ಮಾಂಚೆಸ್ಟರ್: ಇಂದು ಲೀಗ್ ಪಂದ್ಯಗಳ ಟಾಪರ್ ಟೀಂ ಇಂಡಿಯಾ ಹಾಗೂ ನಾಲ್ಕನೇ ಸ್ಥಾನ ಪಡೆದ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಈ ನಡುವೆ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡುವ ಸಾಧ್ಯತೆ ಇದೆ ಎಂದು ಅಲ್ಲಿನ ಹವಾಮಾನ ಇಲಾಖೆ ಹೇಳಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ತುಸು ನಿರಾಸೆಯನ್ನುಂಟು ಮಾಡಿದೆ. ಆದರೆ, ಇಂಗ್ಲೆಂಡ್ನ ಮಳೆ ನಂಬೋಕೆ ಆಗದೆ ಇರುವುದರಿಂದ ಪಂದ್ಯ ಆರಂಭದವರೆಗೂ ಏನೂ ಹೇಳಲು ಬರುವುದಿಲ್ಲ.
ಇನ್ನೇನು ಕೊಹ್ಲಿ ಪಡೆ ಕಪ್ ಎತ್ತಿ ಹಿಡಿಯಲು ಇರುವುದು ಎರಡು ಹೆಜ್ಜೆಗಳು ಮಾತ್ರ. ಮಹತ್ವದ ಪಂದ್ಯಕ್ಕಾಗಿ ವಿರಾಟ್ ಬಳಕ ಸರ್ವ ಸನ್ನದ್ಧವಾಗಿದೆ. 9 ಪಂದ್ಯಗಳಲ್ಲಿ 7 ಮ್ಯಾಚ್ ಗೆದ್ದಿರುವ ಟೀಂ ಇಂಡಿಯಾ ಪ್ರಸ್ತುತ ಅತ್ಯಂತ ಬಲಿಷ್ಠ ತಂಡವಾಗಿ ಹೊರ ಹೊಮ್ಮಿದೆ.
ಈ ಮೊದಲು ಲೀಗ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯ ಮಳೆಗೆ ಬಲಿಯಾಗಿತ್ತು. ಈ ನಡುವೆ ನ್ಯೂಜಿಲ್ಯಾಂಡ್ ಮೂರು ಪಂದ್ಯಗಳನ್ನ ಸೋತು ಸ್ಪಲ್ಪ ಹಿನ್ನಡೆ ಅನುಭವಿಸುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಕಿವೀಸ್ ತಂಡವನ್ನ ಕಡೆಗಣಿಸುವಂತಿಲ್ಲ.
ಇನ್ನು ಟೀಂ ಇಂಡಿಯಾದ ರೋಹಿತ್ ಶರ್ಮಾ ಈ ಟೂರ್ನಿಯಲ್ಲಿ ಬರೋಬ್ಬರಿ 647 ರನ್ ಬಾರಿಸಿದ್ದು, ಸಚಿನ್ ತೆಂಡೂಲ್ಕರ್ ರೆಕಾರ್ಡ್ ಮುರಿಯಲು ಕೆಲವೇ ರನ್ಗಳ ಕೊರತೆ ಅನುಭವಿಸುತ್ತಿದ್ದಾರೆ. ಇನ್ನು ನಾಯಕ ವಿರಾಟ್ ಕೊಹ್ಲಿ 442 ರನ್ ಬಾರಿಸಿದರೆ, ಕನ್ನಡಿಗ ರಾಹುಲ್ ಸಹ 360 ರನ್ಗಳನ್ನ ಪೇರಿಸಿ ಭಾರತದ ಟಾಪ್ ಆರ್ಡರ್ ಬಲಿಷ್ಠ ಆಗಿದೆ ಎಂಬುದನ್ನು ನಿರೂಪಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಟೀಂ ಇಂಡಿಯಾ ಬಲಿಷ್ಠವಾಗಿದೆ.
ತಂಡಗಳು ಇಂತಿವೆ
ಭಾರತ : ಕೆ ಎಲ್ ರಾಹುಲ್, ವಿರಾಟ್ ಕೋಹ್ಲಿ( ನಾಯಕ) ರಿಷಭ್ ಪಂತ್, ಎಂ.ಎಸ್. ಧೋನಿ( ವಿ ಕೀ) ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಯುಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ,
ನ್ಯೂಜಿಲ್ಯಾಂಡ್: ಮಾರ್ಟಿನ್ ಗಪ್ಟಿಲ್, ಹೆನ್ಸಿ ನಿಕೋಲ್ಸ್/ ಕಾಲಿನ್ ಮನ್ರೋ, ಕೆನ್ ವಿಲಿಯಂಸನ್(ಕ್ಯಾಪ್ಟನ್), ರಾಸ್ ಟೇಲರ್, ಟಾಮ್ ಲಾಥಮ್( ವಿ ಕೀ) ಕಾಲಿನ್ ಡಿ ಗ್ರಾಂಡ್ಹೋಮ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಫರ್ಗ್ಯೂಸನ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್