ನವದೆಹಲಿ: ಭಾರತ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್ ಪಾಲ್ ಸಿಂಗ್ ಲಿವರ್ ಕ್ಯಾನ್ಸರ್ನಿಂದ ಗುರುವಾರ ಮೀರತ್ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
63 ವರ್ಷದ ಕಿರಣ್ ಪಾಲ್ ಸಿಂಗ್ 2020ರ ಸೆಪ್ಟೆಂಬರ್ನಲ್ಲಿ ಆನಾರೋಗ್ಯಕ್ಕೆ ತುತ್ತಾಗಿದ್ದರು. ಇದೇ ಕಾರಣದಿಂದ ಭುವಿ ಯುಎಇನಲ್ಲಿ ನಡೆಯುತ್ತಿದ್ದ ಐಪಿಎಲ್ನಿಂದ ಹೊರಬರಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಕಿರಣ್ ಪಾಲ್ ಸಿಂಗ್ ನವದೆಹಲಿಯ ಆಲ್ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಕೀಮೋಥೆರಪಿ ಸೇರಿದಂತೆ ಚಿಕಿತ್ಸೆಗೆ ಒಳಗಾಗಿದ್ದರು. ಇದಕ್ಕೂ ಮುನ್ನ ಕುಟುಂಬ ಇಂಗ್ಲೆಂಡ್ನಲ್ಲಿ ತಜ್ಞರನ್ನು ಸಂಪರ್ಕಿಸಿತ್ತು ಎಂದು ತಿಳಿದು ಬಂದಿದೆ.
ಆದರೆ, ಎರಡು ವಾರಗಳ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಅವರು ಮೀರತ್ನಲ್ಲಿರುವ ಖಾಸಗಿ ಸೌಲಭ್ಯವೊಂದರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಎರಡು ದಿನಗಳ ನಂತರ ಇಹಲೋಕ ತ್ಯಜಿಸಿದ್ದಾರೆ.
ಕಿರಣ್ ಪಾಲ್ ಸಿಂಗ್ ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇದೀಗ ಅವರು ಮಡದಿ ಇಂದ್ರೇಶ್ ದೇವಿ, ಮಕ್ಕಳಾದ ಭುವನೇಶ್ವರ್ ಕುಮಾರ್ ಮತ್ತು ರೇಖಾರನ್ನು ಅಗಲಿದ್ದಾರೆ.
ಇದನ್ನು ಓದಿ:ತಾಯಿ ಕಳೆದುಕೊಂಡ ನೋವಿನಲ್ಲಿರುವ ಮಗಳಿಗೆ ಕೊಹ್ಲಿ ಕಥೆ ಹೇಳಿ ಧೈರ್ಯ ತುಂಬಿದ ಪ್ರಿಯಾ ಪೂನಿಯಾ ತಂದೆ