ಬೆಂಗಳೂರು: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನದಿಂದ ಸೋಲನುಭವಿಸಿದ ಆಸ್ಟ್ರೇಲಿಯಾ ತಂಡ ಇಲ್ಲಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಶುಕ್ರವಾರ ಪಾಕಿಸ್ತಾನದ ವಿರುದ್ಧ ದಾಖಲೆ ಆರಂಭದ ಇನ್ನಿಂಗ್ಸ್ ಆಡಿತು. ಅನುಭವಿ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಹಾಗೂ ಆಸಿಸ್ ಟಿ20 ತಂಡದ ನಾಯಕ ಮಿಚೆಲ್ ಮಾರ್ಷ್ ಅವರು ಪಾಕ್ ಬೌಲರ್‌ಗಳ ಮೇಲೆ ಗದಾಪ್ರಹಾರ ಮಾಡಿದ್ದಲ್ಲದೇ ಏಕದಿನ ವಿಶ್ವಕಪ್ನ ದಾಖಲೆಯ ಆರಂಭಿಕ ಜತೆಯಾಟವಾಡಿದರು.
-
HUNDRED BY THE BIRTHDAY BOY...!!!
— Mufaddal Vohra (@mufaddal_vohra) October 20, 2023 " class="align-text-top noRightClick twitterSection" data="
What a thunderous century by Mitchell Marsh - one of the best knocks of the tournament. Sheer power striking. pic.twitter.com/jGLyERIQ4Z
">HUNDRED BY THE BIRTHDAY BOY...!!!
— Mufaddal Vohra (@mufaddal_vohra) October 20, 2023
What a thunderous century by Mitchell Marsh - one of the best knocks of the tournament. Sheer power striking. pic.twitter.com/jGLyERIQ4ZHUNDRED BY THE BIRTHDAY BOY...!!!
— Mufaddal Vohra (@mufaddal_vohra) October 20, 2023
What a thunderous century by Mitchell Marsh - one of the best knocks of the tournament. Sheer power striking. pic.twitter.com/jGLyERIQ4Z
ಆಸಿಸ್ಗೆ ಬೃಹತ್ ಆರಂಭಿಕ ಜತೆಯಾಟ: ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಶತಕ ಗಳಿಸುವ ಮೂಲಕ ಪಾಕಿಸ್ತಾನದ ವಿರುದ್ಧ 250ಕ್ಕೂ ಹೆಚ್ಚಿನ ಪಾಲುದಾರಿಕೆ ಮಾಡಿದರು. ಆಸ್ಟ್ರೇಲಿಯಾ ತಂಡದ ಪರ ಅತಿ ದೊಡ್ಡ ವಿಶ್ವಕಪ್ ಆರಂಭಿಕ ಜತೆಯಾಟ ಇದಾಗಿದೆ. ಇದಕ್ಕೂ ಮೊದಲು 2011ರ ವಿಶ್ವಕಪ್ನಲ್ಲಿ ಇದೇ ಮೈದಾನದಲ್ಲಿ ಕಾಂಗರೂ ಪಡೆಯ ಬ್ರಾಡ್ ಹಡಿನ್ ಮತ್ತು ಶೇನ್ ವ್ಯಾಟ್ಸನ್ ಅವರ 183 ರನ್‌ಗಳ ಜತೆಯಾಟವಾಡಿದ್ದರು. 121 ರನ್ ಗಳಿಸಿ ಆಡುತ್ತಿದ್ದ ಮಾರ್ಷ್ ಅವರ ವಿಕೆಟ್ ಪತನದೊಂದಿಗೆ 259 ರನ್ಗಳೊಂದಿಗೆ ಈ ಜೊತೆಯಾಟ ಅಂತ್ಯವಾಯಿತು. ಆಸ್ಟ್ರೇಲಿಯಾ ಇದು ವಿಶ್ವಕಪ್ನ ಬೃಹತ್ ಆರಂಭಿಕ ಜತೆಯಾಟವೂ ಹೌದು.
ಜನ್ಮದಿನದಂದೇ ಶತಕ ಬಾರಿಸಿದ ಮಾರ್ಷ್!: ವಿಶ್ವಕಪ್ ಪಂದ್ಯಗಳನ್ನು ಆಡುವುದೇ ವಿಶೇಷ. ಅದರಲ್ಲೂ ಜನ್ಮದಿನದಂದು ಶತಕ ದಾಖಲಿಸಿದರೆ ಇದು ಇನ್ನಷ್ಟು ಸ್ಮರಣೀಯ ಆಗುವುದರಲ್ಲಿ ಅನುಮಾನವೇ ಇಲ್ಲ. ಮಿಚೆಲ್ ಮಾರ್ಷ್ ಶತಕ ಗಳಿಸುವ ಮೂಲಕ ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿದ 6ನೇ ವ್ಯಕ್ತಿಯಾದರು. 2011ರ ವಿಶ್ವಕಪ್ ನಂತರ ಇದು ಮೊದಲ ಬಾರಿಗೆ ಜರುಗಿದೆ. 2011 ವಿಶ್ವಕಪ್ನಲ್ಲಿ ರಾಸ್ ಟೇಲರ್ ತಮ್ಮ ಜನ್ಮದಿನದಂದೇ ಶತಕ ಸಿಡಿಸಿದ್ದರು.
ವಿಶ್ವಕಪ್ನ 2ನೇ ಬೃಹತ್ ಆರಂಭಿಕ ಜತೆಯಾಟ: 2011ರ ವಿಶ್ವಕಪ್ನಲ್ಲಿ ಉಪುಲ್ ತರಂಗ ಮತ್ತು ತಿಲಕರತ್ನ ದಿಲ್ಶನ್ 282 ರನ್ ಆರಂಭಿಕ ಜತೆಯಾಟ ಮಾಡಿದ್ದರು. ಇದು ವಿಶ್ವಕಪ್ನಲ್ಲಿ ಮೊದಲ ವಿಕೆಟ್ನ ದೊಡ್ಡ ಪಾಲುದಾರಿಕೆಯಾಗಿದೆ. ಇಂದು ವಾರ್ನರ್ ಮತ್ತು ಮಾರ್ಷ್ 259 ರನ್‌ಗಳ ಜತೆಯಾಟವಾಡಿದ್ದು, ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡರು. ಎಲ್ಲಾ ವಿಕೆಟ್ಗೆ ಹೋಲಿಸಿದರೆ ಇದು ಆರನೇ ಬೃಹತ್ ಜತೆಯಾಟವಾಗಿದೆ.
ವಿಶ್ವಕಪ್ನಲ್ಲಿ ಅತಿ ಹೆಚ್ಚು ಶತಕ: ವಾರ್ನರ್ ವಿಶ್ವಕಪ್ನಲ್ಲಿ ತಮ್ಮ 5ನೇ ಶತಕ ದಾಖಲಿಸಿದರು. ಈ ಶತಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (7), ಸಚಿನ್ ತೆಂಡೂಲ್ಕರ್ (6), ರಿಕ್ಕಿ ಪಾಂಟಿಂಗ್ (5), ಕುಮಾರ್ ಸಂಗಕ್ಕಾರ (5) ನಂತರದ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಹಾರ್ದಿಕ್ ಅಲಭ್ಯ: ರೇಸ್‌ನಲ್ಲಿ ಶಮಿ, ಸೂರ್ಯ, ಕಿಶನ್; ಯಾರಿಗೆ ಸಿಗಲಿದೆ ಅವಕಾಶ?