ಅಹಮದಾಬಾದ್ (ಗುಜರಾತ್): ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಕಳೆದ ಮೂರು ವರ್ಷಗಳಿಂದ ಭಾರತ ತಂಡದ ಪ್ರಮುಖ ಆಟಗಾರ. 29 ವರ್ಷದ ಕ್ರಿಕೆಟಿಗ ತಮ್ಮ ಉತ್ತಮ ಸ್ಪೆಲ್ಗಳಿಂದ ಮತ್ತು ಬ್ಯಾಟಿಂಗ್ನಿಂದ ತಂಡದಲ್ಲಿ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಫ್ಲಾಟ್ ಟ್ರ್ಯಾಕ್‌ಗಳಲ್ಲಿ ಅದ್ಭುತ ಸ್ಪಿನ್ ಬೌಲಿಂಗ್ ಮಾಡುವ ಮೂಲಕ ಹೆಸರು ಮಾಡಿದ್ದಾರೆ.
ಆದರೆ, ಏಷ್ಯಾಕಪ್‌ನ ಸೂಪರ್ 4 ಹಂತದ ಕೊನೆಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಗಾಯಗೊಂಡಿದ್ದರು. ಮೊದಲು ಭಾರತ ಫೀಲ್ಡಿಂಗ್ ಮಾಡಿತು ಈ ವೇಳೆ ಬೌಂಡರಿ ರಕ್ಷಿಸಲು ಹೋಗಿ ನೋವಿಗೆ ತುತ್ತಾಗಿದ್ದರು. ಈ ನೋವು ಲೆಕ್ಕಿಸದೇ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿ 30 ಪ್ಲಸ್ ರನ್ ಗಳಿಸಿದ್ದರು, ಇದರಿಂದ ಅವರ ಗಾಯ ಉಲ್ಬಣವಾಗಿದೆ. ಈ ಗಾಯದಿಂದ ಅಕ್ಷರ್ ಚೇತರಿಸಿಕೊಳ್ಳದ ಕಾರಣ, ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಈ ವಿಶ್ವಕಪ್‌ಗೆ ಪ್ರಕಟವಾಗಿ ಆರಂಭಿಕ 15 ಜನ ಆಟಗಾರರ ಪಟ್ಟಿಯಲ್ಲಿ ಅಕ್ಷರ್ ಸ್ಥಾನ ಪಡೆದುಕೊಂಡಿದ್ದರು. ಭಾರತದಲ್ಲಿ ಆಡಿದ ಕ್ರಿಕೆಟ್ ಪಂದ್ಯಗಳಲ್ಲಿ ಎಡಗೈ ಸ್ಪಿನ್ನರ್ ಉತ್ತಮ ಪ್ರದರ್ಶನ ನೀಡಿದ್ದರು. 54 ಏಕದಿನ ಪಂದ್ಯಗಳನ್ನು ಆಡಿದ ಅವರು 32.24 ರ ಸರಾಸರಿಯಲ್ಲಿ 4.54ರ ಎಕಾನಮಿಯಲ್ಲಿ ಬೌಲ್ ಮಾಡಿ 59 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ 34 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಮಾಡಿರುವ ಅಕ್ಷರ್ ಎರಡು ಅರ್ಧಶತಕ ಸಹಿತ 481 ರನ್ ಕಲೆಹಾಕಿದ್ದಾರೆ. ಅದರಲ್ಲಿ 64 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ.
ಅಕ್ಷರ್ ಪಟೇಲ್ ಅವರ ಸಹೋದರ ಸಂಶಿಪ್ ಪಟೇಲ್ ಈಟಿವಿ ಭಾರತಕ್ಕೆ ಜೊತೆಗೆ ಮಾತನಾಡಿದ್ದು, 2023 ರ ವಿಶ್ವಕಪ್‌ನಲ್ಲಿ ಅಕ್ಷರ್ ಪಟೇಲ್ ಅವರು ಆಲ್ ರೌಂಡರ್ ಎಂದು ಸಾಬೀತುಪಡಿಸಲು ಸುವರ್ಣ ಅವಕಾಶವಾಗಬಹುದಿತ್ತು ಎಂದು ಹೇಳಿದ್ದಾರೆ. ಸಹೋದರ ಏಷ್ಯಾಕಪ್‌ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಏಷ್ಯಾಕಪ್‌ನಲ್ಲಿ ಕಾಲಿಗೆ ಪೆಟ್ಟಾಗಿದ್ದು, ಸದ್ಯ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
"ಅಕ್ಷರ್ 2015ರ ವಿಶ್ವಕಪ್‌ಗೆ ಆಯ್ಕೆಯಾಗಿದ್ದರು. ಆದರೆ ಅವರು ಯಾವುದೇ ಪಂದ್ಯಗಳಲ್ಲಿ ಅವರು ಆಟವಾಡಿರಲಿಲ್ಲ. ಆದರೆ, ಈ ಬಾರಿಯೂ ಅವರು ತಂಡಕ್ಕೆ ಆಯ್ಕೆ ಆಗಿದ್ದರೂ, ಗಾಯದಿಂದಾಗಿ ಈ ಬಾರಿಯ ವಿಶ್ವಕಪ್ನಲ್ಲೂ ಆಡಲು ಸಾಧ್ಯವಾಗುವುದಿಲ್ಲ ಎಂದು ನಾವು ನಿರಾಶೆಗೊಂಡಿದ್ದೇವೆ. ಅವರು ಅಪೇಕ್ಷಿತ ಏಕದಿನಗಳನ್ನು ಆಡುವುದನ್ನು ನೋಡಲು ನಾವು ಉತ್ಸುಕರಾಗಿದ್ದೆವು. ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ನಮಗೆ ಬೇಸರವಾಗಿದೆ. ಅವರು ಶೀಘ್ರದಲ್ಲೇ ಕ್ರಿಕೆಟ್ ಮೈದಾನದಲ್ಲಿ ಪುಟಿದೇಳುವುದನ್ನು ನಾವೆಲ್ಲರೂ ನೋಡಲು ಬಯಸುತ್ತೇವೆ,"ಎಂದು ಸಂಶಿಪ್ ಹೇಳಿದ್ದಾರೆ.
ಇದನ್ನೂ ಓದಿ: Cricket World Cup 2023: ಈ ಅವಕಾಶದ ಬಗ್ಗೆ ಅಚ್ಚರಿ ತಂದಿದೆ.. ಇದು ನನಗೆ ಕೊನೆಯ ವಿಶ್ವಕಪ್ : ರವಿಚಂದ್ರನ್ ಅಶ್ವಿನ್