ETV Bharat / sports

Cricket World Cup 2023: ಅದ್ಧೂರಿ ಉದ್ಘಾಟನಾ ಸಮಾರಂಭಕ್ಕಿಲ್ಲ ಪ್ಲಾನ್: ಇಂದು ಎಲ್ಲಾ ತಂಡಗಳ ನಾಯಕರ ಫೋಟೋ ಸೆಷನ್ - ಎಲ್ಲಾ ತಂಡಗಳ ನಾಯಕರ ಫೋಟೋ ಸೆಷನ್

2023ರ ಕ್ರಿಕೆಟ್ ವಿಶ್ವಕಪ್ ಹಬ್ಬ ನಾಳೆಯಿಂದ ಆರಂಭವಾಗಲಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಅಹಮದಾಬಾದ್ ಆರಂಭಿಕ ಪಂದ್ಯಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಆದಾಗ್ಯೂ, ವಿಶ್ವಕಪ್‌ ಹಿನ್ನೆಲೆ ಯಾವುದೇ ಅದ್ಧೂರಿ ಉದ್ಘಾಟನಾ ಸಮಾರಂಭ ಇರುವುದಿಲ್ಲ ಎನ್ನಲಾಗಿದೆ.

Cricket World Cup 2023
ಕ್ರಿಕೆಟ್ ವಿಶ್ವಕಪ್ 2023: ಅದ್ಧೂರಿ ಉದ್ಘಾಟನಾ ಸಮಾರಂಭಕ್ಕಿಲ್ಲ ಪ್ಲಾನ್: ಇಂದು ಮಧ್ಯಾಹ್ನವೇ ಎಲ್ಲಾ ತಂಡಗಳ ನಾಯಕರ ಫೋಟೋ ಸೆಷನ್
author img

By ETV Bharat Karnataka Team

Published : Oct 4, 2023, 1:17 PM IST

ಅಹಮದಾಬಾದ್ (ಗುಜರಾತ್): ನಾಳೆಯಿಂದ ವಿಶ್ವದ ಕ್ರೀಡಾ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಕ್ರಿಕೆಟ್​ ಹಬ್ಬ ಶುರುವಾಗಲಿದೆ. ಇನ್ನು ಒಂದು ತಿಂಗಳು ಕ್ರಿಕೆಟ್​ ಜ್ವರದ ಕಾವು ದೇಶಾದ್ಯಂತ ಅಷ್ಟೇ ಏಕೆ ವಿಶ್ವದಾದ್ಯಂತ ಏರಲಿದೆ. 2023ರ ವಿಶ್ವಕಪ್ ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ವಿಶೇಷ ಎಂದರೆ ಯಾವುದೇ ಅದ್ಧೂರಿ ಉದ್ಘಾಟನಾ ಸಮಾರಂಭ ಯೋಜಿಸಲಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಆದಾಗ್ಯೂ, ಮಧ್ಯಾಹ್ನ 2:30ಕ್ಕೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎಲ್ಲ ತಂಡದ ನಾಯಕರ ಫೋಟೋ ಸೆಷನ್ ಮಾಡಲಾಗುತ್ತದೆ. ಬಿಸಿಸಿಐ ಮೂಲಗಳ ಪ್ರಕಾರ, ಇಂದು ಮಧ್ಯಾಹ್ನ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ಕ್ಲಬ್ ಹೌಸ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕ್ಯಾಪ್ಟನ್ ದಿನವನ್ನು ಆಯೋಜಿಸಲಾಗಿದೆ. ಇದರಲ್ಲಿ ಎಲ್ಲ ಕ್ರಿಕೆಟ್ ತಂಡಗಳ ನಾಯಕರು ಹಾಜರಿದ್ದು, ಫೋಟೋ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಇಂದು ಬೆಳಗ್ಗೆಯಿಂದಲೇ ಎಲ್ಲ ತಂಡಗಳ ನಾಯಕರು ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯ ಗೃಹ ಇಲಾಖೆ ಮತ್ತು ಅಹಮದಾಬಾದ್ ಪೊಲೀಸರು ಭಾರಿ ಭದ್ರತೆ ಕೈಗೊಂಡಿದ್ದಾರೆ. ಅವರು ನೀಡಿರುವ ಮಾಹಿತಿ ಪ್ರಕಾರ, ಅಕ್ಟೋಬರ್ 14 ರಂದು ಆತಿಥೇಯ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡುವಣ ಪಂದ್ಯಕ್ಕೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆಯಂತೆ. ಸುರಕ್ಷತೆಯ ದೃಷ್ಟಿಯಿಂದ ಪ್ರೇಕ್ಷಕರು ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಬಾಟಲಿಗಳು ಮತ್ತು ಸುಲಭವಾಗಿ ಎಸೆಯಬಹುದಾದ ಎಲ್ಲ ವಸ್ತುಗಳನ್ನು ಭದ್ರತಾ ದೃಷ್ಟಿಯಿಂದ ನಿಷೇಧಿಸಲಾಗಿದೆ. ಎರಡು ತಂಡಗಳು ತಂಗಲಿರುವ ಹೋಟೆಲ್​ನಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಮೆಟ್ರೋ ಟೈಮಿಂಗ್ ಬದಲಾವಣೆ: ಒಟ್ಟು ವಿಶ್ವಕಪ್‌ನ ಐದು ಪಂದ್ಯಗಳು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ. ನರೇಂದ್ರ ಮೋದಿ ಕ್ರೀಡಾಂಗಣ ತಲುಪಲು ಮೆಟ್ರೋ ಸುಲಭ ಸಾರಿಗೆ ಆಗಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರು ಕ್ರೀಡಾಂಗಣವನ್ನು ಯಾವುದೇ ತೊಂದರೆ ಇಲ್ಲದೇ ತಲುಪಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗುಜರಾತ್ ಮೆಟ್ರೋ ರೈಲು ನಿಗಮ ಈ ಸಂಬಂಧ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಶ್ವಕಪ್ ಪಂದ್ಯಗಳ ದಿನದಂದು ಮೆಟ್ರೋ ರೈಲುಗಳು ಮಧ್ಯರಾತ್ರಿ 1 ಗಂಟೆಯವರೆಗೆ ಸಂಚರಿಸಲಿವೆ. ಇದಕ್ಕಾಗಿ 50 ರೂ.ಗಳ ನಿಗದಿತ ದರ ನೀಡಿ ಟಿಕೆಟ್ ಖರೀದಿಸುವುದು ಅತ್ಯಗತ್ಯವಾಗಿದೆ.

ಆಟಗಾರರ ಆಗಮನ: ಈಗಾಗಲೇ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಆಟಗಾರರ ಆಗಮಿಸುತ್ತಿರುವುದು ಕಂಡು ಬರುತ್ತಿದೆ. ವೀಕ್ಷಕರಿಗಾಗಿ ವಿಮಾನ ನಿಲ್ದಾಣದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ವಿಮಾನ ನಿಲ್ದಾಣದಿಂದ ಖಾಸಗಿ ಕ್ಯಾಬ್‌ಗಳಿಗೆ ವೀಕ್ಷಕರನ್ನು ನೇರವಾಗಿ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಲು ಅನುಕೂಲವಾಗುವಂತಹ ಕೌಂಟರ್ ಕೂಡಾ ಸ್ಥಾಪಿಸಲಾಗಿದೆ.

ಏಕತೆಯ ಪ್ರತಿಮೆಯಲ್ಲಿ ವಿಶ್ವಕಪ್‌ನ ಪ್ರತಿಕೃತಿ: ಟ್ರೋಫಿ ಪ್ರವಾಸದ ನಿಮಿತ್ತ ಏಕತಾ ಪ್ರತಿಮೆಯಲ್ಲಿ ವಿಶ್ವಕಪ್‌ನ ಪ್ರತಿಕೃತಿ ಇರಿಸಲಾಗಿದೆ.

ಇದನ್ನೂ ಓದಿ: ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ಸಚಿನ್ ತೆಂಡೂಲ್ಕರ್‌ 'ಜಾಗತಿಕ ರಾಯಭಾರಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.