ಲಂಡನ್ : ಆಸ್ಟ್ರೇಲಿಯಾ ಪ್ರವಾಸದಿಂದ ಚೇತೇಶ್ವರ್ ಪೂಜಾರ ಅವರ ಆಟ ಬಹಳ ಟೀಕೆಗೆ ಒಳಗಾಗುತ್ತಿದೆ. ನಿಧಾನಗತಿಯ ಬ್ಯಾಟಿಂಗ್ ವಿರುದ್ಧ ಕೆಲವು ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಟೀಂ ಇಂಡಿಯಾ ನಾಯಕ ಕೊಹ್ಲಿ ಮತ್ತೊಮ್ಮೆ ಪೂಜಾರ ಬೆನ್ನಿಗೆ ನಿಂತಿದ್ದಾರೆ. ಪೂಜಾರ ವಿರುದ್ಧದ ಟೀಕೆ ಅನಗತ್ಯ. ಸೌರಾಷ್ಟ್ರ ಬ್ಯಾಟ್ಸ್ಮನ್ ಮತ್ತೆ ಕಮ್ಬ್ಯಾಕ್ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚೇತೇಶ್ವರ್ ಪೂಜಾರ 86 ಇನ್ನಿಂಗ್ಸ್ಗಳಲ್ಲಿ 6,267 ರನ್ಗಳಿಸುವ ಮೂಲಕ ಪ್ರಸ್ತುತ ಭಾರತದಲ್ಲಿ ಸಕ್ರಿಯ ಕ್ರಿಕೆಟಿಗರಲ್ಲಿ ಹೆಚ್ಚು ರನ್ಗಳಿಸಿರುವ ಆಟಗಾರರಲ್ಲಿ 2ನೇಯವರಾಗಿದ್ದಾರೆ. ವಿರಾಟ್ ಕೊಹ್ಲಿ ಬಿಟ್ಟರೆ 6000ಕ್ಕೂ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಆಗಿದ್ದಾರೆ.
"ಈ ರೀತಿಯ ಟೀಕೆ ಸ್ವಲ್ಪ ಸಮಯದಿಂದ ನಡೆಯುತ್ತಲೇ ಇದೆ. ಸಾಮರ್ಥ್ಯ ಮತ್ತು ಅನುಭವ ಇರುವ ಆಟಗಾರನನ್ನು ಏಕಾಂಗಿಯಾಗಿ ಬಿಡಬೇಕು. ನನ್ನ ಮತ್ತು ತಂಡದ ಇತರ ಯಾವುದೇ ಆಟಗಾರನಂತೆಯೇ ಅವರ ಆಟದಲ್ಲಿ ಇರುವ ಯಾವುದೇ ನ್ಯೂನತೆಗಳ ಬಗ್ಗೆ ಕೆಲಸ ಮಾಡಲು ಅವರನ್ನು ಬಿಡಬೇಕು"ಎಂದು ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಹೇಳಿದ್ದಾರೆ.
ನನ್ನ ಪ್ರಕಾರ ಹೊರಗಿನ ಟೀಕೆಗಳು ಅನಗತ್ಯವಾಗಿದೆ, ಇವುಗಳ ಬಗ್ಗೆ ಪೂಜಾರ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಜನರು ತಮಗೆ ಏನು ಬೇಕೋ ಅದನ್ನು ಮಾತನಾಡಲಿ. ಆದ್ರೆ, ಕೊನೆಯಲ್ಲಿ ಅವೆಲ್ಲವೂ ಕೇವಲ ಮಾತುಗಳಾಗಿಯೇ ಉಳಿಯುತ್ತವೆ. ಅದರಿಂದ ಪರಿಣಾಮವೇನಿಲ್ಲ ಎಂದು ಸಹ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ.
ಇದನ್ನು ಓದಿ:ಆಂಗ್ಲೋ - ಇಂಡಿಯಾ ಕದನ: ಸಚಿನ್, ದ್ರಾವಿಡ್ರ ಈ ಎಲ್ಲ ದಾಖಲೆಗಳನ್ನು ಬ್ರೇಕ್ ಮಾಡಲಿರುವ ಕಿಂಗ್ ಕೊಹ್ಲಿ