ನವದೆಹಲಿ: ಭಾರತದಲ್ಲಿ ಕೊರೊನಾರ್ಭಟ ಮಿತಿ ಮೀರಿದ್ದು, ಆಮ್ಲಜನಕ ಕೊರೆತೆಯಿಂದ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಇಲ್ಲಿನ ಸ್ಥಿತಿ ಕಂಡು ದೇಶಿ, ವಿದೇಶಿ ಕ್ರಿಕೆಟಿಗರು ಮರುಕ ವ್ಯಕ್ತಪಡಿಸಿ ಆಮ್ಲಜನಕ ಕೊರತೆಯನ್ನು ನೀಗಿಸಲು ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿದ್ದಾರೆ.
ಐಪಿಎಲ್ನಲ್ಲಿ ಕೆಕೆಆರ್ ಪರ ಆಡುವ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಇತ್ತೀಚೆಗೆ ಭಾರತದ ಕೊರೊನಾ ರೋಗಿಗಳಿಗೆ ಆಮ್ಲಜನಕ ವ್ಯವಸ್ಥೆ ಕಲ್ಪಿಸಲು 50,000 ಡಾಲರ್(37 ಲಕ್ಷ ರೂ.) ಹಣವನ್ನು ಪಿಎಂ ಕೇರ್ಸ್ ಫಂಡ್ಗೆ ದೇಣಿಗೆ ನೀಡುವುದಾಗಿ ಘೋಷಿಸಿದ್ದರು.
-
Terrific work @CricketAus
— Pat Cummins (@patcummins30) May 3, 2021 " class="align-text-top noRightClick twitterSection" data="
FYI I ended up allocating my donation to UNICEF Australia's India COVID-19 Crisis Appeal.
If you're able to, please join many others in supporting this here https://t.co/SUvGjlGRm8 https://t.co/1c0NE9PFdO
">Terrific work @CricketAus
— Pat Cummins (@patcummins30) May 3, 2021
FYI I ended up allocating my donation to UNICEF Australia's India COVID-19 Crisis Appeal.
If you're able to, please join many others in supporting this here https://t.co/SUvGjlGRm8 https://t.co/1c0NE9PFdOTerrific work @CricketAus
— Pat Cummins (@patcummins30) May 3, 2021
FYI I ended up allocating my donation to UNICEF Australia's India COVID-19 Crisis Appeal.
If you're able to, please join many others in supporting this here https://t.co/SUvGjlGRm8 https://t.co/1c0NE9PFdO
ಆದರೆ ಇದೀಗ ಅವರು ತಮ್ಮ ಹಣವನ್ನು ಪಿಎಂ ಕೇರ್ಸ್ ಫಂಡ್ ಬದಲಿಗೆ ಯುನಿಸೆಫ್ ಆಸ್ಟ್ರೇಲಿಯಾದ ಇಂಡಿಯಾ ಕೋವಿಡ್ -19 ಕ್ರೈಸಿಸ್ ಅಪೀಲ್‌ಗೆ ನೀಡುವ ನಿರ್ಧಾರ ಮಾಡಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಭಾರತಕ್ಕೆ ಈ ಆಯ್ಕೆಯ ಮೂಲಕ ದೇಣಿಗೆ ನೀಡಿದ ನಂತರ ಕಮ್ಮಿನ್ಸ್ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
" ಕ್ರಿಕೆಟ್ ಆಸ್ಟ್ರೇಲಿಯಾ ಅದ್ಭುತ ಕೆಲಸ ಮಾಡಿದೆ. ನಾನು ಕೂಡ ದೇಣಿಗೆಯನ್ನು ಯುನಿಸೆಫ್ ಆಸ್ಟ್ರೇಲಿಯಾದ ಇಂಡಿಯಾ ಕೋವಿಡ್ -19 ಕ್ರೈಸಿಸ್ ಅಪೀಲ್‌ಗೆ ವರ್ಗಾವಣೆ ಮಾಡುತ್ತೇನೆ. ನಿಮಗೂ ಸಾಧ್ಯವಾದರೆ, ದಯವಿಟ್ಟು ಯುನಿಸೆಫ್ ಆಸ್ಟ್ರೇಲಿಯಾವನ್ನು ಬೆಂಬಲಿಸಿ" ಎಂದು ಕಮ್ಮಿನ್ಸ್ ಟ್ವೀಟ್ ಮಾಡಿದ್ದಾರೆ.
ಸೋಮವಾರ ಕ್ರಿಕೆಟ್ ಆಸ್ಟ್ರೇಲಿಯಾ, ಆಸ್ಟ್ರೇಲಿಯಾ ಕ್ರಿಕೆಟರ್ಸ್ ಆಸೋಸಿಯೇಷನ್ ಮತ್ತು ಯುನಿಸೆಫ್ ಆಸ್ಟ್ರೇಲಿಯಾ ಜೊತೆಗೂಡಿ ಭಾರತದಲ್ಲಿ ಕೋವಿಡ್ ಹೋರಾಟಕ್ಕೆ ದೇಣಿಗೆ ಸಂಗ್ರಹಿಸುವ ನಿರ್ಧಾರ ಮಾಡಿತ್ತು. ಅಲ್ಲದೆ ಸ್ವತಃ 50 ಸಾವಿರ ಡಾಲರ್ ದೇಣಿಗೆ ನೀಡಿ, ದೇಣಿಗೆ ಕೊಡುವಂತೆ ಆಸ್ಟ್ರೇಲಿಯನ್ನರಿಗೂ ಮನವಿ ಮಾಡಿತ್ತು.
ಇದನ್ನು ಓದಿ: ಕ್ರಿಕೆಟಿಗರಲ್ಲಿ ಹೆಚ್ಚಿದ ಕೋವಿಡ್ ಸೋಂಕು ಪ್ರಕರಣ: ಐಪಿಎಲ್ ಟೂರ್ನಿ ಮುಂದೂಡಿದ ಬಿಸಿಸಿಐ