ETV Bharat / sports

ಆಂಗ್ಲರ ನಾಡಲ್ಲಿ ದಾಂಡಿಗರ ಅಬ್ಬರ, ಕ್ರಿಕೆಟ್ ಪಂಡಿತರ ಲೆಕ್ಕಾಚಾರ ಉಲ್ಟಾ! - ಭಾರತ

ಆಂಗ್ಲರ ನಾಡಿನ ಬೌನ್ಸಿ ಪಿಚ್​ಗಳು ಸಖತ್ ಫೇಮಸ್. ಹೀಗಾಗಿ ಅದ್ಧೂರಿ ಟೂರ್ನಿಗೂ ಮುನ್ನ ಬೌಲರ್​ಗಳು ಅಬ್ಬರಿಸಲಿದ್ದಾರೆ ಎಂದು ಕ್ರಿಕೆಟ್‌ ಪಂಡಿತರು ವಿಶ್ಲೇಷಣೆ ಮಾಡಿದ್ದರು. ಆದರೆ ಟೂರ್ನಿಯ 30 ಪಂದ್ಯಗಳು ಈಗಾಗಲೇ ಮುಕ್ತಾಯವಾಗಿದ್ದು ಊಹೆಗಳೆಲ್ಲಾ ಉಲ್ಟಾ ಆಗಿದೆ.

ವಿಶ್ವಕಪ್​ ಸಮರ
author img

By

Published : Jun 25, 2019, 9:57 AM IST

ಲಂಡನ್​: ಆಂಗ್ಲರ ನಾಡು ಬೌನ್ಸಿ ಪಿಚ್​ಗೆ ಸಖತ್ ಫೇಮಸ್. ಹೀಗಾಗಿ ಅದ್ಧೂರಿ ಟೂರ್ನಿಗೂ ಮುನ್ನ ಬೌಲರ್​ಗಳು ಅಬ್ಬರಿಸಲಿದ್ದಾರೆ ಎನ್ನುವ ಲೆಕ್ಕಾಚಾರ ಕ್ರಿಕೆಟ್‌ ಪಂಡಿತರದ್ದಾಗಿತ್ತು. ಆದರೆ ಟೂರ್ನಿಯ 30 ಪಂದ್ಯಗಳ ಮುಕ್ತಾಯಕ್ಕೆ ಈ ಕ್ಯಾಲ್ಕುಲೇಶನ್ ಉಲ್ಟಾ ಆಗಿದೆ. ಆಂಗ್ಲರ ನಾಡಿನಲ್ಲಿ ಬ್ಯಾಟ್ಸ್‌ಮನ್‌ಗಳು ಅಬ್ಬರಿಸುತ್ತಿದ್ದು ರನ್​ ಹೊಳೆ ಹರಿಯುತ್ತಿದೆ.

ಟಾಸ್ ಗೆದ್ದೋನೆ ಬಾಸು!

ಕ್ರಿಕೆಟ್​ನ ಜನಪ್ರಿಯ ಟಾಸ್ ಗೆದ್ದೋನೆ ಬಾಸ್ ಎನ್ನುವ ಮಾತು ಈ ಬಾರಿಯ ವಿಶ್ವಕಪ್​​ನಲ್ಲಿ ಮತ್ತೆ ಸಾಬೀತಾಗಿದೆ. ಈ ಬಾರಿ ಟಾಸ್​ ಗೆದ್ದ ಬಹುತೇಕ ತಂಡಗಳು ಬ್ಯಾಟಿಂಗ್ ಆಯ್ದುಕೊಂಡಿವೆ ಎಂದು ಐಸಿಸಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಟೂರ್ನಿಯ 24ನೇ ಪಂದ್ಯದಿಂದ 30ರವರೆಗೆ ಐದು ತಂಡಗಳು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಗೆಲುವು ಸಾಧಿಸಿವೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ತಂಡ ಪವರ್​​​ಪ್ಲೇನಲ್ಲಿ ಶೇ.44.25ರಷ್ಟು ಸ್ಕೋರ್ ಮಾಡಿದ್ದರೆ, ದ್ವಿತೀಯ ಬ್ಯಾಟಿಂಗ್​ನಲ್ಲಿ ಶೇ.42.63 ರನ್ ಗಳಿಸಿದೆ.

ಅಬ್ಬರಿಸಿದ ಆರಂಭಿಕರು:

ಈ ಬಾರಿಯ ವಿಶ್ವಕಪ್​ನಲ್ಲಿ ಅರಂಭಿಕ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ವಿಶ್ವಕಪ್ ಇತಿಹಾಸದಲ್ಲೇ ಮೊದಲ ವಿಕೆಟ್​ಗೆ ಅತ್ಯುತ್ತಮ ಜೊತೆಯಾಟ ಮೂಡಿಬಂದಿದ್ದು ಇನ್ನೊಂದು ಗಮನಾರ್ಹ ಸಂಗತಿ.

ಈ ಆವೃತ್ತಿಯ ವಿಶ್ವಕಪ್​ನಲ್ಲಿ ಮೊದಲ ವಿಕೆಟ್ ಜೊತೆಯಾಟ ಶೇ.44.36ರಷ್ಟಿದ್ದು, ಈ ಹಿಂದಿನ ಆವೃತ್ತಿಗಳಲ್ಲಿ ಈ ಪ್ರಮಾಣ 35ರ ಆಸುಪಾಸಿನಲ್ಲಿತ್ತು.

ಮೊದಲ ವಿಕೆಟ್ ಜೊತೆಯಾಟದಲ್ಲಿ ಭಾರತ, ಆಸೀಸ್ ಪ್ರಾಬಲ್ಯ!

2019ರ ವಿಶ್ವಕಪ್​ನ ನೆಚ್ಚಿನ ತಂಡಗಳಾದ ಆಸ್ಟ್ರೇಲಿಯಾ ಹಾಗೂ ಭಾರತ ಭರವಸೆಯನ್ನು ಉಳಿಸಿಕೊಂಡು ಟೂರ್ನಿಯಲ್ಲಿ ಮುನ್ನಡೆದಿದ್ದು, ಮೊದಲ ವಿಕೆಟ್ ಜೊತೆಯಾಟದಲ್ಲಿ ಈ ಎರಡು ತಂಡಗಳು ಉತ್ತಮ ಸಾಧನೆ ತೋರಿವೆ.

ಆರು ಇನ್ನಿಂಗ್ಸ್‌ನಲ್ಲಿ ಆಸೀಸ್​ ಆರಂಭಿಕರಾದ ಆ್ಯರನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ 447 ರನ್ ಕಲೆ ಹಾಕಿದ್ದಾರೆ. ಇತ್ತ ಟೀಮ್ ಇಂಡಿಯಾದಲ್ಲಿ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಸದ್ಯ ಶಿಖರ್‌ ಧವನ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದು, ಆ ಸ್ಥಾನಕ್ಕೆ ಕೆ.ಎಲ್​ ರಾಹುಲ್ ಬಂದಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿಯುವ ರಾಹುಲ್ ಸದ್ಯ ರೋಹಿತ್​ಗೆ ಉತ್ತಮ ಸಾಥ್ ನೀಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರರು ಗಮನಾರ್ಹ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರೆ ವೆಸ್ಟ್ ಇಂಡೀಸ್ ಆಟಗಾರರು ಇಲ್ಲಿ ತನಕ ಐವತ್ತು ರನ್ ಕೂಡಾ​​ ಕಲೆ ಹಾಕಿಲ್ಲ ಎನ್ನುವುದು ಅಚ್ಚರಿಯ ಅಂಶ.

Intro:Body:

ವಿಶ್ವಕಪ್​ ಸಮರ: ಆಂಗ್ಲರ ನಾಡಿನಲ್ಲಿ ದಾಂಡಿಗರ ಅಬ್ಬರ... ಕ್ರಿಕೆಟ್ ಪಂಡಿತರ ಲೆಕ್ಕಾಚಾರ ಉಲ್ಟಾ ಮಾಡಿದ ಟೂರ್ನಿ..!

ಲಂಡನ್​: ವಿಶ್ವಕಪ್​​ ಟೂರ್ನಿ ಲೀಗ್​​ ಸುತ್ತಿನ ಕೊನೆಯ ಹಂತದತ್ತ ಸಾಗುತ್ತಿದ್ದು ಕೆಲ ತಂಡಗಳಿಗೆ ಸೆಮೀಸ್ ಹಾದಿ ಸುಗಮವಾಗಿದ್ದರೆ ಇನ್ನು ಕೆಲವು ಟೀಮ್​ಗಳಿಗೆ ಮುಂದಿನ ಹಂತ ಉಳಿದ ತಂಡಗಳ ಸೋಲು-ಗೆಲುವಿನ ಮೇಲೆ ನಿಂತಿದೆ.

ಆಂಗ್ಲರ ನಾಡು ಬೌನ್ಸಿ ಪಿಚ್​ಗೆ ಸಖತ್ ಫೇಮಸ್. ಹೀಗಾಗಿ ಅದ್ಧೂರಿ ಟೂರ್ನಿಗೆ ಮುನ್ನ ಬೌಲರ್​ಗಳು ಅಬ್ಬರಿಸಲಿದ್ದಾರೆ ಎನ್ನುವ ಕ್ರಿಕೆಟ್ ಪಂಡಿತರು ಲೆಕ್ಕಾಚಾದಲ್ಲಿದ್ದರು. ಆದರೆ ಟೂರ್ನಿಯ 30 ಪಂದ್ಯ ಮುಕ್ತಾಯಕ್ಕೆ ಈ ಲೆಕ್ಕಾಚಾರ ಉಲ್ಟಾ ಆಗಿದೆ. ಆಂಗ್ಲರ ನಾಡಿನಲ್ಲಿ ದಾಂಡಿಗರು ಅಬ್ಬರಿಸುತ್ತಿದ್ದು ರನ್​ ಹೊಳೆ ಹರಿಯುತ್ತಿದೆ. ಹಾಗಿದ್ದರೆ ಇಂಟರ್ವಲ್​​ ವೇಳೆಗೆ ತಂಡಗಳು ಗೆಲುವಿನ ಬಗ್ಗೆ ಒಂದು ಕುತೂಹಲಕಾರಿ ವರದಿ ಇಲ್ಲಿದೆ..

ಟಾಸ್ ಗೆದ್ದೋನೆ ಬಾಸ್..!

ಕ್ರಿಕೆಟ್​ನ ಜನಪ್ರಿಯ ಮಾತಿನಂತೆ ಟಾಸ್ ಗೆದ್ದೋನೆ ಬಾಸ್ ಎನ್ನುವ ಮಾತು ಈ ಬಾರಿಯ ವಿಶ್ವಕಪ್​​ನಲ್ಲಿ ಮತ್ತೆ ಸಾಬೀತಾಗಿದೆ. ಈ ಬಾರಿ ಟಾಸ್​ ಗೆದ್ದ ಬಹುತೇಕ ತಂಡಗಳು ಬ್ಯಾಟಿಂಗ್ ಆಯ್ದುಕೊಂಡಿವೆ ಎಂದು ಐಸಿಸಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಟೂರ್ನಿಯ 24ನೇ ಪಂದ್ಯದಿಂದ 30ರವರೆಗೆ ಐದು ತಂಡಗಳು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು  ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ತಂಡ ಪವರ್​​​ಪ್ಲೇನಲ್ಲಿ ಶೇ.44.25ರಷ್ಟು ಸ್ಕೋರ್ ಮಾಡಿದ್ದರೆ, ದ್ವಿತೀಯ ಬ್ಯಾಟಿಂಗ್​ನಲ್ಲಿ ಶೇ.42.63 ರನ್ ಗಳಿಸಿದೆ.

ಅಬ್ಬರಿಸಿದ ಆರಂಭಿಕರು:

ಈ ಬಾರಿಯ ವಿಶ್ವಕಪ್​ನಲ್ಲಿ ಅರಂಭಿಕ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ವಿಶ್ವಕಪ್ ಇತಿಹಾಸದಲ್ಲೇ ಮೊದಲ ವಿಕೆಟ್​ಗೆ ಅತ್ಯುತ್ತಮ ಜೊತೆಯಾಟ ಈ ಬಾರಿ ಬಂದಿದ್ದು ಇನ್ನೊಂದು ಗಮನಾರ್ಹ ಸಂಗತಿ.

ಈ ಆವೃತ್ತಿಯ ವಿಶ್ವಕಪ್​ನಲ್ಲಿ ಮೊದಲ ವಿಕೆಟ್ ಜೊತೆಯಾಟ ಶೇ.44.36ರಷ್ಟಿದ್ದು, ಈ ಹಿಂದಿನ ಆವೃತ್ತಿಗಳಲ್ಲಿ ಈ ಪ್ರಮಾಣ 35ರ ಆಸುಪಾಸಿನಲ್ಲಿತ್ತು.

ಮೊದಲ ವಿಕೆಟ್ ಜೊತೆಯಾಟದಲ್ಲಿ ಭಾರತ, ಆಸೀಸ್ ಪ್ರಾಬಲ್ಯ..!

2019ರ ವಿಶ್ವಕಪ್​ನ ನೆಚ್ಚಿನ ತಂಡಗಳಾದ ಆಸ್ಟ್ರೇಲಿಯಾ ಹಾಗೂ ಭಾರತ ಭರವಸೆಯನ್ನು ಉಳಿಸಿಕೊಂಡು ಟೂರ್ನಿಯಲ್ಲಿ ಮುನ್ನಡೆದಿದ್ದು, ಮೊದಲ ವಿಕೆಟ್ ಜೊತೆಯಾಟದಲ್ಲಿ ಈ ಎರಡು ತಂಡಗಳು ಉತ್ತಮ ಸಾಧನೆ ತೋರಿವೆ.

ಆರು ಇನ್ನಿಂಗ್ಸ್​ಗಳಲ್ಲಿ ಆಸೀಸ್​ ಆರಂಭಿಕರಾದ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ 447 ರನ್ ಕಲೆಹಾಕಿದ್ದಾರೆ. ಇತ್ತ ಟೀಮ್ ಇಂಡಿಯಾದಲ್ಲಿ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಸದದ್ಯ ಧವನ್ ಗಾಯದಿಂದ ಟೂರ್ನಿಯಿಂದ ಹೊರಬಿದ್ದಿದ್ದು, ಆ ಸ್ಥಾನಕ್ಕೆ ಕೆ.ಎಲ್​ ರಾಹುಲ್ ಬಂದಿದ್ದಾರೆ. ರಾಹುಲ್ ಸದ್ಯ ರೋಹಿತ್​ಗೆ ಉತ್ತಮ ಸಾಥ್ ನೀಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರರು ಗಮನಾರ್ಹ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರೆ ವೆಸ್ಟ್ ಇಂಡೀಸ್ ಆಟಗಾರರು ಇಲ್ಲಿ ತನಕ ಐವತ್ತು ರನ್​​ ಕಲೆ ಹಾಕಿಲ್ಲ ಎನ್ನುವುದು ಅಚ್ಚರಿಯ ಅಂಶ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.