ಮ್ಯಾಂಚೆಸ್ಟರ್ (ಇಂಗ್ಲೆಂಡ್) : ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾರತ ಗೆದ್ದು ಬೀಗಿದ್ದು, ಕೋಟ್ಯಾಂತರ ಅಭಿಮಾನಿಗಳ ಆಶಯ ಕಡೆಗೂ ನೆರವೇರಿದೆ.
ಮ್ಯಾಂಚೆಸ್ಟರ್ನ ಎಮಿರೇಟ್ಸ್ ಓಲ್ಡ್ ಟ್ಯಾಫೋರ್ಡ್ ಮೈದಾನದಲ್ಲಿ ನಡೆದ ಇಂಡೋ ಪಾಕ್ ಕದನದಲ್ಲಿ, ಗೆಲ್ಲುವ ಫೇವರೇಟ್ ಟೀಂ ಇಂಡಿಯಾ, ಡಕ್ವರ್ತ್ ಲೂಯೀಸ್ ನಿಯಮದ ಪ್ರಕಾರ 89 ರನ್ಗಳ ಅಂತರದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದಿದೆ.
-
India win by 89 runs!
— Cricket World Cup (@cricketworldcup) June 16, 2019 " class="align-text-top noRightClick twitterSection" data="
A convincing victory for India as they win their third match of #CWC19#CWC19 | #INDvPAK pic.twitter.com/WIaNlki4AF
">India win by 89 runs!
— Cricket World Cup (@cricketworldcup) June 16, 2019
A convincing victory for India as they win their third match of #CWC19#CWC19 | #INDvPAK pic.twitter.com/WIaNlki4AFIndia win by 89 runs!
— Cricket World Cup (@cricketworldcup) June 16, 2019
A convincing victory for India as they win their third match of #CWC19#CWC19 | #INDvPAK pic.twitter.com/WIaNlki4AF
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿ ಪಾಕ್ಗೆ ಬೃಹತ್ ಟಾರ್ಗೆಟ್ ನೀಡಿತು. ಗುರಿ ಬೆನ್ನತ್ತಿದ ಪಾಕ್, ಆರಂಭದಲ್ಲೇ ಆಘಾತಕ್ಕೊಳಗಾಯ್ತು. ಪಾಕ್ನ ಆರಂಭಿಕ ಆಟಗಾರರಾದ ಇಮಾಮ್ -ಉಲ್-ಹಕ್ ಹಾಗೂ ಫಖಾರ್ ಝಮಾನ್ ತಾಳ್ಮೆಯ ಆಟಕ್ಕೆ ಮುಂದಾದರು. ಆದರೆ ತಮ್ಮ ಮೊದಲ ಎಸೆತದಲ್ಲೇ ವಿಜಯ್ ಶಂಕರ್, ಇಮಾಮ್ -ಉಲ್-ಹಕ್(7)ರನ್ನು ಎಲ್ಬಿಡ್ಲ್ಯೂ ಬಲೆಗೆ ಬೀಳಿಸಿದರು. ಬಳಿಕ ಒಂದಾದ ಫಖಾರ್ ಝಮಾನ್ ಹಾಗೂ ಬಾಬರ್ ಅಝಾಮ್ ಶತಕದ ಜೊತೆಯಾಟ ನೀಡಿದರು.
48 ರನ್ಗಳಿಸಿ ಕ್ರೀಸ್ಗಚ್ಚಿ ಆಡುತ್ತಿದ್ದ ಬಾಬರ್ ಅಝಾಮ್, ಕುಲ್ದೀಪ್ ಯಾದವ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಆ ಬಳಿಕ ಪಾಕ್ ಆಟಗಾರರು, ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಆಕರ್ಷಕ ಅರ್ಧಶತಕ ದಾಖಲಿಸಿ ಆಡುತ್ತಿದ್ದ ಫಖಾರ್ ಝಮಾನ್ಗೆ ಮತ್ತೆ ಕುಲ್ದೀಪ್ ಕಂಟಕವಾದರು. ಬಳಿಕ ಬಂದ ಅನುಭವಿ ಆಟಗಾರ ಮೊಹಮ್ಮದ್ ಹಫೀಝ್(9) ಭಾರೀ ಹೊಡೆತಗಳಿಗೆ ಮುಂದಾಗಿ, ಹಾರ್ದಿಕ್ ಪಾಂಡ್ಯಾ ಎಸೆತದಲ್ಲಿ ವಿಜಯ್ ಶಂಕರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಬಂದ ಶೋಯೆಬ್ ಮಲಿಕ್, ಹಾರ್ದಿಕ್ ಪಾಂಡ್ಯಾ ಎಸೆತದಲ್ಲಿ ಗೋಲ್ಡನ್ ಡಕ್ಗೆ ಔಟಾದರು.
ತಾಳ್ಮೆಯಿಂದ ನಾಯಕನ ಆಟಕ್ಕೆ ಮುಂದಾದ ಸರ್ಫರಾಜ್ ಅಹ್ಮದ್, 30 ಎಸೆತಗಳಲ್ಲಿ 12 ರನ್ ಗಳಿಸಿ ಆಡುತ್ತಿದ್ದಾಗ, ಶಂಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು.
ಬಳಿಕ ಇಮಾದ್ ವಾಸಮ್ ಹಾಗೂ ಶದಾಬ್ ಖಾನ್ ಜೊತೆಗೂಡಿ ಆಡುತ್ತಿದ್ದಾಗ, ಮತ್ತೆ ಎಂಟ್ರಿ ಕೊಟ್ಟ ವರುಣ, ಕೆಲಕಾಲ ಪಂದ್ಯಕ್ಕೆ ಬ್ರೇಕ್ ಕೊಟ್ಟಿತು. 35 ಒವರ್ಗಳಲ್ಲಿ ಪಾಕ್ 6 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಆಡುತ್ತಿದ್ದಾಗ ಮತ್ತೆ ಮಳೆ ಎಂಟ್ರಿ ಕೊಟ್ಟಿತು.
ಮಳೆಯಿಂದಾಗಿ ರದ್ದಾಗುವ ಹಂತದಲ್ಲಿದ್ದ ಪಂದ್ಯವು, ಮಳೆ ನಿಂತ ಬಳಿಕ ಡಕ್ವರ್ತ್ ಲೂಯೀಸ್ ನಿಯಮದ ಪ್ರಕಾರ 40 ಓವರ್ಗಳಿಗೆ ಇಳಿಯಿತು. ಪಾಕ್ಗೆ ಗೆಲ್ಲಲು ಉಳಿದ 5 ಓವರ್ಗಳಲ್ಲಿ 136 ರನ್ಗಳ ಟಾರ್ಗೆಟ್ ನೀಡಲಾಯ್ತು. ಆದರೆ ಕ್ರೀಸ್ನಲ್ಲಿದ್ದ ಇಮಾದ್ ವಾಸಮ್ ಹಾಗೂ ಶದಾಬ್ ಖಾನ್ ಗುರಿ ಬೆನ್ನತ್ತುವಲ್ಲಿ ವಿಫಲರಾದರು. ಅಂತಿಮವಾಗಿ ಪಾಕ್ 40 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಲಷ್ಟೇ ಶಕ್ತವಾಯ್ತು.
ಭಾರತದ ಪರ ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯಾ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರು.
-
Pakistan need 136 to win from five overs 😬#CWC19 | #INDvPAK https://t.co/pj5R3qFqPe
— Cricket World Cup (@cricketworldcup) June 16, 2019 " class="align-text-top noRightClick twitterSection" data="
">Pakistan need 136 to win from five overs 😬#CWC19 | #INDvPAK https://t.co/pj5R3qFqPe
— Cricket World Cup (@cricketworldcup) June 16, 2019Pakistan need 136 to win from five overs 😬#CWC19 | #INDvPAK https://t.co/pj5R3qFqPe
— Cricket World Cup (@cricketworldcup) June 16, 2019
ಭಾರತದ ಬೊಂಬಾಟ್ ಬ್ಯಾಟಿಂಗ್...
ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಉತ್ತಮ ಆರಂಭ ಕೊಟ್ಟರು. ಈ ಜೋಡಿ ಶತಕದ ಜೊತೆಯಾಟ ನೀಡಿ, ಆರಂಭದಲ್ಲೇ ಬೃಹತ್ ಮೊತ್ತ ಪೇರಿಸಿತು. ಕನ್ನಡಿಗ ಕೆ ಎಲ್ ರಾಹುಲ್ 57 ರನ್ ಸಿಡಿಸಿ ನಿರ್ಗಮಿಸಿದರೆ, ರೋಹಿತ್ ಶರ್ಮಾ ಭರ್ಜರಿಯಾಗಿ ಬ್ಯಾಟ್ ಬೀಸಿ, ಶತಕ ಸಿಡಿಸಿ ಸಂಭ್ರಮಿಸಿದರು.
ರಾಹುಲ್ ಔಟಾದ ಬಳಿಕ ಕ್ರೀಸ್ಗೆ ಎಂಟ್ರಿ ಕೊಟ್ಟ ನಾಯಕ ವಿರಾಟ್, ರನ್ ವೇಗ ಹೆಚ್ಚಿಸಿದರು. ಇವರಿಗೆ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ ಹೊಡಿ-ಬಡಿ ಆಟಕ್ಕೆ ಮುಂದಾಗಿ, 26 ರನ್ ಕಲೆಹಾಕಿ ಅಮಿರ್ ಎಸೆತಕ್ಕೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಬಂದ ಎಂ ಎಸ್ ಧೋನಿ, ಕೇವಲ ಒಂದು ರನ್ ಕಲೆ ಹಾಕಿ ಪೆವಿಲಿಯನ್ಗೆ ತೆರಳಿದರು. ಈ ನಡುವೆ ದಿಢೀರ್ ಎಂಟ್ರಿ ಕೊಟ್ಟ ಮಳೆರಾಯ, ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಿತು.
ಮಳೆ ನಿಂತ ಬಳಿಕ ಮತ್ತೆ ಆರಂಭಗೊಂಡ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ, 65 ಎಸೆತಗಳಲ್ಲಿ 77 ರನ್ ಗಳಿಸಿದರು. ವಿಜಯ್ ಶಂಕರ್ 15 ಹಾಗೂ ಕೇದಾರ್ ಜಾಧವ್ 9 ರನ್ ಗಳಿಸಿ ಅಜೇಯರಾಗಿ ಉಳಿದರು.
ಅಂತಿಮವಾಗಿ ಭಾರತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 336 ರನ್ ಗಳಿಸಿ, ಪಾಕ್ಗೆ ಸ್ಪರ್ಧಾತ್ಮಕ ಮೊತ್ತದ ಸವಾಲು ನೀಡಿತು. ಪಾಕ್ ಪರ ಮೊಹಮ್ಮದ್ ಅಮಿರ್ ಮೂರು ವಿಕೆಟ್ ಪಡೆದರೆ, ಹಸನ್ ಅಲಿ ಹಾಗೂ ವಹಾಬ್ ರಿಯಾಜ್ ತಲಾ ಒಂದು ವಿಕೆಟ್ ಪಡೆದರು.