ETV Bharat / sports

ಏಕದಿನ ಕ್ರಿಕೆಟ್​ಗೆ ತಾಹಿರ್, ಜೆಪಿ ಡುಮಿನಿ ವಿದಾಯ: ಗೆಲುವಿನೊಂದಿಗೆ ಬೀಳ್ಕೊಡುಗೆ - ವಿದಾಯ

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್​ ಇಮ್ರಾನ್​ ತಾಹಿರ್ ಹಾಗೂ​ ಆಲ್​ರೌಂಡರ್​ ಜೆಪಿ ಡುಮಿನಿ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಗೆಲುವಿನೋಂದಿಗೆ ಉಭಯ ಆಟಗಾರರಿಗೆ ಬೀಳ್ಕೊಡುಗೆ
author img

By

Published : Jul 7, 2019, 2:21 PM IST

ಲಂಡನ್: ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ನಂತರ ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್​ ಇಮ್ರಾನ್​ ತಾಹಿರ್​ ಮತ್ತು ಆಲ್​ರೌಂಡರ್​​ ಆಟಗಾರ ಜೆಪಿ ಡುಮಿನಿ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

2011ರಲ್ಲಿ ದಕ್ಷಿಣ ಆಪ್ರಿಕಾ ಪರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ತಾಹೀರ್​ ಇಲ್ಲಿವರೆಗೆ 107 ಏಕದಿನ ಕ್ರಿಕೆಟ್​ ಪಂದ್ಯಗಳನ್ನ ಆಡಿದ್ದು, 173 ವಿಕೆಟ್​ ಪಡೆದುಕೊಂಡಿದ್ದಾರೆ. ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಒಂಬತ್ತು ಪಂದ್ಯಗಳಿಂದ 11 ವಿಕೆಟ್ ಪಡೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ಪರ 199 ಏಕದಿನ ಕ್ರಿಕೆಟ್​ ಪಂದ್ಯಗಳನ್ನ ಆಡಿರುವ ಡುಮಿನಿ 5,117 ರನ್​ಗಳಿಸಿದ್ದು, 69 ವಿಕೆಟ್​ ಪಡೆದುಕೊಂಡಿದ್ದಾರೆ.

ಇಬ್ಬರು ಆಟಗಾರರ ನಿವೃತ್ತಿ ಬಗ್ಗೆ ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡು ಪ್ಲೆಸಿಸ್, 'ಇಮ್ರಾನ್​ ತಂಡದ ಹೃದಯ ಬಡಿತವಾದ್ರೆ, ಡುಮಿನಿ ತಂಡಕ್ಕೆ ತಂದೆಯಂತಹ ವ್ಯಕ್ತಿಯಾಗಿದ್ದರು. ಗೆಲುವಿನೊಂದಿಗೆ ಅವರನ್ನ ಬೀಳ್ಕೊಡುತ್ತಿರುವುದಕ್ಕೆ ಖುಷಿ ಇದೆ' ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.