ಹೈದರಾಬಾದ್: ಸುಮಾರು ಒಂದೂವರೆ ತಿಂಗಳುಗಳ ಕಾಲ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದ ವಿಶ್ವಕಪ್ ಟೂರ್ನಿಗೆ ಅದ್ಧೂರಿ ತೆರೆ ಬಿದ್ದಿದ್ದು, ಫ್ಯಾನ್ಸ್ ಸೋಲು-ಗೆಲುವಿನ ಬಗ್ಗೆ ತಮ್ಮದೇ ರೀತಿಯಲ್ಲಿ ವಿಮರ್ಶೆ ಮಾಡುತ್ತಿದ್ದಾರೆ.
ಎಲ್ಲ ವಿಚಾರಗಳಿಗೂ ವೇಗವಾಗಿ ಸ್ಪಂದಿಸುವ ಸಾಮಾಜಿಕ ಜಾಲತಾಣ ವಿಶ್ವಕಪ್ ವೇಳೆಯೂ ಸಕ್ರಿಯವಾಗಿ ಕಾರ್ಯನಿರ್ವಹಿಸಿದೆ. ಅದರಲ್ಲೂ ವಿಶೇಷವಾಗಿ ಟ್ವಿಟರ್ನಲ್ಲಿ ಈ ಬಾರಿ ನಡೆದ ಸಂವಹನ ಕಳೆದ ಆವೃತ್ತಿಯ ವಿಶ್ವಕಪ್ಗಿಂತ ದ್ವಿಗುಣವಾಗಿದೆ.
ಈ ಬಾರಿಯ ವಿಶ್ವಕಪ್ ವೇಳೆ ಬರೋಬ್ಬರಿ ಮೂರು ಕೋಟಿ ಹತ್ತು ಲಕ್ಷ ಟ್ವೀಟ್ಗಳು ದಾಖಲಾಗಿವೆ. ಟೀಮ್ ಇಂಡಿಯಾದ ಬಗ್ಗೆ ಅತೀ ಹೆಚ್ಚಿನ ಟ್ವೀಟ್ ಮಾಡಲಾಗಿದೆ. ಎಂ.ಎಸ್.ಧೋನಿ ಹಾಗೂ ವಿರಾಟ್ ಕೊಹ್ಲಿ ಅತೀ ಹೆಚ್ಚು ಟ್ವೀಟ್ಗೊಳಗಾದ ನಾಯಕರಾಗಿದ್ದಾರೆ.
ಗೋಲ್ಡನ್ ಟ್ವೀಟ್..!
ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಕ್ಯಾಮರ ಕಣ್ಣಿಗೆ ಬಿದ್ದು ಎಲ್ಲೆಡೆ ಸುದ್ದಿಯಾಗಿದ್ದ ಭಾರತೀಯ ಮೂಲದ ಚಾರುಲತಾ ಪಟೇಲ್ರನ್ನು ಭೇಟಿ ಮಾಡಿದ ಕೊಹ್ಲಿ ಫೋಟೋವನ್ನು ವಿಶ್ವಕಪ್ನ ಗೋಲ್ಡನ್ ಟ್ವೀಟ್ ಎಂದು ಪರಿಗಣಿಸಲಾಗಿದೆ.
-
Also would like to thank all our fans for all the love & support & especially Charulata Patel ji. She's 87 and probably one of the most passionate & dedicated fans I've ever seen. Age is just a number, passion takes you leaps & bounds. With her blessings, on to the next one. 🙏🏼😇 pic.twitter.com/XHII8zw1F2
— Virat Kohli (@imVkohli) July 2, 2019 " class="align-text-top noRightClick twitterSection" data="
">Also would like to thank all our fans for all the love & support & especially Charulata Patel ji. She's 87 and probably one of the most passionate & dedicated fans I've ever seen. Age is just a number, passion takes you leaps & bounds. With her blessings, on to the next one. 🙏🏼😇 pic.twitter.com/XHII8zw1F2
— Virat Kohli (@imVkohli) July 2, 2019Also would like to thank all our fans for all the love & support & especially Charulata Patel ji. She's 87 and probably one of the most passionate & dedicated fans I've ever seen. Age is just a number, passion takes you leaps & bounds. With her blessings, on to the next one. 🙏🏼😇 pic.twitter.com/XHII8zw1F2
— Virat Kohli (@imVkohli) July 2, 2019
ಈ ಪಂದ್ಯಕ್ಕೆ ಅತೀ ಹೆಚ್ಚು ಟ್ವೀಟ್
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಅತೀ ಹೆಚ್ಚು ಟ್ವೀಟ್ಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ವಿಶ್ವಕಪ್ ಫೈನಲ್ ಪಂದ್ಯವಿದ್ದರೆ ಮೂರನೇ ಸ್ಥಾನದಲ್ಲಿ ಭಾರತ-ನ್ಯೂಜಿಲ್ಯಾಂಡ್ ನಡುವಿನ ಸೆಮಿಫೈನಲ್ ಪಂದ್ಯವಿದೆ.