ETV Bharat / sports

Cricket World Cup: ಇಂದು ಭಾರತ-ಆಸೀಸ್​ ಪಂದ್ಯ... ಬಿಗ್​ ಮ್ಯಾಚ್​ಗೆ ಚೆಪಾಕ್​ ಕ್ರೀಡಾಂಗಣ ಭರ್ತಿ ನಿರೀಕ್ಷೆ - IND AUS match

Cricket World Cup: ಇಲ್ಲಿನ ಚೆಪಾಕ್​ ಕ್ರೀಡಾಂಗಣದಲ್ಲಿ ಇಂದು ಭಾರತ- ಆಸ್ಟ್ರೇಲಿಯಾ ನಡುವೆ ಬಿಗ್​ ಮ್ಯಾಚ್​ ನಡೆಯಲಿದ್ದು, ವಿಶ್ವಕಪ್​ಗೆ ಹೊಸ ಮೆರುಗು ನೀಡಲಿದೆ-ಮೀನಾಕ್ಷಿರಾವ್​.

ಬಿಗ್​ ಮ್ಯಾಚ್​ಗೆ ಚೆಪಾಕ್​ ಕ್ರೀಡಾಂಗಣ ಭರ್ತಿ ನಿರೀಕ್ಷೆ

author img

By ETV Bharat Karnataka Team

Published : Oct 7, 2023, 5:57 PM IST

Updated : Oct 8, 2023, 9:25 AM IST

ಚೆನ್ನೈ (ತಮಿಳುನಾಡು) : ಏಕದಿನ ವಿಶ್ವಕಪ್​ನ ಬಿಗ್​ ಮ್ಯಾಚ್​ ಆಸ್ಪ್ರೇಲಿಯಾ ಮತ್ತು ಭಾರತ ಮಧ್ಯೆ ಇಲ್ಲಿನ ಚೆಪಾಕ್​ ಎಂದೇ ಹೆಸರಾಗಿರುವ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ನ್ಯೂಜಿಲ್ಯಾಂಡ್​ ಮತ್ತು ಇಂಗ್ಲೆಂಡ್​ ನಡುವಿನ ಉದ್ಘಾಟನಾ ಪಂದ್ಯ ಕಡಿಮೆ ಜನರ ಮಧ್ಯೆ ನಡೆದಿದ್ದು, ಈ ಪಂದ್ಯಕ್ಕೆ ಹೆಚ್ಚಿನ ಅಭಿಮಾನಿಗಳು ಹರಿದುಬರುವ ಸಾಧ್ಯತೆ ಇದೆ. 50 ಸಾವಿರ ಜನರ ಸಾಮರ್ಥ್ಯ ಕ್ರೀಡಾಂಗಣದ ಎಲ್ಲ ಟಿಕೆಟ್​ಗಳು ಬಿಕರಿಯಾಗಿವೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆಸೀಸ್​ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್​ ಅಭಿಯಾನವನ್ನು ಆರಂಭಿಸಲಿದೆ.

ಕಪ್ಪು, ಕಂದು ಬಣ್ಣದ ಪಿಚ್: 'ಚೆಪಾಕ್' ಪಿಚ್ ಕಂದು ಮತ್ತು ಕಪ್ಪು ಮಣ್ಣಿನ ಮಿಶ್ರಣದಿಂದ ಕೂಡಿದೆ. ಭಾನುವಾರ ಪಂದ್ಯ ನಡೆಯಲಿರುವ ಕಾರಣ ಮೈದಾನವನ್ನು ಜತನದಿಂದ ಮುಚ್ಚಿಡಲಾಗಿದೆ. 30 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶವಿರುವ ಕಾರಣ ಪಿಚ್​ ಬಿರುಕು ಬಿಡದಿರಲಿ ಎಂದು ಹೊದಿಕೆ ಹಾಕಲಾಗಿದೆ. ಶುಕ್ರವಾರ ಸಂಜೆ ಅಭ್ಯಾಸದ ವೇಳೆ ನಾಯಕ ರೋಹಿತ್​ ಶರ್ಮಾ ಮತ್ತು ಕೋಚ್​ ರಾಹುಲ್​ ದ್ರಾವಿಡ್​ ಪಿಚ್​ ಅನ್ನು ಪರಿಶೀಲಿಸಿದರು.

ಮೈದಾನದ ಮೇಲಿನ ಹುಲ್ಲನ್ನು ಕತ್ತರಿಸಲಾಗಿದೆ. ಕಂದು, ಕಪ್ಪು ಮಣ್ಣಿನ ಪಿಚ್​ ಮೊದಲಾರ್ಧದಲ್ಲಿ ಬ್ಯಾಟರ್​ಗಳಿಗೆ ನೆರವಾಗಲಿದೆ. ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಪ್ರಕಾರ, ಸಂಜೆ ವೇಳೆಗೆ ಪಿಚ್​ ತಿರುವು ಪಡೆಯಲಿದೆ. ಇಲ್ಲಿ 270-280 ಸ್ಕೋರ್ ಸ್ಪರ್ಧಾತ್ಮಕವಾಗಿರುತ್ತದೆ ಎಂದಿದ್ದಾರೆ. ಈ ಮೈದಾನ ಸ್ಪಿನ್ನರ್​ಗಳ ಸ್ವರ್ಗವಾಗಿದೆ. ಭಾರತದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ 48 ವಿಕೆಟ್‌ಗಳನ್ನು ಕಬಳಿಸಿ, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇನ್ನೊಬ್ಬ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ 42 ವಿಕೆಟ್​ ಕಿತ್ತಿದ್ದಾರೆ.

ಮೊದಲ ಹೌಸ್​ಫುಲ್​ ಪಂದ್ಯ?: 2023 ರ ವಿಶ್ವಕಪ್ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಆರಂಭವಾಯಿತು. ಹಾಲಿ ಚಾಂಪಿಯನ್​ ಇಂಗ್ಲೆಂಡ್​, ರನ್ನರ್​ ಅಪ್​ ನ್ಯೂಜಿಲೆಂಡ್​ ನಡುವಿನ ಪಂದ್ಯಕ್ಕೆ ಆರಂಭದಲ್ಲಿ ವೀಕ್ಷಕರೇ ಕಾಣಿಸಲಿಲ್ಲ. 1.32 ಲಕ್ಷ ಸಾಮರ್ಥ್ಯದ ಕ್ರೀಡಾಂಗದಲ್ಲಿ 46 ಸಾವಿರ ಅಭಿಮಾನಿಗಳು ಬಂದಿದ್ದರು. ದೊಡ್ಡ ಕ್ರೀಡಾಂಗಣದಲ್ಲಿ ಜನರೇ ಕಾಣಿಸುತ್ತಿರಲಿಲ್ಲ.

ಅಕ್ಟೋಬರ್ 8 ರಂದು ಚೆಪಾಕ್‌ನಲ್ಲಿ ಆಸ್ಟ್ರೇಲಿಯನ್ನರ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ಇಡೀ ಕ್ರೀಡಾಂಗಣ ಭರ್ತಿಯಾಗುವ ಎಲ್ಲ ಸಾಧ್ಯತೆ ಇದೆ. 50 ಸಾವಿರ ಆಸನಗಳ ಸಾಮರ್ಥ್ಯ ಚೆಪಾಕ್​ ಕ್ರೀಡಾಂಗಣದ ಎಲ್ಲ ಟಿಕೆಟ್​ಗಳು ಸೋಲ್ಡ್ ಔಟ್ ಆಗಿವೆ.

ಎರಡನೇ ಅತಿ ಹಳೆಯ ಕ್ರೀಡಾಂಗಣ: ಎಂಎ ಚಿದಂಬರಂ ಕ್ರೀಡಾಂಗಣಕ್ಕೆ ತನ್ನದೇ ಆದ ಶ್ರೀಮಂತ ಇತಿಹಾಸವಿದೆ. 1916 ರಲ್ಲಿ ಸ್ಥಾಪಿತವಾಗಿದ್ದು, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಂತರದ ಎರಡನೇ ಹಳೆಯ ಕ್ರೀಡಾಂಗಣವಾಗಿದೆ. ಬ್ಯಾಟಿಂಗ್​ ಮತ್ತು ಸ್ಪಿನ್ನರ್​ಗಳ ಸ್ವರ್ಗವಾದ ಇಲ್ಲಿ ಹಲವಾರು ದಾಖಲೆಗಳು ರೂಪುಗೊಂಡಿವೆ. ಹಳದಿ ಬಣ್ಣದ ಸ್ಟ್ಯಾಂಡ್‌ಗಳು ಐಪಿಎಲ್​ನ ಚೆನ್ನೈ ಸೂಪರ್ ಕಿಂಗ್ಸ್‌ಗೆ ತಂಡದ ಪ್ರತೀಕವಾಗಿವೆ. ಮೈದಾನ ಚಿಕ್ಕದಾಗಿದ್ದು, ಸಿಕ್ಸರ್‌- ಬೌಂಡರಿಗಳ ಸುರಿಮಳೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಮಳೆಯಿಂದ ಫೈನಲ್​ ಪಂದ್ಯ ರದ್ದು: ಏಷ್ಯನ್​ ಗೇಮ್ಸ್​ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್​ ತಂಡಕ್ಕೆ ಚಿನ್ನದ ಪದಕ

Last Updated : Oct 8, 2023, 9:25 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.