ETV Bharat / sports

ಕನ್ನಡಿಗ ಮನೀಶ್‌ ಪಾಂಡೆ @ 32...ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರಿಕೆಟಿಗ - ಮನೀಶ್​ ಪಾಂಡೆ ಜನ್ಮದಿನ

2019ರ ಡಿ. 2ರಂದು ಮನೀಶ್‌​ ಪಾಂಡೆ ದಕ್ಷಿಣ ಭಾರತದ ಖ್ಯಾತ ನಟಿ ಆಶ್ರಿತಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಇದುವರೆಗೆ 29 ಏಕದಿನ ಹಾಗೂ 39 ಟಿ-20 ಕ್ರಿಕೆಟ್​ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

cricketer-manish-pandey-birthday
ಹುಟ್ಟುಹಬ್ಬದ ಸಂಭ್ರಮದಲ್ಲಿ ಕನ್ನಡಿಗ ಮನೀಶ್‌ ಪಾಂಡೆ
author img

By

Published : Sep 10, 2021, 8:52 AM IST

ಬೆಂಗಳೂರು: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಹೊಂದಿರುವ ಕನ್ನಡಿಗ ಮನೀಶ್‌ ಪಾಂಡೆ ಇಂದು 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಹಾಗೂ ಅಮೋಘ ಫೀಲ್ಡರ್​ ಆಗಿರುವ ಪಾಂಡೆ ಕರ್ನಾಟಕ ರಣಜಿ ತಂಡದ ನಾಯಕನಾಗಿಯೂ ಗಮನ ಸೆಳೆದಿದ್ದಾರೆ. ಮನೀಶ್​​ ಉತ್ತರಾಖಂಡದ ನೈನಿತಾಲ್​ನಲ್ಲಿ ಜನಿಸಿದರೂ ಕರ್ನಾಟಕ ರಣಜಿ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ಪಾಂಡೆ ಅವರ ತಂದೆ ಸೇನಾ ಅಧಿಕಾರಿಯಾಗಿದ್ದು, ಅವರಿಗೆ ಬೆಂಗಳೂರಿಗೆ ವರ್ಗಾವಣೆ ಆದ ಬಳಿಕ ಮನೀಶ್‌ ಕೂಡ ಕರ್ನಾಟಕಕ್ಕೆ ಬಂದಿದ್ದಾರೆ. ನಂತರದ ಅವರಿಗೆ ರಾಜಸ್ಥಾನಕ್ಕೆ ವರ್ಗಾವಣೆ ಆಯಿತಾದರೂ ಪಾಂಡೆ ಬೆಂಗಳೂರಿನಲ್ಲೇ ಉಳಿದಿದ್ದರು. ಬೆಂಗಳೂರಿನಲ್ಲಿ ನೆಲೆಸಿದ್ದರೂ ಅವರು ಮೈಸೂರಿನಲ್ಲಿ ಬಹುಪಾಲು ಕ್ರಿಕೆಟ್‌ ಆಡಿದ್ದಾರೆ. ಅಲ್ಲಿಂದಲೇ 19 ವರ್ಷದೊಳಗಿನವರ ಭಾರತ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿದ್ದರು.

cricketer-manish-pandey-birthday
ನಟಿ ಆಶ್ರಿತಾ ಶೆಟ್ಟಿ ಜೊತೆ ವಿವಾಹ

ಪಾಂಡೆ 2015ರಲ್ಲಿ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದರು. ಹಲವು ಬಾರಿ ಅವಕಾಶ ಸಿಕ್ಕರೂ ಅವರು ಬೆಂಚ್‌ ಕಾಯ್ದಿರುವುದೇ ಜಾಸ್ತಿಯಾಗಿದೆ. ಆಡುವ 11ರ ಬಳಗದಲ್ಲಿ ಪಾಂಡೆಗೆ ಅವಕಾಶ ಸಿಕ್ಕಿರುವುದು ತೀರಾ ಅಪರೂಪವಾಗಿದೆ. 2009ರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಆಡಿದ್ದ ಮನೀಶ್, ಡೆಕ್ಕನ್ ಚಾರ್ಜಸ್ ವಿರುದ್ಧ ಶತಕ (114 ರನ್) ಗಳಿಸಿ ಗಮನ ಸೆಳೆದಿದ್ದರು. ಇದು ಭಾರತೀಯ ಆಟಗಾರನೊಬ್ಬ ಐಪಿಎಲ್​ನಲ್ಲಿ ಬಾರಿಸಿದ ಮೊದಲ ಶತಕವಾಗಿದೆ. ಟಿ - 20 ಕ್ರಿಕೆಟ್​​ನಲ್ಲಿ ಮನೀಶ್ ಪಾಂಡೆ 2 ಶತಕಗಳನ್ನು ಗಳಿಸಿದ್ದಾರೆ.

2019ರ ಡಿ. 2ರಂದು ಮನೀಶ್‌​ ಪಾಂಡೆ ದಕ್ಷಿಣ ಭಾರತದ ಖ್ಯಾತ ನಟಿ ಆಶ್ರಿತಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಇದುವರೆಗೆ 29 ಏಕದಿನ ಹಾಗೂ 39 ಟಿ-20 ಕ್ರಿಕೆಟ್​ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಸದ್ಯ ಐಪಿಎಲ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್​ನಲ್ಲಿರುವ ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಪುಣೆ ವಾರಿಯರ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡಿದ್ದಾರೆ. ಸದ್ಯ ಮುಂದಿನ ತಿಂಗಳು ದುಬೈನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ ಟೂರ್ನಿಗೂ ಕೂಡ ಟೀಂ ಇಂಡಿಯಾದಲ್ಲಿ ಪಾಂಡೆಗೆ ಸ್ಥಾನ ಸಿಕ್ಕಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.