ETV Bharat / sports

ಸಂಕಷ್ಟ ಮೆಟ್ಟಿ ನಿಂತು ಫೈಟ್‌ ಮಾಡೋ ವೆಸ್ಟ್‌ ಇಂಡೀಸ್‌! ಈ ಬಾರಿ ಕಪ್‌ ಗೆಲ್ಲುತ್ತಾ? - undefined

2019ರ ವಿಶ್ವಕಪ್​ ಟೂರ್ನಮೆಂಟ್​ಗೆ ಅರ್ಹತೆ ಪಡೆಯಲೂ ಕೂಡ ವಿಂಡೀಸ್​ ತಂಡ ಹೆಣಗಾಡಬೇಕಾಗಿತ್ತು. ಅಫ್ಘಾನಿಸ್ತಾನ, ಜಿಂಬಾಂಬ್ವೆ, ಸ್ಕಾಟ್ಲೆಂಡ್​ ಸೇರಿದಂತೆ ಇತರ ಕ್ರಿಕೆಟ್​ ಶಿಶುಗಳೊಂದಿಗೆ ಸೆಣಸಿ ಅರ್ಹತೆ ಪಡೆದುಕೊಳ್ಳುವ ಪರಿಸ್ಥಿತಿ ವಿಂಡೀಸ್​ ಟೀಂಗೆ ಎದುರಾಗಿತ್ತು.

ವೆಸ್ಟ್​​ ಇಂಡೀಸ್
author img

By

Published : Jun 6, 2019, 8:06 PM IST

Updated : Jun 6, 2019, 9:00 PM IST

ಹೈದರಾಬಾದ್​: 2019ರ ವಿಶ್ವಕಪ್​ ಟೂರ್ನಮೆಂಟ್​ನಲ್ಲಿ ಪಾಲ್ಗೊಳ್ಳಲೂ ಕೂಡ ಕಷ್ಟಪಡುತ್ತಿದ್ದ ವೆಸ್ಟ್​ ಇಂಡೀಸ್​ ಟೀಂ, ಪ್ರಸ್ತುತ ಉತ್ತಮ ಪ್ರದರ್ಶನ ತೋರುತ್ತಿದೆ.

ಎರಡು ಬಾರಿ ಏಕದಿನ ವಿಶ್ವಕಪ್​ ಟ್ರೋಫಿ ಮತ್ತು ಎರಡು ಬಾರಿ ಟಿ-20 ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿದ ಕೆರಿಬಿಯನ್ನರು, ಈ ಬಾರಿಯೂ ವಿಶ್ವಕಪ್​ ಟೂರ್ನಮೆಂಟ್​ಗೆ ಅರ್ಹತೆ ಪಡೆಯಲು ಕಷ್ಟ ಪಡಬೇಕಾಯ್ತು.ಅಫ್ಘಾನಿಸ್ತಾನ, ಜಿಂಬಾಂಬೆ, ಸ್ಕಾಟ್ಲೆಂಡ್ ಸೇರಿದಂತೆ ಇತರ ಕ್ರಿಕೆಟ್​ ಶಿಶುಗಳೊಂದಿಗೆ ಸೆಣಸಿ ಅರ್ಹತೆ ಪಡೆದುಕೊಳ್ಳುವ ಪರಿಸ್ಥಿತಿ ವಿಂಡೀಸ್​ ಟೀಂಗೆ ಎದುರಾಗಿತ್ತು.

ವಿಂಡೀಸ್​ ಕ್ರಿಕೆಟ್​ ಬೋರ್ಡ್​ಗೂ, ಆಟಗಾರರಿಗೂ ಮುಸುಕಿನ ಗುದ್ದಾಟ!
ವೆಸ್ಟ್​ ಇಂಡೀಸ್​ನಂತ ಬಲಿಷ್ಠ ತಂಡಕ್ಕೂ, ಅಲ್ಲಿನ ಕ್ರಿಕೆಟ್​ ಬೋರ್ಡ್​ಗೂ ಆಗಾಗ ಮುಸುಕಿನ ಗುದ್ದಾಟ ನಡೆಯುತ್ತಲೇ ಇರುತ್ತೆ. ವೇತನದ ವಿಚಾರದಲ್ಲಿ ಆಗಾಗ ಒಳಜಗಳಗಳೂ ನಡೆಯುತ್ತಲೇ ಇರುತ್ತವೆ. ಹೀಗಾಗಿ 2016ರ ಟಿ-20 ವಿಶ್ವಕಪ್​ ಟೂರ್ನಿಗೆ ಬರುವ ಮೊದಲು ವಿಂಡೀಸ್​ ಆಟಗಾರರಿಗೆ ಭಾರೀ ಆರ್ಥಿಕ ಸಮಸ್ಯೆ ಉಂಟಾಗಿತ್ತು.

ಕಷ್ಟದಲ್ಲಿದ ವಿಂಡೀಸ್​ ಟೀಂ ಕೈ ಹಿಡಿದಿದ್ದು ದಾದಾ!
ಭಾರತದಲ್ಲಿ ನಡೆದ 2016ರ ಟಿ-20 ವಿಶ್ವಕಪ್​ ಕ್ರಿಕೆಟ್​ ಟೂರ್ನಿ ಸಮಯದಲ್ಲಿ ವಿಂಡೀಸ್​ ಆಟಗಾರರಿಗೆ ಜರ್ಸಿ ತೆಗೆದುಕೊಳ್ಳಲು ಕೂಡ ಸಾಧ್ಯವಾಗಿರಲಿಲ್ಲ.ಆರ್ಥಿಕ ಸಮಸ್ಯೆಯಿಂದ ವಿಂಡೀಸ್ ಆಟಗಾರರು ನಲುಗಿ ಹೋಗಿದ್ದರು. ಅಂಥಾ ಸಮಯದಲ್ಲಿ ಕೆರಿಬಿಯನ್ನರಿಗೆ ನೆರವಾಗಿದ್ದು, ಟೀಂ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ.

ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ವೆಸ್ಟ್​ ಇಂಡೀಸ್​ ತಂಡಕ್ಕೆ ಸೌರವ್​ ಗಂಗೂಲಿ ಸಹಾಯ ಹಸ್ತ ಚಾಚಿದ್ದರು. ಹೀಗೆ ಕಷ್ಟದಲ್ಲಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಕೆರಿಬಿಯನ್ನರು ಭರ್ಜರಿ ಪ್ರದರ್ಶನ ತೋರಿದ್ದರು. ಕೋಲ್ಕತ್ತಾದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಆಂಗ್ಲರನ್ನು ಸದೆ ಬಡಿದು ಟಿ-20 ವಿಶ್ವಕಪ್​ ಮುಡಿಗೇರಿಸಿಕೊಂಡಿದ್ದರು.

ಏಕದಿನ ವಿಶ್ವಕಪ್​ನಲ್ಲೂ ಮರುಕಳಿಸುವುದೇ ಇತಿಹಾಸ!
2016ರಂತೆ ಆರ್ಥಿಕ ಸಮಸ್ಯೆ ಇಲ್ಲದಿದ್ದರೂ 2019ರ ಏಕದಿನ ವಿಶ್ವಕಪ್​ ಕ್ರಿಕೆಟ್​ ಟೂರ್ನಿಗೆ ಅರ್ಹತೆ ಪಡೆಯಬೇಕಾದರೆ ವಿಂಡೀಸ್​ ಸಾಕಷ್ಟು ಕಷ್ಟಪಡಬೇಕಾಯಿತು. ವಿಂಡೀಸ್​ ಹೀಗೆ ಕಷ್ಟಪಟ್ಟು ಭಾಗವಹಿಸಿದ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಪ್ರಸಕ್ತ ಟೂರ್ನಿಯಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ಕೆರಿಬಿಯನ್ನರು ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಎರಡನೇ ಪಂದ್ಯದಲ್ಲಿ ಬಲಿಷ್ಟ ಆಸೀಸ್​ ವಿರುದ್ಧ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಈ ಬಾರಿಯೂ ಕೂಡ ವಿಂಡೀಸ್​ 2019ರ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

Intro:Body:

1 2019 BJP, CONGRESS CANDIDATES (1).JPG  

Conclusion:
Last Updated : Jun 6, 2019, 9:00 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.