ಲಂಡನ್: ಇದೇ ಭಾನುವಾರ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಪಾಕಿಸ್ತಾನ ತಂಡದ ಅಭಿಮಾನಿಗಳು ಟೀಂ ಇಂಡಿಯಾಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ 3 ಪಂದ್ಯಗಳನ್ನ ಸೋತಿರುವ ಅತಿಥೇಯ ಇಂಗ್ಲೆಂಡ್ ತಂಡ ಸೆಮಿಫೈನಲ್ ತಲುಪಲು ಮುಂದಿನ ಎರಡು ಪಂದ್ಯಗಳನ್ನ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇತ್ತ ಪಾಕಿಸ್ತಾನ ಕೂಡ ಸೆಮಿಸ್ ರೇಸ್ನಲ್ಲಿ ಉಳಿದುಕೊಳ್ಳಲು 2 ಪಂದ್ಯಗಳನ್ನ ಗೆಲ್ಲಲೇಬೇಕಿದೆ.
ಇಂಗ್ಲೆಂಡ್ ಸೋತರೆ ಪಾಕ್ ಸೆಮಿಸ್ ಆಸೆ ಜೀವಂತ:
ಭಾರತದ ವಿರುದ್ಧ ಪಂದ್ಯದಲ್ಲಿ ಇಂಗ್ಲೆಂಡ್ ಸೋಲು ಕಂಡು ಮುಂದಿನ ಪಂದ್ಯ ಗೆದ್ದರೂ ಕೂಡ ಒಟ್ಟು 10 ಅಂಕ ಗಳಿಸಲಿದೆ. 7 ಅಂಕ ಗಳಿಸಿರುವ ಪಾಕಿಸ್ತಾನ ಮುಂದಿನ 2 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪುವ ಕನಸು ಕಾಣುತ್ತಿದೆ.
ಭಾರತಕ್ಕೆ ಪಾಕ್ ಅಭಿಮಾನಿಗಳ ಬೆಂಬಲ:
ಪಾಕಿಸ್ತಾನ್ ಸೆಮಿಫೈನಲ್ ತಲುಪಬೇಕಾದರೆ ಇಂಗ್ಲೆಂಡ್ ಸೋಲಬೇಕು. ಹೀಗಾಗಿ ಭಾನುವಾರ ನಡೆಯಲಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಪಾಕ್ ಅಭಿಮಾನಿಗಳು ಟೀಂ ಇಂಡಿಯಾಗೆ ಬೆಂಬಲ ನೀಡೋದಾಗಿ ಹೇಳಿದ್ದಾರೆ.
-
Time to support our neighbour 🇮🇳
— Xami Niazi🌍 (@Xamy_99) June 27, 2019 " class="align-text-top noRightClick twitterSection" data="
All the best 🇮🇳
Inshallah India will win
Support from 🇵🇰
🇮🇳♥️🇵🇰@BCCI@TheRealPCB#IndvsEng#WeHaveWeWill#PAKvNZ pic.twitter.com/1RgpNG7ZSb
">Time to support our neighbour 🇮🇳
— Xami Niazi🌍 (@Xamy_99) June 27, 2019
All the best 🇮🇳
Inshallah India will win
Support from 🇵🇰
🇮🇳♥️🇵🇰@BCCI@TheRealPCB#IndvsEng#WeHaveWeWill#PAKvNZ pic.twitter.com/1RgpNG7ZSbTime to support our neighbour 🇮🇳
— Xami Niazi🌍 (@Xamy_99) June 27, 2019
All the best 🇮🇳
Inshallah India will win
Support from 🇵🇰
🇮🇳♥️🇵🇰@BCCI@TheRealPCB#IndvsEng#WeHaveWeWill#PAKvNZ pic.twitter.com/1RgpNG7ZSb
ಈ ಬಗ್ಗೆ ಟ್ವಿಟ್ಟರ್ನಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಪ್ರಶ್ನಿಸಿದ್ದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ವೇಳೆ ಪಾಕ್ ಅಭಿಮಾನಿಗಳು ಯಾವ ತಂಡವನ್ನ ಬೆಂಬಲಿಸುತ್ತೀರ ಎಂದು ಕೇಳಿದ್ದಾರೆ. ಇದಕ್ಕೆ ಪಾಕ್ ಅಭಿಮಾನಿಗಳು ಖಂಡಿತ ನಾವು ಭಾರತಕ್ಕೆ ಬೆಂಬಲ ನೀಡುತ್ತೇವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
-
Team India ♥️♥️♥️♥️
— E Q U I N O X 💫 (@cap_sohail) June 26, 2019 " class="align-text-top noRightClick twitterSection" data="
Hahahaha we are living in loving times again 🇵🇰🇮🇳👍👍👍
">Team India ♥️♥️♥️♥️
— E Q U I N O X 💫 (@cap_sohail) June 26, 2019
Hahahaha we are living in loving times again 🇵🇰🇮🇳👍👍👍Team India ♥️♥️♥️♥️
— E Q U I N O X 💫 (@cap_sohail) June 26, 2019
Hahahaha we are living in loving times again 🇵🇰🇮🇳👍👍👍
-
not only am i gonna support India on sunday im gona buy an India shirt and listen to bollywood all day 🇮🇳🇮🇳
— Issy Akram (@IssyAkram) June 26, 2019 " class="align-text-top noRightClick twitterSection" data="
">not only am i gonna support India on sunday im gona buy an India shirt and listen to bollywood all day 🇮🇳🇮🇳
— Issy Akram (@IssyAkram) June 26, 2019not only am i gonna support India on sunday im gona buy an India shirt and listen to bollywood all day 🇮🇳🇮🇳
— Issy Akram (@IssyAkram) June 26, 2019
ಒಂದು ವೇಳೆ ಇಂಗ್ಲೆಂಡ್ ತಂಡವು ಭಾರತ ಮತ್ತು ಕಿವೀಸ್ ವಿರುದ್ಧ ಜಯ ಸಾಧಿಸಿದರೆ 12 ಅಂಕ ಗಳಿಸಲಿದೆ. ಪಾಕ್ ಮುಂದಿನ 2 ಪಂದ್ಯ ಗೆದ್ದು 11 ಅಂಕ ಪಡೆದರೂ ಸೆಮಿಸ್ ಕನಸು ಮರಿಚಿಕೆಯಾಗಲಿದೆ.