ಲಂಡನ್: ನಾಳೆ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ನಂತರ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹೀರ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿದ್ದಾರೆ.
ನಿವೃತ್ತಿ ಬಗ್ಗೆ ಮಾತನಾಡಿರುವ ಅವರು, ನಾಳಿನ ಪಂದ್ಯದಲ್ಲಿ ಜಯಗಳಿಸುವ ಗುರಿ ಹೊಂದಿದ್ದೇವೆ. ಇದೇ ವೇಳೆ ನಾನು ನಿವೃತ್ತಿ ಪಡೆಯುತ್ತಿರೋದಕ್ಕೆ ಬೇಸರ ಕೂಡ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನ ಆಡಬೇಕು ಎಂಬುದು ನನ್ನ ಕನಸಾಗಿತ್ತು, ಇದಕ್ಕೆ ಸಹಕಾರ ನೀಡಿದ ಪ್ರತಿಯೋಬ್ಬರಿಗೂ ಧನ್ಯವಾದ ತಿಳಿಸುತ್ತೇನೆ.
ಬೇರೆ ದೇಶದಿಂದ ಬಂದರೂ ನನ್ನ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು. ನನಗೆ ಎಲ್ಲಿಯವರೆಗೆ ಕ್ರಿಕೆಟ್ ಆಡಬೇಕು ಎನಿಸುತ್ತದೊ ಅಲ್ಲಿಯವರೆಗೆ ನನ್ನ ಆಟವನ್ನ ಮುಂದುವರೆಸುತ್ತೇನೆ. ತಂಡದ ಭವಿಷ್ಯದ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ, ಸಾಕಷ್ಟು ಪ್ರತಿಭಾವಂತ ಯುವ ಆಟಗಾರು ತಂಡದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಇಮ್ರಾನ್ ತಾಹೀರ್ ಪಾಕಿಸ್ತಾನದಲ್ಲಿ ಜನಿಸಿ, ದಕ್ಷಿಣ ಆಫ್ರಿಕಾ ಮೂಲದ ಮಹಿಳೆಯನ್ನ ವಿವಾಹವಾಗಿದ್ದಾರೆ. 2011ರಲ್ಲಿ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದರ್ಪಣೆ ಮಾಡಿದ್ದ ತಾಹೀರ್ ಇಲ್ಲಿವರೆಗೆ 106 ಏಕದಿನ ಕ್ರಿಕೆಟ್ ಪಂದ್ಯಗಳನ್ನ ಆಡಿದ್ದು 172 ವಿಕೆಟ್ ಪಡೆದುಕೊಂಡಿದ್ದಾರೆ. ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಎಂಟು ಪಂದ್ಯಗಳಿಂದ 10 ವಿಕೆಟ್ ಪಡೆದುಕೊಂಡಿದ್ದಾರೆ.