ಸೇಂಟ್ ಲೂಸಿಯಾ : ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡೇರನ್ ಸಮಿ ಅವರನ್ನು ಮುಂದಿನ 2 ವರ್ಷಗಳ ಕಾಲ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಗುರುವಾರ CWI ಘೋಷಿಸಿದೆ. ಇದಕ್ಕೆ ಮಂಡಳಿಯ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿದ್ದಾರೆಂದು ತಿಳಿಸಿದೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ನಿರ್ದೇಶಕನಾಗಿ ಸೇವೆ ಸಲ್ಲಿಸಲ್ಲಿಸಲು ನನಗೆ ಸಿಕ್ಕಿರುವ ಅದ್ಭುತ ಅವಕಾಶ. ಈ ಹೊಸ ದಾರಿಯಲ್ಲಿ ನಾನು ವಿಂಡೀಸ್ ಕ್ರಿಕೆಟ್ಗೆ ನನ್ನ ಕೈಲಾದಷ್ಟು ಅತ್ಯುತ್ತಮವಾದುದ್ದನ್ನು ನೀಡಲು ಶ್ರಮಿಸುತ್ತೇನೆ ಎಂದು CWI ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸಮಿ ತಿಳಿಸಿದ್ದಾರೆ.
-
Daren Sammy was been appointed as the newest member of CWI Board of Directors.
— Windies Cricket (@windiescricket) June 22, 2021 " class="align-text-top noRightClick twitterSection" data="
Read More⬇️ https://t.co/uxUuqjli5R
">Daren Sammy was been appointed as the newest member of CWI Board of Directors.
— Windies Cricket (@windiescricket) June 22, 2021
Read More⬇️ https://t.co/uxUuqjli5RDaren Sammy was been appointed as the newest member of CWI Board of Directors.
— Windies Cricket (@windiescricket) June 22, 2021
Read More⬇️ https://t.co/uxUuqjli5R
ಈ ಸಂದರ್ಭದಲ್ಲಿ ನನ್ನ ಸ್ಥಳೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಅನುಭವ ವೆಸ್ಟ್ ಇಂಡೀಸ್ ಕ್ರಿಕೆಟ್ನಲ್ಲಿ ಗಮನಾರ್ಹ ಪರಿಣಾಮ ಬೀರಲು ನನ್ನನ್ನು ಸಿದ್ಧಪಡಿಸಿದೆ. ಇಲ್ಲಿ ಸೇವೆ ಸಲ್ಲಿಸಲು ನಾನು ಉತ್ಸುಕನಾಗಿದ್ದೇನೆ ಮತ್ತು ನಾನು ತುಂಬಾ ಪ್ರೀತಿಸುವ ಕ್ರೀಡೆಯಲ್ಲಿ ಮತ್ತೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಧನ್ಯವಾದಗಳು ಎಂದು ಸಮಿ ಹೇಳಿದ್ದಾರೆ.
ಡೆಸ್ಟ್ ಇಂಡೀಸ್ ಪರ ಸಮಿ, 38 ಟೆಸ್ಟ್, 126 ಏಕದಿನ ಮತ್ತು 68 ಟಿ20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ನಲ್ಲಿ 84 ವಿಕೆಟ್ ಮತ್ತು 1323 ರನ್, ಏಕದಿನದಲ್ಲಿ 1871 ರನ್ ಮತ್ತು 81 ವಿಕೆಟ್ ಹಾಗೂ ಟಿ20ಯಲ್ಲಿ 587 ರನ್ ಮತ್ತು 1116 ರನ್ ಸಿಡಿಸಿದ್ದಾರೆ. ಇವರು 2012 ಮತ್ತು 2016ರ ಟಿ20 ವಿಶ್ವಕಪ್ ಗೆದ್ದ ವಿಂಡೀಸ್ ತಂಡದ ನಾಯಕರಾಗಿದ್ದರು.
ಇದನ್ನು ಓದಿ : ICC Test Rankings : ರವೀಂದ್ರ ಜಡೇಜಾಗೆ ನಂಬರ್ 1 ಆಲ್ರೌಂಡರ್ ಪಟ್ಟ