ಚೆಸ್ಟರ್ ಲೇ ಸ್ಟ್ರೀಟ್: ಇಲ್ಲಿನ ರಿವರ್ ಸೈಡ್ ಮೈದಾನದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು, ವೆಸ್ಟ್ ಇಂಡೀಸ್ಗೆ 339 ರನ್ಗಳ ಗೆಲುವಿನ ಗುರಿ ನೀಡಿದೆ.
ಟಾಸ್ ಗೆದ್ದ ವಿಂಡೀಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಇನ್ನಿಂಗ್ಸ್ ಆರಂಭಿಸಿದ ಲಂಕಾಗೆ ನಾಯಕ ದಿಮುತ್ ಕರುಣರತ್ನೆ (32) ಹಾಗೂ ಕುಶಾಲ್ ಪೆರೆರಾ (64) ಉತ್ತಮ ಆರಂಭ ಒದಗಿಸಿದರು. ಕರುಣರತ್ನೆ ಔಟಾದ ಬಳಿಕ ಬಂದ ಅವಿಸ್ಕಾ ಫೆರ್ನಾಂಡೋ ಭರ್ಜರಿ ಶತಕ (104 ರನ್) ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ಇನ್ನುಳಿದಂತೆ ಕುಶಾಲ್ ಮೆಂಡಿಸ್ 39, ಆಂಜೆಲೋ ಮ್ಯಾಥ್ಯೂಸ್ 26 ಹಾಗೂ ಲಹಿರು ತಿರಿಮನ್ನೆ 45 ರನ್ ಬಾರಿಸಿ ತಂಡದ ಮೊತ್ತವನ್ನು 6 ವಿಕೆಟ್ಗೆ 338ಕ್ಕೆ ಹಿಗ್ಗಿಸಿದರು. ವಿಂಡೀಸ್ ಪರ ನಾಯಕ ಹೋಲ್ಡರ್ 2 ಹಾಗೂ ಥಾಮಸ್, ಫಾಬಿಯನ್, ಕಾಟ್ರಿಲ್ ತಲಾ 1 ವಿಕೆಟ್ ಪಡೆದರು. ಇನ್ನು ಎರಡೂ ತಂಡಗಳು ಈಗಾಗಲೇ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿವೆ.
-
INNINGS BREAK: A splendid century from Avishka Fernando guides Sri Lanka to 338/6 against West Indies in Durham 🙌
— Cricket World Cup (@cricketworldcup) July 1, 2019 " class="align-text-top noRightClick twitterSection" data="
Can the #MenInMaroon chase this down? #SLvWI | #CWC19 pic.twitter.com/ybmr5rSxv8
">INNINGS BREAK: A splendid century from Avishka Fernando guides Sri Lanka to 338/6 against West Indies in Durham 🙌
— Cricket World Cup (@cricketworldcup) July 1, 2019
Can the #MenInMaroon chase this down? #SLvWI | #CWC19 pic.twitter.com/ybmr5rSxv8INNINGS BREAK: A splendid century from Avishka Fernando guides Sri Lanka to 338/6 against West Indies in Durham 🙌
— Cricket World Cup (@cricketworldcup) July 1, 2019
Can the #MenInMaroon chase this down? #SLvWI | #CWC19 pic.twitter.com/ybmr5rSxv8