ETV Bharat / sports

ಮಳೆ, ಡಕ್​ವರ್ತ್ ಮತ್ತು ಚೋಕರ್ಸ್​ ಹಣೆಪಟ್ಟಿ: ವಿಶ್ವಕಪ್ ಕನಸಲ್ಲೇ ಕಳೆದುಹೋಯ್ತು ಎರಡೂವರೆ ದಶಕ!

ಪ್ರತಿ ವಿಶ್ವಕಪ್​​ ಬಂದಾಗಲೂ ಕೇಳಿಬರುವ ಒಂದು ಪದ ಚೋಕರ್ಸ್​. ಎಲ್ಲ ಕ್ರಿಕೆಟ್ ಪ್ರೇಮಿಗಳೂ ಉಚ್ಚರಿಸುವ ಈ ಪದ ಹುಟ್ಟಿದ್ದೆಲ್ಲಿ? ಯಾಕೆ ಈ ಪದ ಜನಿಸಿತು ಎನ್ನುವ ಕುತೂಹಲಭರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಚೋಕರ್ಸ್
author img

By

Published : Jun 21, 2019, 10:08 PM IST

Updated : Jun 21, 2019, 11:21 PM IST

ಲಂಡನ್​​: ವಿಶ್ವಕ್ರಿಕೆಟ್​ನ ಬಲಿಷ್ಠ ತಂಡಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಒಂದು ತಂಡ ಎಂದರೆ ಅದು ದಕ್ಷಿಣ ಆಫ್ರಿಕಾ. ಆದರೆ ಈ ತಂಡಕ್ಕೆ ಅಂಟಿರುವ ಅದೊಂದು ಹೆಸರು ಮಾತ್ರ ಶಾಶ್ವತವಾಗಿ ಉಳಿಯಲಿದೆಯಾ ಎನ್ನುವ ಅನುಮಾನ ಮೂಡಿದೆ.

ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್​ಗೂ ಮುನ್ನ ಅದೆಷ್ಟೇ ಅದ್ಭುತ ಪ್ರದರ್ಶನ ನೀಡಿದ್ದರೂ, ವರ್ಲ್ಡ್​ಕಪ್​ನಲ್ಲಿ ಮಾತ್ರ ನೀರಸ ಸಾಧನೆ ತೋರಿ 'ಚೋಕರ್ಸ್'​ ಎನ್ನುವ ಹಣೆಪಟ್ಟಿ ಹೊತ್ತುಕೊಂಡಿದೆ. ಈ ಬಾರಿಯ ವಿಶ್ವಕಪ್​ನಲ್ಲಾದರೂ ಈ ಚೋಕರ್ಸ್​ ಟ್ಯಾಗ್​ಲೈನ್​ ಬರದಂತೆ ಸಾಕಷ್ಟು ಎಚ್ಚರ ವಹಿಸಿದ್ದ ಫ್ಲೆಸಿಸ್ ಪಡೆ ಮತ್ತೆ ವಿಶ್ವಕಪ್​ನಲ್ಲಿ ಸರಣಿ ಸೋಲು ಕಂಡಿದೆ.

South Africa
ದಕ್ಷಿಣ ಆಫ್ರಿಕಾ ತಂಡ

ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಮೂಲಕ ಈ ಬಾರಿಯ ವಿಶ್ವಕಪ್ ವಿಧ್ಯುಕ್ತವಾಗಿ ಆರಂಭವಾಗಿತ್ತು. ಪ್ರಥಮ ಪಂದ್ಯದಲ್ಲೇ ಆಫ್ರಿಕನ್ನರು ಬರೋಬ್ಬರಿ 104 ರನ್​ಗಳಿಂದ ಪರಾಭವಗೊಂಡಿದ್ದರು. ನಂತರದಲ್ಲಿ ಎದುರಾಗಿದ್ದು ಬಾಂಗ್ಲಾದೇಶ ತಂಡ.

ಬಾಂಗ್ಲಾದೇಶವನ್ನು ಸುಲಭವಾಗಿ ಮಣಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದ ಫ್ಲೆಸಿಸ್​ ಪಡೆಗೆ ಬಾಂಗ್ಲಾ ಟೈಗರ್ಸ್​ 21 ರನ್​ಗಳಿಂದ ಸೋಲುಣಿಸುವ ಮೂಲಕ ಶಾಕ್ ನೀಡಿದ್ದರು. ಮೂರನೇ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಆರು ವಿಕೆಟ್​ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು. ವಿಂಡೀಸ್​ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ನಾಲ್ಕನೇ ಪಂದ್ಯದಲ್ಲಿ ಮೈದಾನಕ್ಕಿಳಿಯದೇ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಖಾತೆ ತೆರೆದಿತ್ತು.

ದಕ್ಷಿಣ ಆಫ್ರಿಕಾ ಗೆಲುವ ಸಾಧಿಸಿದ್ದು ತನ್ನ ಐದನೇ ಪಂದ್ಯದಲ್ಲಿ ಎನ್ನುವುದು ವಿಶೇಷ. ಅದೂ ಸಹ ದುರ್ಬಲ ಅಫ್ಘಾನಿಸ್ತಾನವನ್ನು ಒಂಭತ್ತು ವಿಕೆಟ್​ಗಳಿಂದ ಮಣಿಸಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿತ್ತು. ಬುಧವಾರ ನ್ಯೂಜಿಲ್ಯಾಂಡ್ ವಿರುದ್ಧ ಸಹ ಆಫ್ರಿಕನ್ನರು ಮತ್ತದೇ ಸೋಲಿನ ಸುಳಿಗೆ ಸಿಲುಕಿದರು.

South Africa
ನ್ಯೂಜಿಲ್ಯಾಂಡ್ ವಿರುದ್ಧ ಕೊನೆ ಓವರ್​ನಲ್ಲಿ ಸೋತ ಫ್ಲೆಸಿಸ್ ಪಡೆ

ಈ ಬಾರಿಯ ವಿಶ್ವಕಪ್​ನಲ್ಲೂ ಸೋಲನ್ನೇ ಕಾಣುತ್ತಿರುವ ದಕ್ಷಿಣ ಆಫ್ರಿಕಾ ತಂಡ ಚೋಕರ್ಸ್​ ಟ್ಯಾಗ್​ಲೈನ್​ನಿಂದ ಹೊರಬಂದಿಲ್ಲ. ಕಪ್​ ಗೆಲ್ಲುವ ಹಾದಿ ಪಂದ್ಯದಿಂದ ಪಂದ್ಯಕ್ಕೆ ದುರ್ಗಮಗೊಳ್ಳುತ್ತಿದೆ. ಮತ್ತೊಮ್ಮೆ ಚೋಕರ್ಸ್​ ಹಣೆಪಟ್ಟಿ ಅಂಟಿಸಿಕೊಳ್ಳಲು ಸಿದ್ಧವಾಗುತ್ತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಪದ ಬಂದಿದ್ದೆಲ್ಲಿಂದ ಎನ್ನುವ ಮಾಹಿತಿ ಇಲ್ಲಿದೆ.
ಡಕ್​ವರ್ತ್​ ಹೆಸರಿನ ವಿಲನ್​!

ನಿಷೇಧದ ಬಳಿಕ ಕ್ರಿಕೆಟ್​​ಗೆ ಕಂಬ್ಯಾಕ್ ಮಾಡಿದ್ದ ದಕ್ಷಿಣ ಆಫ್ರಿಕಾ 1992ರಲ್ಲಿ ಕಾಣಿಸಿಕೊಂಡಿತ್ತು. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಆಫ್ರಿಕಾ ತಂಡ ಸೆಮೀಸ್​ ಪ್ರವೇಶಿಸಿತ್ತು. ಇಂಗ್ಲೆಂಡ್ ತಂಡ ನೀಡಿದ 252 ರನ್​ಗಳ ಗುರಿಯನ್ನು ಬೆನ್ನತ್ತುತ್ತಿದ್ದ ವೇಳೆ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ಆಮೇಲೆ ನಡೆದಿದ್ದು ವಿಶ್ವಕಪ್ ಇತಿಹಾಸ ಅತ್ಯಂತ ಕೆಟ್ಟ ಕ್ಲೈಮ್ಯಾಕ್ಸ್!

ಆ ಕಾಲದಲ್ಲಿ ಮಳೆ ಬಂದಾಗ ಪಂದ್ಯವನ್ನು ನಿಲ್ಲಿಸುವ ಅವಕಾಶ ಇರಲಿಲ್ಲ. ಟೆಲಿವಿಷನ್ ನಿಯಮದಂತೆ ಪಂದ್ಯವನ್ನು ನಿಲ್ಲಿಸಿ ಮಳೆ ನಿಲ್ಲುವವರೆಗೆ ಕಾಯುವಂತಿರಲಿಲ್ಲ. ಹೀಗಾಗಿ ಅಂಪೈರ್​​ ಓವರ್ ಕಡಿತ ಮಾಡಲು ನಿರ್ಧರಿಸಿದ್ದಾರೆ. 13 ಎಸೆತಕ್ಕೆ 22 ರನ್ ಬೇಕಿದ್ದ ಪಂದ್ಯ ಡಕ್​ವರ್ತ್ ಲೂಯಿಸ್ ನಿಯಮದಲ್ಲಿ ಕಡಿತಗೊಂಡಾಗ ಆಗಿದ್ದು ಒಂದು ಎಸೆತಕ್ಕೆ 22 ರನ್​! ಪಂದ್ಯ ಕೊನೆಗೊಂಡಾಗ ಕೇಳಿಬಂದಿದ್ದು ಚೋಕರ್ಸ್​ ಎನ್ನುವ ಕೂಗು. ಈ ಕೂಗು ನಂತರದ ಬಹುತೇಕ ವಿಶ್ವಕಪ್ ಟೂರ್ನಿಯಲ್ಲಿ ಪುನರಾವರ್ತನೆಯಾಗುತ್ತಲೇ ಬಂತು.

South Africa
1992ರ ವಿಶ್ವಕಪ್​​ನ ಕೊನೆಯ ಎಸೆತದ ಚಿತ್ರಣ

ಈ ಪಂದ್ಯದ ಬಳಿಕ ಡಕ್​ವರ್ತ್​ ಲೂಯಿಸ್ ನಿಯಮದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯಿತು. ನಿಯಮವನ್ನು ಸರಳಗೊಳಿಸುವಂತೆ ಸಾಕಷ್ಟು ಒತ್ತಾಯ ಬಂದಿತ್ತು. ಆದರೂ ಈ ನಿಯಮ ಇಂದಿಗೂ ಅದೆಷ್ಟೋ ಕ್ರಿಕೆಟಿಗರಿಗೆ ಹಾಗೂ ಕ್ರಿಕೆಟ್​​ ಫ್ಯಾನ್ಸ್​​ಗೆ ಅರ್ಥವಾಗದೆ ಕಗ್ಗಂಟಾಗಿಯೇ ಉಳಿದಿದೆ.

ಐತಿಹಾಸಿಕ ರನ್​ಔಟ್!

1999ರ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ಮತ್ತೆ ಸೆಮೀಸ್​ಗೆ ಲಗ್ಗೆ ಇಟ್ಟಿತ್ತು. ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ ಆಫ್ರಿಕನ್ನರು ಉಪಾಂತ್ಯಕ್ಕಾಗಿ ಸೆಣಸಾಟ ನಡೆಸಿದ್ದರು.

ಈ ಬಾರಿಯ ಸೆಮಿಫೈನಲ್​ನಲ್ಲಿ ಆಫ್ರಿಕನ್ನರಿಗೆ 214 ರನ್​ಗಳ ಗುರಿ ನೀಡಲಾಗಿತ್ತು. ಮೈಕೆಲ್ ಬೆವನ್​ 65 ರನ್​ ಸಿಡಿಸಿದ್ದರೆ ಅತ್ತ ಶಾನ್ ಪೊಲಾಕ್​ 36 ರನ್ ನೀಡಿ 5 ವಿಕೆಟ್ ಕಿತ್ತಿದ್ದರು.

214 ರನ್​​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ಕೊನೆಯ ಓವರ್​ನಲ್ಲಿ ಒಂಭತ್ತು ರನ್​ಗಳ ಅಗತ್ಯವಿರುತ್ತದೆ. ದಕ್ಷಿಣ ಆಫ್ರಿಕಾ ಕೈಯಲ್ಲಿದ್ದಿದ್ದು ಕೊನೆಯ ವಿಕೆಟ್. ಉತ್ತಮವಾಗಿ ಆಡುತ್ತಿದ್ದ ಕ್ಲೂಸ್ನರ್​​ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುತ್ತಾರೆ. ಎರಡನೇ ಎಸೆತವೂ ಚೆಂಡು ಬೌಂಡರಿ ಗೆರೆ ದಾಟಿತ್ತು. ನಾಲ್ಕು ಎಸೆತದಲ್ಲಿ ಬೇಕಿದ್ದಿದ್ದು ಒಂಟಿ ರನ್​. ಆದರೂ ಆಫ್ರಿಕನ್ನರ ವಿಶ್ವಕಪ್ ಪ್ರಯಾಣ ಇಲ್ಲೇ ಅಂತ್ಯವಾಗಿತ್ತು ಎನ್ನುವುದು ವಿಶೇಷ.

South Africa
1999ರ ಜನಪ್ರಿಯ ರನ್​ಔಟ್

ಮೂರನೇ ಎಸೆತದಲ್ಲಿ ಯಾವುದೇ ರನ್​ ಬರುವುದಿಲ್ಲ. ನಾಲ್ಕನೇ ಎಸೆತದಲ್ಲಿ ವಿಕೆಟ್ ನೇರಕ್ಕೆ ಬಾರಿಸುವ ಕ್ಲೂಸ್ನರ್​ ಗೆಲುವಿನ ಓಟ ಕದಿಯುವ ಪ್ರಯತ್ನ ಮಾಡುತ್ತಾರೆ. ನಾನ್​ ಸ್ಟ್ರೈಕ್​ನಲ್ಲಿದ್ದ ಅಲನ್​ ಡೊನಾಲ್ಡ್​​ ಕೊಂಚ ನಿಧಾನವಾಗಿ ಓಟ ಪಾರಂಭಿಸಿ ರನ್​ ಔಟಾಗುತ್ತಾರೆ. ಪಂದ್ಯ ಟೈನಲ್ಲಿ ಅಂತ್ಯ ಕಮಡರೂ ಹಿಂದಿನ ಪಂದ್ಯ ಗೆದ್ದಿದ್ದರಿಂದ ಆಸ್ಟ್ರೇಲಿಯಾ ಉಪಾಂತ್ಯ ಪ್ರವೇಶಿಸುತ್ತದೆ.

ಡಕ್​ವರ್ತ್ ಎನ್ನುವ ಬೆಂಬಿಡದ ಭೂತ:

2003ರ ವಿಶ್ವಕಪ್​ನಲ್ಲಿ ಸೂಪರ್​ ಸಿಕ್ಸ್ ಹಂತಕ್ಕೇರಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಮಳೆರಾಯ ಸೋಲಿನ ರೂಪದಲ್ಲಿ ಎಂಟ್ರಿ ನೀಡಿದ್ದ. ಶ್ರೀಲಂಕಾ ನೀಡಿದ್ದ 269 ರನ್​ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 6 ವಿಕೆಟ್​​ಗೆ 229 ರನ್​ ಗಳಿಸಿದ್ದಾಗ ಮಳೆ ಆರಂಭವಾಗಿತ್ತು.

ಡಕ್​ವರ್ತ್​ ಲೂಯಿಸ್ ನಿಯಮವನ್ನು ಸಮೀಕರಿಸಿದಾಗ ಪಂದ್ಯವನ್ನು ಟೈ ಎಂದು ಘೋಷಿಸಲಾಯಿತು. ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾಗೆ ಒಂದು ರನ್​ ಗಳಿಸಿದ್ದರೆ ಗೆಲ್ಲಬಹುದಿತ್ತು. ಕೊನೆಯ ಎಸೆತ ಎದುರಿಸಿದ್ದ ಮಾರ್ಕ್​ ಬೌಚರ್​ ಯಾವುದೇ ರನ್ ಗಳಿಸಿರಲಿಲ್ಲ.

ತವರು ಹುಡುಗನಿಂದಲೇ ಚೂರಾಯ್ತು ವಿಶ್ವಕಪ್ ಕನಸು!

2015ರ ವಿಶ್ವಕಪ್​ ಸೆಮಿ ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 281 ರನ್ ಉತ್ತಮ ಮೊತ್ತ​ ಗಳಿಸಿತ್ತು. ಮಳೆಯ ಕಾರಣದಿಂದ ಪಂದ್ಯವನ್ನು 43 ಓವರ್​ಗೆ ಸೀಮಿತಗೊಳಿಸಲಾಗಿತ್ತು.

South Africa
2015ರ ವಿಶ್ವಕಪ್​ನಲ್ಲಿ ಕೊನೆಯ ಓವರ್​ನಲ್ಲಿ ಸೋತ ಆಫ್ರಿಕನ್ನರು

ಡಕ್​ವರ್ತ್ ನಿಯಮದಂತೆ ಕಿವೀಸ್​ಗೆ 298 ರನ್​​ಗಳ ಟಾರ್ಗೆಟ್ ನೀಡಲಾಗಿತ್ತು. ಕೊನೆಯ ಓವರ್​ನಲ್ಲಿ ಕಷ್ಟಸಾಧ್ಯವಾದ 12 ರನ್​ ಅಗತ್ಯವಿತ್ತು. ಡೇಲ್ ಸ್ಟೇನ್​​ ಕೊನೆಯ ಓವರ್ ಎಸೆಯಲು ಸಿದ್ಧರಾಗಿದ್ದರು. ಉತ್ತಮವಾಗಿ ಆಡುತ್ತಿದ್ದ ಗ್ರಾಂಟ್ ಎಲಿಯಟ್ ಮೊದಲ ನಾಲ್ಕು ಎಸೆತದಲ್ಲಿ ಏಳು ರನ್​ ಕದಿಯುತ್ತಾರೆ. ಐದನೇ ಎಸೆತದಲ್ಲಿ ಎಲಿಯಟ್ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಕಿವೀಸ್​​ ಪೈನಲ್ ಎಂಟ್ರಿ ನೀಡುತ್ತದೆ. ವಿಶೇಷವೆಂದರೆ ಇದೇ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಗ್ರಾಂಟ್ ಎಲಿಯಟ್ ತವರು ತಂಡಕ್ಕೇ ಕೊನೆಯಲ್ಲಿ ವಿಲನ್ ಆಗಿದ್ದು ನಿಜಕ್ಕೂ ಆ ದೇಶಕ್ಕೆ ಅರಗಿಸಿಕೊಳ್ಳಲಾಗದ ವಿಷಯ.

South Africa
ದಕ್ಷಿಣ ಆಫ್ರಿಕಾ ತಂಡ

2019ರ ವಿಶ್ವಕಪ್​ನಲ್ಲಿ ಈಗಾಗಲೇ ಆರು ಪಂದ್ಯದಲ್ಲಿ ನಾಲ್ಕನ್ನು ಸೋತು ಬಹುತೇಕ ಟೂರ್ನಿಯ ಅಂಚಿಗೆ ಬಂದು ನಿಂತಿದೆ. ಅತಿ ಜನಪ್ರಿಯ ಚೋಕರ್ಸ್​ ಹಣೆಪಟ್ಟಿಯನ್ನು ಮತ್ತೆ ಅಂಟಿಸಿಕೊಂಡಿದೆ. ನಾಯಕರೂ ಬದಲಾದರೂ, ತಂಡ ಬದಲಾದರೂ ಚೋಕರ್ಸ್​ ಟ್ಯಾಗ್​ಲೈನ್ ಮಾತ್ರ ದಕ್ಷಿಣ ಆಫ್ರಿಕಾ ತಂಡವನ್ನು ಬಿಟ್ಟು ಹೋಗದಿರುವುದು ದೇಶದ ಕ್ರಿಕೆಟ್ ಫ್ಯಾನ್ಸ್​ಗೆ ತೀವ್ರ ಬೇಸರ ತರಿಸಿದೆ.

Intro:Body:

ಮಳೆ, ಡಕ್​ವರ್ತ್ ಮತ್ತು ಚೋಕರ್ಸ್​ ಹಣೆಪಟ್ಟಿ... ವಿಶ್ವಕಪ್ ಕನಸಲ್ಲೇ ಕಳೆದುಹೋಯ್ತು ಎರಡೂವರೆ ದಶಕ...!

ಲಂಡನ್​​: ವಿಶ್ವಕ್ರಿಕೆಟ್​ನ ಬಲಿಷ್ಠ ತಂಡಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಒಂದು ತಂಡ ಎಂದರೆ ಅದು ದಕ್ಷಿಣ ಆಫ್ರಿಕಾ. ಆದರೆ ಈ ತಂಡಕ್ಕೆ ಅಂಟಿರುವ ಅದೊಂದು ಹೆಸರು ಮಾತ್ರ ಶಾಶ್ವತವಾಗಿ ಉಳಿಯಲಿದೆಯಾ ಎನ್ನುವ ಅನುಮಾನ ಮೂಡಿದೆ.

ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್​ಗೂ ಮುನ್ನ ಅದೆಷ್ಟೇ ಅದ್ಭುತ ಪ್ರದರ್ಶನ ನೀಡಿದ್ದರೂ, ವರ್ಲ್ಡ್​ಕಪ್​ನಲ್ಲಿ ಮಾತ್ರ ನೀರಸ ಸಾಧನೆ ತೋರಿ 'ಚೋಕರ್ಸ್'​ ಎನ್ನುವ ಹಣೆಪಟ್ಟಿ ಹೊತ್ತುಕೊಂಡಿದೆ. ಈ ಬಾರಿಯ ವಿಶ್ವಕಪ್​ನಲ್ಲಾದರೂ ಈ ಚೋಕರ್ಸ್​ ಟ್ಯಾಗ್​ಲೈನ್​ ಬರದಂತೆ ಸಾಕಷ್ಟು ಎಚ್ಚರ ವಹಿಸಿದ್ದ ಫ್ಲೆಸಿಸ್ ಪಡೆ ಮತ್ತೆ ವಿಶ್ವಕಪ್​ನಲ್ಲಿ ಸರಣಿ ಸೋಲು ಕಂಡಿದೆ.

ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಮೂಲಕ ಈ ಬಾರಿಯ ವಿಶ್ವಕಪ್ ವಿಧ್ಯುಕ್ತವಾಗಿ ಆರಂಭವಾಗಿತ್ತು. ಪ್ರಥಮ ಪಂದ್ಯದಲ್ಲೇ ಆಫ್ರಿಕನ್ನರು ಬರೋಬ್ಬರಿ 104 ರನ್​ಗಳಿಂದ ಪರಾಭವಗೊಂಡಿದ್ದರು. ನಂತರದಲ್ಲಿ ಎದುರಾಗಿದ್ದು ಬಾಂಗ್ಲಾದೇಶ ತಂಡ.

ಬಾಂಗ್ಲಾದೇಶವನ್ನು ಸುಲಭವಾಗಿ ಮಣಿಸಲಬಹುದು ಎಂದು ಲೆಕ್ಕಾಚಾರ ಹಾಕಿದ್ದ ಫ್ಲೆಸಿಸ್​ ಪಡೆಗೆ ಬಾಂಗ್ಲಾ ಟೈಗರ್ಸ್​ 21 ರನ್​ಗಳಿಂದ ಸೋಲುಣಿಸುವ ಮೂಲಕ ಶಾಕ್ ನೀಡಿದ್ದರು. ಮೂರನೇ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಆರು ವಿಕೆಟ್​ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು. ವಿಂಡೀಸ್​ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ನಾಲ್ಕನೇ ಪಂದ್ಯದಲ್ಲಿ ಮೈದಾನಕ್ಕಿಳಿಯದೇ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಖಾತೆ ತೆರೆದಿತ್ತು.

ದಕ್ಷಿಣ ಆಫ್ರಿಕಾ ಗೆಲುವ ಸಾಧಿಸಿದ್ದು ತನ್ನ ಐದನೇ ಪಂದ್ಯದಲ್ಲಿ ಎನ್ನುವುದು ವಿಶೇಷ. ಅದೂ ಸಹ ದುರ್ಬಲ ಅಫ್ಘಾನಿಸ್ತಾನವನ್ನು ಒಂಭತ್ತು ವಿಕೆಟ್​ಗಳಿಂದ ಮಣಿಸಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿತ್ತು.  ಬುಧವಾರ ನ್ಯೂಜಿಲ್ಯಾಂಡ್ ವಿರುದ್ಧ ಸಹ ಆಫ್ರಿಕನ್ನರು ಮತ್ತದೇ ಸೋಲಿನ ಸುಳಿಗೆ ಸಿಲುಕಿದರು.

ಈ ಬಾರಿಯ ವಿಶ್ವಕಪ್​ನಲ್ಲೂ ಸೋಲನ್ನೇ ಕಾಣುತ್ತಿರುವ ದಕ್ಷಿಣ ಆಫ್ರಿಕಾ ತಂಡ ಚೋಕರ್ಸ್​ ಟ್ಯಾಗ್​ಲೈನ್​ನಿಂದ ಹೊರಬಂದಿಲ್ಲ. ಕಪ್​ ಗೆಲ್ಲುವ ಹಾದಿ ಪಂದ್ಯದಿಂದ ಪಂದ್ಯಕ್ಕೆ ದುರ್ಗಮವಾಗುತ್ತಿದೆ.

ಯಾಕೆ ಬಂತು ಚೋಕರ್ಸ್​ ಹೆಸರು..?

ಡಕ್​ವರ್ತ್​ ಹೆಸರಿನ ವಿಲನ್​..!

ನಿಷೇಧದ ಬಳಿಕ ಕ್ರಿಕೆಟ್​​ಗೆ ಕಂಬ್ಯಾಕ್ ಮಾಡಿದ್ದ ದಕ್ಷಿಣ ಆಫ್ರಿಕಾ 1992ರಲ್ಲಿ ಕಾಣಿಸಿಕೊಂಡಿತ್ತು. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಆಫ್ರಿಕಾ ತಂಡ ಸೆಮೀಸ್​ ಪ್ರವೇಶಿಸಿತ್ತು. ಇಂಗ್ಲೆಂಡ್ ತಂಡ ನೀಡಿದ 252 ರನ್​ಗಳ ಗುರಿಯನ್ನು ಬೆನ್ನತ್ತುತ್ತಿದ್ದ ವೇಳೆ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ಆಮೇಲೆ ನಡೆದಿದ್ದು ವಿಶ್ವಕಪ್ ಇತಿಹಾಸ ಅತ್ಯಂತ ಕೆಟ್ಟ ಕ್ಲೈಮ್ಯಾಕ್ಸ್..!

ಆ ಕಾಲದಲ್ಲಿ ಮಳೆ ಬಂದಾಗ ಪಂದ್ಯವನ್ನು ನಿಲ್ಲಿಸುವ ಅವಕಾಶ ಇರಲಿಲ್ಲ. ಟೆಲಿವಿಷನ್ ನಿಯಮದಂತೆ ಪಂದ್ಯವನ್ನು ನಿಲ್ಲಿಸಿ ಮಳೆ ನಿಲ್ಲುವವರೆಗೆ ಕಾಯುವಂತಿರಲಿಲ್ಲ. ಹೀಗಾಗಿ ಅಂಪೈರ್​​ ಓವರ್ ಕಡಿತ ಮಾಡಲು ನಿರ್ಧರಿಸಿದ್ದಾರೆ. 13 ಎಸೆತಕ್ಕೆ 22 ರನ್ ಬೇಕಿದ್ದ ಪಂದ್ಯ ಡಕ್​ವರ್ತ್ ಲೂಯಿಸ್ ನಿಯಮದಲ್ಲಿ ಕಡಿತಗೊಂಡಾಗ ಆಗಿದ್ದು ಒಂದು ಎಸೆತಕ್ಕೆ 22 ರನ್​..! ಪಂದ್ಯ ಕೊನೆಗೊಂಡಾಗ ಕೇಳಿಬಂದಿದ್ದು ಚೋಕರ್ಸ್​ ಎನ್ನುವ ಕೂಗು. ಈ ಕೂಗು ನಂತರದ ಬಹುತೇಕ ವಿಶ್ವಕಪ್ ಟೂರ್ನಿಯಲ್ಲಿ ಪುನರಾವರ್ತನೆಯಾಗುತ್ತಲೇ ಬಂತು.

ಈ ಪಂದ್ಯದ ಬಳಿಕ ಡಕ್​ವರ್ತ್​ ಲೂಯಿಸ್ ನಿಯಮದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯಿತು. ನಿಯಮವನ್ನು ಸರಳಗೊಳಿಸುವಂತೆ ಸಾಕಷ್ಟು ಒತ್ತಾಯ ಬಂದಿತ್ತು. ಆದರೂ ಈ ನಿಯಮ ಇಂದಿಗೂ ಅದೆಷ್ಟೋ ಕ್ರಿಕೆಟಿಗರಿಗೆ ಹಾಗೂ ಕ್ರಿಕೆಟ್​​ ಫ್ಯಾನ್ಸ್​​ಗೆ ಅರ್ಥವಾಗದೆ ಕಗ್ಗಂಟಾಗಿಯೇ ಉಳಿದಿದೆ.

ಐತಿಹಾಸಿಕ ರನ್​ಔಟ್..!

199ರ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ಮತ್ತೆ ಸೆಮೀಸ್​ಗೆ ಲಗ್ಗೆ ಇಟ್ಟಿತ್ತು. ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ ಆಫ್ರಿಕನ್ನರು ಉಪಾಂತ್ಯಕ್ಕಾಗಿ ಸೆಣಸಾಟ ನಡೆಸಿದ್ದರು.

ಈ ಬಾರಿಯ ಸೆಮಿಫೈನಲ್​ನಲ್ಲಿ ಆಫ್ರಿಕನ್ನರಿಗೆ 214 ರನ್​ಗಳ ಗುರಿ ನೀಡಲಾಗಿತ್ತು. ಮೈಕೆಲ್ ಬೆವಾನ್​ 65 ರನ್​ ಸಿಡಿಸಿದ್ದರೆ ಅತ್ತ ಶಾನ್ ಪಲಾಕ್​ 36 ರನ್ ನೀಡಿ 5 ವಿಕೆಟ್ ಕಿತ್ತಿದ್ದರು.

214 ರನ್​​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ಕೊನೆಯ ಓವರ್​ನಲ್ಲಿ ಒಂಭತ್ತು ರನ್​ಗಳ ಅಗತ್ಯವಿರುತ್ತದೆ. ದಕ್ಷಿಣ ಆಫ್ರಿಕಾ ಕೈಯಲ್ಲಿದ್ದಿದ್ದು ಕೊನೆಯ ವಿಕೆಟ್. ಉತ್ತಮವಾಗಿ ಆಡುತ್ತಿದ್ದ ಕ್ಲೂಸ್ನರ್​​ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುತ್ತಾರೆ. ಎರಡನೇ ಎಸೆತವೂ ಚೆಂಡು ಬೌಂಡರಿ ಗೆರೆ ದಾಟಿತ್ತು. ನಾಲ್ಕು ಎಸೆತದಲ್ಲಿ ಬೇಕಿದ್ದಿದ್ದು ಒಂಟಿ ರನ್​. ಆದರೂ ಆಫ್ರಿಕನ್ನರ ವಿಶ್ವಕಪ್ ಪ್ರಯಾಣ ಇಲ್ಲೇ ಅಂತ್ಯವಾಗಿತ್ತು ಎನ್ನುವುದು ವಿಶೇಷ.

ಮೂರನೇ ಎಸೆತದಲ್ಲಿ ಯಾವುದೇ ರನ್​ ಬರುವುದಿಲ್ಲ. ನಾಲ್ಕನೇ ಎಸೆತದಲ್ಲಿ ವಿಕೆಟ್ ನೇರಕ್ಕೆ ಬಾರಿಸುವ ಕ್ಲೂಸ್ನರ್​ ಗೆಲುವಿನ ಓಟ ಕದಿಯುವ ಪ್ರಯತ್ನ ಮಾಡುತ್ತಾರೆ. ನಾನ್​ ಸ್ಟ್ರೈಕ್​ನಲ್ಲಿದ್ದ ಅಲನ್​ ಡೊನಾಲ್ಡ್​​ ಕೊಂಚ ನಿಧಾನವಾಗಿ ಓಟ ಪಾರಂಭಿಸಿ ರನ್​ ಔಟಾಗುತ್ತಾರೆ. ಪಂದ್ಯ ಟೈನಲ್ಲಿ ಅಂತ್ಯ ಕಮಡರೂ ಹಿಂದಿನ ಪಂದ್ಯ ಗೆದ್ದಿದ್ದರಿಂದ ಆಸ್ಟ್ರೇಲಿಯಾ ಉಪಾಂತ್ಯ ಪ್ರವೇಶಿಸುತ್ತದೆ.

ಡಕ್​ವರ್ತ್ ಎನ್ನುವ ಬೆಂಬಿಡದ ಭೂತ:

2003ರ ವಿಶ್ವಕಪ್​ನಲ್ಲಿ ಸೂಪರ್​ ಸಿಕ್ಸ್ ಹಂತಕ್ಕೇರಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಮಳೆರಾಯ ಸೋಲಿನ ರೂಪದಲ್ಲಿ ಎಂಟ್ರಿ ನೀಡಿದ್ದ. ಶ್ರೀಲಂಕಾ ನೀಡಿದ್ದ 269 ರನ್​ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 6 ವಿಕೆಟ್​​ಗೆ 229 ರನ್​ ಗಳಿಸಿದ್ದಾಗ ಮಳೆ ಆರಂಭವಾಗಿತ್ತು.

ಡಕ್​ವರ್ತ್​ ಲೂಯಿಸ್ ನಿಯಮವನ್ನು ಸಮೀಕರಿಸಿದಾಗ ಪಂದ್ಯವನ್ನು ಟೈ ಎಂದು ಘೋಷಿಸಲಾಯಿತು. ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾಗೆ ಒಂದು ರನ್​ ಗಳಿಸಿದ್ದರೆ ಗೆಲ್ಲಬಹುದಿತ್ತು. ಕೊನೆಯ ಎಸೆತ ಎದುರಿಸಿದ್ದ ಮಾರ್ಕ್​ ಬೌಚರ್​ ಯಾವುದೇ ರನ್ ಗಳಿಸಿರಲಿಲ್ಲ.

ತವರು ಹುಡುಗನಿಂದಲೇ ಕಮರಿದ ವಿಶ್ವಕಪ್ ಕನಸು:

2015ರ ವಿಶ್ವಕಪ್​ ಸೆಮಿ ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 281 ರನ್ ಉತ್ತಮ ಮೊತ್ತ​ ಗಳಿಸಿತ್ತು. ಮಳೆಯ ಕಾರಣದಿಂದ ಪಂದ್ಯವನ್ನು 43 ಓವರ್​ಗೆ ಸೀಮಿತಗೊಳಿಸಲಾಗಿತ್ತು.

ಡಕ್​ವರ್ತ್ ನಿಯಮದಂತೆ ಕಿವೀಸ್​ಗೆ 298 ರನ್​​ಗಳ ಟಾರ್ಗೆಟ್ ನೀಡಲಾಗಿತ್ತು. ಕೊನೆಯ ಓವರ್​ನಲ್ಲಿ ಕಷ್ಟಸಾಧ್ಯವಾದ 12 ರನ್​ ಅಗತ್ಯವಿತ್ತು. ಡೇಲ್ ಸ್ಟೇನ್​​ ಕೊನೆಯ ಓವರ್ ಎಸೆಯಲು ಸಿದ್ಧರಾಗಿದ್ದರು. ಉತ್ತಮವಾಗಿ ಆಡುತ್ತಿದ್ದ ಗ್ರಾಂಟ್ ಎಲಿಯಟ್ ಮೊದಲ ನಾಲ್ಕು ಎಸೆತದಲ್ಲಿ ಏಳು ರನ್​ ಕದಿಯುತ್ತಾರೆ. ಐದನೇ ಎಸೆತದಲ್ಲಿ ಎಲಿಯಟ್ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಕಿವೀಸ್​​ ಪೈನಲ್ ಎಂಟ್ರಿ ನೀಡುತ್ತದೆ. ವಿಶೇಷವೆಂದರೆ ಇದೇ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಗ್ರಾಂಟ್ ಎಲಿಯಟ್ ತವರು ತಂಡಕ್ಕೇ ಕೊನೆಯಲ್ಲಿ ವಿಲನ್ ಆಗಿದ್ದು ನಿಜಕ್ಕೂ ಆ ದೇಶಕ್ಕೆ ಅರಗಿಸಿಕೊಳ್ಳಲಾಗದ ವಿಷಯ.

2019ರ ವಿಶ್ವಕಪ್​ನಲ್ಲಿ ಈಗಾಗಲೇ ಆರು ಪಂದ್ಯದಲ್ಲಿ ನಾಲ್ಕನ್ನು ಸೋತು ಬಹುತೇಕ ಟೂರ್ನಿಯ ಅಂಚಿಗೆ ಬಂದು ನಿಂತಿದೆ. ಅತಿ ಜನಪ್ರಿಯ ಚೋಕರ್ಸ್​ ಹಣೆಪಟ್ಟಿಯನ್ನು ಮತ್ತೆ ಅಂಟಿಸಿಕೊಂಡಿದೆ. ನಾಯಕರೂ ಬದಲಾದರೂ, ತಂಡ ಬದಲಾದರೂ ಚೋಕರ್ಸ್​ ಟ್ಯಾಗ್​ಲೈನ್ ಮಾತ್ರ ದಕ್ಷಿಣ ಆಫ್ರಿಕಾ ತಂಡವನ್ನು ಬಿಟ್ಟು ಹೋಗದಿರುವುದು ದೇಶದ ಕ್ರಿಕೆಟ್ ಫ್ಯಾನ್ಸ್​ಗೆ ತೀವ್ರ ಬೇಸರ ತರಿಸಿದೆ.

Conclusion:
Last Updated : Jun 21, 2019, 11:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.