ETV Bharat / sports

11ರ ವಿಶ್ವಕಪ್​​ ತಂಡದಿಂದ ರಿಜೆಕ್ಟ್, 19ರಲ್ಲಿ ರನ್​ಮಳೆ... ರೋಹಿತ್ ಅದ್ಭುತ ಫಾರ್ಮ್​ ಹಿಂದಿದೆ ರೋಚಕ ಸ್ಟೋರಿ..!

author img

By

Published : Jul 18, 2019, 5:24 AM IST

Updated : Jul 18, 2019, 6:19 AM IST

2019ರ ವಿಶ್ವಕಪ್​​ನಲ್ಲಿ ಅತ್ಯಂತ ಹೆಚ್ಚು ರನ್​ ದಾಖಲಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ರೋಹಿತ್ ಶರ್ಮಾ ಸರಿಯಾಗಿ ಎಂಟು ವರ್ಷದ ಹಿಂದೆ ಕೆಟ್ಟ ಫಾರ್ಮ್​ನಿಂದ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದರು. ಹಾಗಾದರೆ ಈ ಎಂಟು ವರ್ಷಗಳ ಅವಧಿಯಲ್ಲಿ ಆಗಿದ್ದೇನು..? ರೋಹಿತ್​ ಶರ್ಮಾ ರನ್​ ದಾಹ ಹೆಚ್ಚಾಗಿದ್ದು ಹೇಗೆ ಎನ್ನುವುದೇ ರೋಚಕ ಕಹಾನಿ...

ರೋಹಿತ್​ ಶರ್ಮಾ

ಹೈದರಾಬಾದ್: ವಿಶ್ವಕಪ್​ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್​ ಶರ್ಮಾ ಅಬ್ಬರಕ್ಕೆ ಹಲವು ದಾಖಲೆಗಳು ಪತನವಾಗಿದ್ದರೆ, ಅತ್ತ ತಂಡದ ಕಪ್ತಾನ ವಿರಾಟ್ ಕೊಹ್ಲಿ ಆಟವೂ ಹಿಟ್​ಮ್ಯಾನ್ ಆಟದ ಮುಂದೆ ಕೊಂಚ ಮಂಕಾಗಿದ್ದು ಸುಳ್ಳಲ್ಲ..!

ಓರ್ವ ಬ್ಯಾಟ್ಸ್​ಮನ್​ ಆಗಿ ರೋಹಿತ್ ಶರ್ಮಾ ಉತ್ತಮ ಪ್ರತಿಭೆಯನ್ನು ಹೊಂದಿದ್ದರು. ಈ ವಿಚಾರದಲ್ಲಿ ಯಾವುದೇ ಸಂಶಯವಿರಲಿಲ್ಲ. ಆದರೆ 2011ರ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಕ್ಕೆ ರೋಹಿತ್ ಸಹಜವಾಗಿಯೇ ಬೇಸರವಾಗಿದ್ದರು ಎನ್ನುತ್ತಾರೆ ರೋಹಿತ್​ರ ಆತ್ಮೀಯ ಸ್ನೇಹಿತ ಹಾಗೂ ಮುಂಬೈ ಇಂಡಿಯನ್ಸ್ ಆಟಗಾರ ಅಭಿಷೇಕ್ ನಾಯರ್.

Rohit Sharma
ಸ್ನೇಹಿತ ಅಭಿಷೇಕ್ ನಾಯರ್ ಜೊತೆ ರೋಹಿತ್​ ಶರ್ಮಾ

"ಎಲ್ಲವೂ ಇದ್ದು ಏನೂ ಇಲ್ಲದ ಸ್ಥಿತಿ ರೋಹಿತ್ ಶರ್ಮಾರದ್ದಾಗಿತ್ತು. ನಾನೂ ಹಾಗೂ ರೋಹಿತ್​ ಉತ್ತಮ ಗೆಳೆಯರಾಗಿದ್ದೆವು. ಕೊಂಚ ಶ್ರಮವಹಿಸಿ ತರಬೇತಿ ಪಡೆಯುತ್ತಿರು ಎಂದು ನಾನು ಹೇಳುತ್ತಿದ್ದೆ. ಇಲ್ಲ ನಾನು ಬ್ಯಾಟಿಂಗ್ ಮಾಡುತ್ತೇನೆ" ಎನ್ನುವ ಉತ್ತರ ರೋಹಿತ್​ರದ್ದಾಗಿತ್ತು ಎನ್ನುತ್ತಾರೆ ನಾಯರ್.

"ಹಾಲಿ ನಾಯಕ ವಿರಾಟ್ ಕೊಹ್ಲಿಗಿಂತ ಮುಂಚಿತವಾಗಿಯೇ ತಂಡಕ್ಕೆ ಪಾದಾರ್ಪಣೆ ಮಾಡಿದ್ದರೂ ರೋಹಿತ್ ಆಟ ಬಹುತೇಕ ಅಂತ್ಯದ ಕಡೆಗೆ ಸಾಗಿತ್ತು. ಇದರ ನಡುವೆ ರೋಹಿತ್​​ಗೆ ಬೊಜ್ಜು ಬಂದಿದೆ ಎನ್ನುವ ಮಾತುಗಳು ಕ್ರಿಕೆಟ್ ವಲಯದಲ್ಲಿ ಜೋರಾಗಿತ್ತು. "

Rohit Sharma
ರೋಹಿತ್​ ಶರ್ಮಾ

"ದೇಹವನ್ನು ದಂಡಿಸುವ ತೀರ್ಮಾನಕ್ಕೆ ರೋಹಿತ್ ಬಂದಿದ್ದರು. ಏನಾದರಾಗಲಿ ಫಿಟ್ ಆಗಿಯೇ ಮೈದಾನಕ್ಕಿಳಿದು ತಮ್ಮ ಟ್ಯಾಲೆಂಟ್ ಪ್ರದರ್ಶಿಸಬೇಕೆನ್ನುವ ಮನಸ್ಸು ಮಾಡಿದ್ದರು ರೋಹಿತ್. ಜೊತೆಗೆ ವಿಭಿನ್ನವಾಗಿ ಕ್ರಿಕೆಟ್ ಆಡುವ ಬಗ್ಗೆ ಹೇಳಿದ್ದರು. ಆದರೆ ನಾನು ಇದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ" ಎನ್ನುತ್ತಾರೆ ಅಭಿಷೇಕ್ ನಾಯರ್.

"ಕರಿಯರ್ ಬಗ್ಗೆ ಅಷ್ಟೊಂದು ಗಂಭೀರತೆ ಹೊಂದಿರದಿದ್ದ ರೋಹಿತ್ ಆ ಬಳಿಕ ಜೀವನಶೈಲಿಯಲ್ಲಿ ಮಾರ್ಪಾಡ ಮಾಡಲು ಮುಂದಾಗಿದ್ದರು. ಅಲ್ಲಿಂದ ಬಳಿಕ ಸುಮಾರು ಒಂದೂವರೆ ತಿಂಗಳುಗಳ ಕಾಲ ನಾನು ರೋಹಿತ್ ಜೊತೆಯಲ್ಲೇ ಇದ್ದೆ. ದಿನಕ್ಕೆ ನಾಲ್ಕರಿಂದ ಐದು ಬಾರಿ ಎನ್ನುವಂತೆ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದರು."

Rohit Sharma
ರೋಹಿತ್​ ಶರ್ಮಾ

ಇದಾದ ಬಳಿಕ 2015ರ ವಿಶ್ವಕಪ್​​ನಲ್ಲಿ ರೋಹಿತ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಈ ವೇಳೆ ಸಂಪೂರ್ಣ ಟೂರ್ನಿಯಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕ ಸೇರಿದಂತೆ 47.14ರ ಸರಾಸರಿಯಲ್ಲಿ 330 ರನ್ ಕಲೆಹಾಕಿದ್ದರು.

ವಿಶ್ವಕಪ್​​ಗಾಗಿ ಟೀಮ್ ಇಂಡಿಯಾದ ಇತರ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದ ವೇಳೆ ರೋಹಿತ್ ಶರ್ಮಾ ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ಮಾಲ್ಡೀವ್ಸ್​​ನಲ್ಲಿ ಹಾಯಾಗಿ ದಿನಕಳೆದಿದ್ದರು. ಮಹತ್ತರ ಟೂರ್ನಿಗೂ ಮುನ್ನ ಈ ಹಾಲಿಡೇ ನಿಜಕ್ಕೂ ಅಗತ್ಯವಾಗಿತ್ತು ಎನ್ನುತ್ತಾರೆ ರೋಹಿತ್ ಸ್ನೇಹಿತ ಅಭಿಷೇಕ್ ನಾಯರ್.

Rohit Sharma
ಪತ್ನಿ ರಿತಿಕಾ ಜೊತೆ ರೋಹಿತ್​ ಶರ್ಮಾ

ಇದೀಗ ಮುಕ್ತಾಯವಾಗಿರುವ ವಿಶ್ವಕಪ್​ನಲ್ಲಿ ರೋಹಿತ್ ಅಕ್ಷರಶಃ ಅಬ್ಬರಿಸಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 122 ರನ್, ಆಸೀಸ್ ವಿರುದ್ಧ57, ಪಾಕ್ ವಿರುದ್ಧ 140, ಆಂಗ್ಲರ ವಿರುದ್ಧ 102, ಬಾಂಗ್ಲಾ ವಿರುದ್ಧ 104 ಹಾಗೂ ಶ್ರೀಲಂಕಾ ವಿರುದ್ಧ 103 ರನ್ ಬಾರಿಸಿ ತಮ್ಮ ಮೇಲಿದ್ದ ಎಲ್ಲ ಅನುಮಾನ ಹಾಗೂ 2011ರಲ್ಲಿ ಆಗಿದ್ದ ನೋವನ್ನು ಸಂಪೂರ್ಣ ಅಳಿಸಿಹಾಕಿದ್ದಾರೆ.

Intro:Body:

2019ರ ವಿಶ್ವಕಪ್​​ನಲ್ಲಿ ಅತ್ಯಂತ ಹೆಚ್ಚು ರನ್​ ದಾಖಲಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ರೋಹಿತ್ ಶರ್ಮಾ ಸಿರಯಾಗಿ ಎಂಟು ವರ್ಷದ ಹಿಂದೆ ಕೆಟ್ಟ ಫಾರ್ಮ್​ನಿಂದ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದರು. ಹಾಗಾದರೆ ಈ ಎಂಟು ವರ್ಷಗಳ ಅವಧಿಯಲ್ಲಿ ಆಗಿದ್ದೇನು..? ರೋಹಿತ್​ ಶರ್ಮಾ ರನ್​ ದಾಹ ಹೆಚ್ಚಾಗಿದ್ದು ಹೇಗೆ ಎನ್ನುವುದೇ ರೋಚಕ ಕಹಾನಿ...

ಓರ್ವ ಬ್ಯಾಟ್ಸ್​ಮನ್​ ಆಗಿ ರೋಹಿತ್ ಶರ್ಮಾ ಉತ್ತಮ ಪ್ರತಿಭೆಯನ್ನು ಹೊಂದಿದ್ದರು. ಈ ವಿಚಾರದಲ್ಲಿ ಯಾವುದೇ ಸಂಶಯವಿರಲಿಲ್ಲ. ಆದರೆ 2011ರ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಕ್ಕೆ ರೋಹಿತ್ ಸಹಜವಾಗಿಯೇ ಬೇಸರವಾಗಿದ್ದರು ಎನ್ನುತ್ತಾರೆ ರೋಹಿತ್​ರ ಆತ್ಮೀಯ ಸ್ನೇಹಿತ ಹಾಗೂ ಮುಂಬೈ ಇಂಡಿಯನ್ಸ್ ಆಟಗಾರ ಅಭಿಷೇಕ್ ನಾಯರ್.

"ಎಲ್ಲವೂ ಇದ್ದು ಏನೂ ಇಲ್ಲದ ಸ್ಥಿತಿ ರೋಹಿತ್ ಶರ್ಮಾರದ್ದಾಗಿತ್ತು. ನಾನೂ ಹಾಗೂ ರೋಹಿತ್​ ಉತ್ತಮ ಗೆಳೆಯರಾಗಿದ್ದೆವು. ಕೊಂಚ ಶ್ರಮವಹಿಸಿ ತರಬೇತಿ ಪಡೆಯುತ್ತಿರು ಎಂದು ನಾನು ಹೇಳುತ್ತಿದ್ದೆ. ಇಲ್ಲ ನಾನು ಬ್ಯಾಟಿಂಗ್ ಮಾಡುತ್ತೇನೆ" ಎನ್ನುವ ಉತ್ತರ ರೋಹಿತ್​ರದ್ದಾಗಿತ್ತು ಎನ್ನುತ್ತಾರೆ ನಾಯರ್.

"ಹಾಲಿ ನಾಯಕ ವಿರಾಟ್ ಕೊಹ್ಲಿಗಿಂತ ಮುಂಚಿತವಾಗಿಯೇ ತಂಡಕ್ಕೆ ಪಾದಾರ್ಪಣೆ ಮಾಡಿದ್ದರೂ ರೋಹಿತ್ ಆಟ ಬಹುತೇಕ ಅಂತ್ಯದ ಕಡೆಗೆ ಸಾಗಿತ್ತು. ಇದರ ನಡುವೆ ರೋಹಿತ್​​ಗೆ ಬೊಜ್ಜು ಬಂದಿದೆ ಎನ್ನುವ ಮಾತುಗಳು ಕ್ರಿಕೆಟ್ ವಲಯದಲ್ಲಿ ಜೋರಾಗಿತ್ತು. "

"ದೇಹವನ್ನು ದಂಡಿಸುವ ತೀರ್ಮಾನಕ್ಕೆ ರೋಹಿತ್ ಬಂದಿದ್ದರು. ಏನಾದರಾಗಲಿ ಫಿಟ್ ಆಗಿಯೇ ಮೈದಾನಕ್ಕಿಳಿದು ತಮ್ಮ ಟ್ಯಾಲೆಂಟ್ ಪ್ರದರ್ಶಿಸಬೇಕೆನ್ನುವ ಮನಸ್ಸು ಮಾಡಿದ್ದರು ರೋಹಿತ್. ಜೊತೆಗೆ ವಿಭಿನ್ನವಾಗಿ ಕ್ರಿಕೆಟ್ ಆಡುವ ಬಗ್ಗೆ ಹೇಳಿದ್ದರು. ಆದರೆ ನಾನು ಇದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ" ಎನ್ನುತ್ತಾರೆ ಅಭಿಷೇಕ್ ನಾಯರ್.

"ಕರಿಯರ್ ಬಗ್ಗೆ ಅಷ್ಟೊಂದು ಗಂಭೀರತೆ ಹೊಂದಿರದಿದ್ದ ರೋಹಿತ್ ಆ ಬಳಿಕ ಜೀವನಶೈಲಿಯಲ್ಲಿ ಮಾರ್ಪಾಡ ಮಾಡಲು ಮುಂದಾಗಿದ್ದರು. ಅಲ್ಲಿಂದ ಬಳಿಕ ಸುಮಾರು ಒಂದೂವರೆ ತಿಂಗಳುಗಳ ಕಾಲ ನಾನು ರೋಹಿತ್ ಜೊತೆಯಲ್ಲೇ ಇದ್ದೆ. ದಿನಕ್ಕೆ ನಾಲ್ಕರಿಂದ ಐದು ಬಾರಿ ಎನ್ನುವಂತೆ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದರು."

ಇದಾದ ಬಳಿಕ 2015ರ ವಿಶ್ವಕಪ್​​ನಲ್ಲಿ ರೋಹಿತ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಈ ವೇಳೆ ಸಂಪೂರ್ಣ ಟೂರ್ನಿಯಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕ ಸೇರಿದಂತೆ 47.14ರ ಸರಾಸರಿಯಲ್ಲಿ 330 ರನ್ ಕಲೆಹಾಕಿದ್ದರು.

ವಿಶ್ವಕಪ್​​ಗಾಗಿ ಟೀಮ್ ಇಂಡಿಯಾದ ಇತರ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದ ವೇಳೆ ರೋಹಿತ್ ಶರ್ಮಾ ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ಮಾಲ್ಡೀವ್ಸ್​​ನಲ್ಲಿ ಹಾಯಾಗಿ ದಿನಕಳೆದಿದ್ದರು. ಮಹತ್ತರ ಟೂರ್ನಿಗೂ ಮುನ್ನ ಈ ಹಾಲಿಡೇ ನಿಜಕ್ಕೂ ಅಗತ್ಯವಾಗಿತ್ತು ಎನ್ನುತ್ತಾರೆ ರೋಹಿತ್ ಸ್ನೇಹಿತ ಅಭಿಷೇಕ್ ನಾಯರ್.

ಇದೀಗ ಮುಕ್ತಾಯವಾಗಿರುವ ವಿಶ್ವಕಪ್​ನಲ್ಲಿ ರೋಹಿತ್ ಅಕ್ಷರಶಃ ಅಬ್ಬರಿಸಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 122 ರನ್, ಆಸೀಸ್ ವಿರುದ್ಧ57, ಪಾಕ್ ವಿರುದ್ಧ 140, ಆಂಗ್ಲರ ವಿರುದ್ಧ 102, ಬಾಂಗ್ಲಾ ವಿರುದ್ಧ 104 ಹಾಗೂ ಶ್ರೀಲಂಕಾ ವಿರುದ್ಧ 103 ರನ್ ಬಾರಿಸಿ ತಮ್ಮ ಮೇಲಿದ್ದ ಎಲ್ಲ ಅನುಮಾನ ಹಾಗೂ 2011ರಲ್ಲಿ ಆಗಿದ್ದ ನೋವನ್ನು ಸಂಪೂರ್ಣ ಅಳಿಸಿಹಾಕಿದ್ದಾರೆ.

Conclusion:
Last Updated : Jul 18, 2019, 6:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.