ETV Bharat / sports

Daniel Vettori: ಲಾರಾ ಕೈ ಬಿಟ್ಟ ಸನ್‌ರೈಸರ್ಸ್ ಹೈದರಾಬಾದ್‌​; ಡೇನಿಯಲ್ ವೆಟ್ಟೋರಿ ಹೊಸ ಕೋಚ್​​ - ETV Bharath Kannada news

Sunrisers Hyderabad: ಸನ್‌ರೈಸರ್ಸ್​ ಹೈದರಾಬಾದ್​ ತನ್ನ ಮುಖ್ಯ ಕೋಚ್​ ಹುದ್ದೆಗೆ ನ್ಯೂಜಿಲೆಂಡ್‌​ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಅವರನ್ನು ನೇಮಿಸಿದೆ.

Daniel Vettori appointed head coach of Sunrisers Hyderabad

author img

By

Published : Aug 7, 2023, 5:43 PM IST

ಹೈದರಾಬಾದ್​: ಸನ್‌ರೈಸರ್ಸ್​ ಹೈದರಾಬಾದ್ (ಎಸ್​ಆರ್​ಎಚ್​​)​ ತಂಡ 2023ರ 16ನೇ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. ತಂಡ ಇಡೀ ಲೀಗ್​ನಲ್ಲಿ ಗೆದ್ದಿದ್ದು ಕೇವಲ ನಾಲ್ಕು ಪಂದ್ಯ ಮಾತ್ರ. ಕಳೆದ ವರ್ಷ ವೆಸ್ಟ್​ ಇಂಡೀಸ್​ ದಿಗ್ಗಜ ಬ್ಯಾಟರ್​ ಬ್ರಿಯಾನ್​ ಲಾರಾ ಅವರನ್ನು ಕೋಚ್ ಆಗಿ ಹೈದರಾಬಾದ್​ ನೇಮಿಸಿಕೊಂಡಿತ್ತು. ಈ ವರ್ಷ ಅವರನ್ನು ಕೈ ಬಿಟ್ಟು ನ್ಯೂಜಿಲೆಂಡ್​ನ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಅವರಿಗೆ ಮಣೆ ಹಾಕಿದೆ.

ವೆಟ್ಟೋರಿ ಅವರನ್ನು ಪ್ರಮುಖ ಕೋಚ್ ಆಗಿ ನೇಮಿಸಿಕೊಂಡಿರುವುದರ ಬಗ್ಗೆ ಸನ್‌ರೈಸರ್ಸ್​ ಹೈದರಾಬಾದ್​ ಟ್ವಿಟರ್​ ಹ್ಯಾಂಡಲ್​ನಲ್ಲಿ ಟ್ವೀಟ್​ ಮಾಡಿದೆ. 2014 ರಿಂದ 2018 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತರಬೇತುದಾರರಾಗಿದ್ದ ವೆಟ್ಟೋರಿ, ಐಪಿಎಲ್‌ನಲ್ಲಿ ಇದೀಗ ಎರಡನೇ ಕೋಚಿಂಗ್ ಹುದ್ದೆ ಅಲಂಕರಿಸುತ್ತಿದ್ದಾರೆ.

ವೆಟ್ಟೋರಿ ಎಸ್​ಆರ್​ಎಚ್​ನ ನಾಲ್ಕನೇ ಕೋಚ್​ ಆಗಿದ್ದಾರೆ. ಈ ಹಿಂದೆ ಹೈದರಾಬಾದ್​ ತಂಡದಲ್ಲಿ 2013-2019 ಮತ್ತು 2022ರಲ್ಲಿ ಟಾಮ್ ಮೂಡಿ, 2020-2021ರಲ್ಲಿ ಟ್ರೆವರ್ ಬೇಲಿಸ್ ಮತ್ತು 2023ರಲ್ಲಿ ಲಾರಾ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು. ಟಾಮ್​ ಮೂಡಿ ಕೋಚ್​ ಆಗಿದ್ದಾಗ 2016 ರಲ್ಲಿ ಹೈದರಾಬಾದ್​ ಚಾಂಪಿಯನ್​ ಆಗಿತ್ತು. ನಂತರ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಲೀಗ್​ ಹಂತದಲ್ಲೇ ತಂಡ ಹೊರಗುಳಿಯುತ್ತಿದ್ದು, ಅಂಕಪಟ್ಟಿಯ ಟಾಪ್​ ನಾಲ್ಕರ ಸ್ಥಾನ ಗಿಟ್ಟಿಸಲು ಹೆಣಗಾಡುತ್ತಿದೆ.

ಡೇನಿಯಲ್​ ವೆಟ್ಟೋರಿಗೆ ಕೋಚಿಂಗ್‌ನಲ್ಲಿ ಅಪಾರ​ ಅನುಭವವಿದೆ. ಇವರು 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ತಾವು ಆಡಿದ್ದ ಐಪಿಎಲ್​ ತಂಡ ಆರ್​ಸಿಬಿಯಲ್ಲಿ ಐದು ವರ್ಷಗಳ ಕಾಲ ಕೋಚಿಂಗ್ ಕೆಲಸ​ ನಿಭಾಯಿಸಿದ್ದಾರೆ. ಬಾಂಗ್ಲಾದೇಶ ರಾಷ್ಟ್ರೀಯ ತಂಡಕ್ಕೆ ಸ್ಪಿನ್ ಬೌಲಿಂಗ್ ತರಬೇತುದಾರರಾಗಿದ್ದರು. 2021ರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸ್ ಬಾರ್ಬಡೋಸ್ ರಾಯಲ್ಸ್‌ನ ಮುಖ್ಯ ಕೋಚ್ ಆಗಿದ್ದರು. ಆಸ್ಟ್ರೇಲಿಯಾದ ಸಹಾಯಕ ಮತ್ತು ಸ್ಪಿನ್ ಬೌಲಿಂಗ್ ತರಬೇತುದಾರರಾಗಿ ನಾಥನ್ ಲಯಾನ್ ಮತ್ತು ಟಾಡ್ ಮರ್ಫಿ ಅವರಿಗೆ ಕೋಚಿಂಗ್​ ಮಾಡಿದ್ದಾರೆ. ಮರ್ಫಿ ಭಾರತದ ವಿರುದ್ಧ ಚೊಚ್ಚಲ ಟೆಸ್ಟ್‌ನಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದಾರೆ.

ಡೇನಿಯಲ್ ವೆಟ್ಟೋರಿ 18ನೇ ವಯಸ್ಸಿನಲ್ಲಿ ನ್ಯೂಜಿಲೆಂಡ್ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ದೇಶವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಪುರುಷ ಆಟಗಾರ ಎಂಬ ಖ್ಯಾತಿ ಪಡೆದಿದ್ದರು. ಎಡಗೈ ಸ್ಪಿನ್ನರ್ ವೆಟ್ಟೋರಿ 300 ಟೆಸ್ಟ್ ವಿಕೆಟ್‌ ಮತ್ತು 3000 ರನ್‌ ಗಳಿಸಿದ್ದು, ಉತ್ತಮ ಆಲ್​ರೌಂಡರ್​ ಸ್ಥಾನ ನಿರ್ವಹಿಸಿದವರು.

ಇದನ್ನೂ ಓದಿ: IPL 2024: ಆರ್​ಸಿಬಿಗೆ ಮುಖ್ಯಕೋಚ್​ ಆಗಿ ಬಂದ ಆಂಡಿ ಫ್ಲವರ್, ಮೈಕ್ ಹೆಸ್ಸನ್ ಜಾಗಕ್ಕೆ ಯಾರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.