ ನೋವುಂಟಾಗಿದೆ: ಇಂಜಮಾಮ್-ಉಲ್‌-ಹಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.