ಜೋಹಾನ್ಸ್ಬರ್ಗ್(ದಕ್ಷಿಣ ಆಫ್ರಿಕಾ): ಮುಂದಿನ ವರ್ಷದ ಜನವರಿ ತಿಂಗಳಲ್ಲಿ ದ.ಆಫ್ರಿಕಾದಲ್ಲಿ ಚೊಚ್ಚಲ ಟಿ20 ಕ್ರಿಕೆಟ್ ಲೀಗ್ ನಡೆಯಲಿದ್ದು ಒಟ್ಟು 6 ತಂಡಗಳು ಸೆಣಸಾಟ ನಡೆಸಲಿವೆ. ಎಲ್ಲ ತಂಡಗಳನ್ನು ಖರೀದಿಸುವಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಫ್ರಾಂಚೈಸಿಗಳು ಯಶಸ್ವಿಯಾಗಿದ್ದು, ಆಟಗಾರರ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.
ಟಿ20 ಲೀಗ್ನಲ್ಲಿ ಪ್ರತಿ ಫ್ರಾಂಚೈಸಿ ಗರಿಷ್ಠ ಐವರು ಪ್ಲೇಯರ್ಸ್ ಆಯ್ಕೆ ಮಾಡುವ ಅವಕಾಶವಿದೆ. ಈ ಆಯ್ಕೆಯ ಬಳಿಕ ಉಳಿದ ಆಟಗಾರರನ್ನು ಹರಾಜಿನ ಮೂಲಕ ಖರೀದಿಸಲಾಗುತ್ತದೆ. ಪ್ರತಿ ತಂಡ ದಕ್ಷಿಣ ಆಫ್ರಿಕಾದ 10 ಮತ್ತು ವಿದೇಶಿ 7 ಆಟಗಾರರ ಖರೀದಿಸಬಹುದು. ಪ್ಲೇಯಿಂಗ್ 11ನಲ್ಲಿ ದಕ್ಷಿಣ ಆಫ್ರಿಕಾದ 7 ಹಾಗೂ ವಿದೇಶದ 4 ಆಟಗಾರರು ಕಣಕ್ಕಿಳಿಯಲಿದ್ದಾರೆ.
-
Our #OneFamily bond, 𝗗ou𝗕le as strong now! Welcome to @MICapetown, @BrevisDewald 💙
— Mumbai Indians (@mipaltan) August 11, 2022 " class="align-text-top noRightClick twitterSection" data="
🗞️ Read more: https://t.co/ZUDvQqB1DM#MIcapetown @OfficialCSA pic.twitter.com/ShE5wkLvnO
">Our #OneFamily bond, 𝗗ou𝗕le as strong now! Welcome to @MICapetown, @BrevisDewald 💙
— Mumbai Indians (@mipaltan) August 11, 2022
🗞️ Read more: https://t.co/ZUDvQqB1DM#MIcapetown @OfficialCSA pic.twitter.com/ShE5wkLvnOOur #OneFamily bond, 𝗗ou𝗕le as strong now! Welcome to @MICapetown, @BrevisDewald 💙
— Mumbai Indians (@mipaltan) August 11, 2022
🗞️ Read more: https://t.co/ZUDvQqB1DM#MIcapetown @OfficialCSA pic.twitter.com/ShE5wkLvnO
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದೆ. ಜೋಹಾನ್ಸ್ಬರ್ಗ್ ತಂಡದ ಪರ ಅವರು ಆಡಲಿದ್ದಾರೆ. ಡುಪ್ಲೆಸಿಸ್ ಈ ಹಿಂದೆ ಚೆನ್ನೈ ತಂಡದ ಪರ ಬ್ಯಾಟ್ ಬೀಸಿದ್ದರು. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಫ್ಘಾನಿಸ್ತಾನದ ರಶೀದ್ ಖಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಕಗಿಸೊ ರಬಾಡ ಮತ್ತು ಸ್ಯಾಮ್ ಕರ್ರನ್ ಜೊತೆಗೆ ಬೇಬಿ ಎಬಿಡಿ ಖ್ಯಾತಿಯ ಬ್ರೇವಿಸ್ ಸಹ ಆಯ್ಕೆಯಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಎನ್ರಿಕ್ ನೋರ್ಕಿಯಾ, ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಏಡನ್ ಮಾರ್ಕ್ರಮ್ ಅವರಿಗೆ ಮಣೆ ಹಾಕಿದೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಜೋಸ್ ಬಟ್ಲರ್, ಲಕ್ನೋ ಸೂಪರ್‌ಜೈಂಟ್ಸ್ ಫ್ರಾಂಚೈಸಿಯು ಕ್ವಿಂಟನ್ ಡಿಕಾಕ್ ಅವರನ್ನು ಆಯ್ಕೆ ಮಾಡಿದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಚೊಚ್ಚಲ ಟಿ -20 ಲೀಗ್... ಎಲ್ಲ ಆರು ತಂಡ ಖರೀದಿ ಮಾಡಿದ ಐಪಿಎಲ್ ಫ್ರಾಂಚೈಸಿ!
ದಕ್ಷಿಣ ಆಫ್ರಿಕಾ ಚೊಚ್ಚಲ ಟಿ20 ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಕೇಪ್ ಟೌನ್ ಫ್ರಾಂಚೈಸಿ ಖರೀದಿಸಿದ್ದು, ಸನ್‌ರೈಸರ್ಸ್ ಹೈದರಾಬಾದ್ ಎಲಿಜಬೆತ್ ತಂಡ, ಲಖನೌ ಸೂಪರ್ ಜೈಂಟ್ಸ್ ಡರ್ಬನ್ ತಂಡ, ರಾಜಸ್ಥಾನ ರಾಯಲ್ಸ್ ಪಾರ್ಲ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ಪ್ರಿಟೋರಿಯಾ ತಂಡವನ್ನು ಖರೀದಿ ಮಾಡಿದೆ. ವಿಶೇಷವೆಂದರೆ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯಾವುದೇ ತಂಡವನ್ನ ಖರೀದಿಸಿಲ್ಲ.