ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ವೇಳೆ ಧೋನಿ ಭಾರತೀಯ ಸೇನೆಯ ತುಕಡಿ ಪ್ಯಾರಾ ಸ್ಪೆಷಲ್ ಫೋರ್ಸ್ನ ‘ಬಲಿದಾನ’ ಲಾಂಛನವಿರುವ ಗ್ಲೌಸ್ ಧರಿಸಿದ್ದರು. ಈ ಗ್ಲೌಸ್ ತೆಗದುಹಾಕುವಂತೆ ಐಸಿಸಿ, ಬಿಸಿಸಿಐಗೆ ಸೂಚಿಸಿದ್ದಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಸಚಿವರೊಬ್ಬರು ತನ್ನ ನಾಲಿಗೆ ಹರಿಬಿಟ್ಟಿದ್ದಾರೆ.
ಟ್ವಿಟರ್ನಲ್ಲಿ ಧೋನಿ ಬೆಂಬಲಿಸಿದ ದೇಶದ ಜನತೆ...! ಮಾಹಿಗೆ ಬಿಸಿಸಿಐ ಫುಲ್ ಸಫೋರ್ಟ್
ಮಾಧ್ಯಮಗಳಲ್ಲಿ ಧೋನಿ ಧರಿಸಿದ್ದ ಗ್ಲೌಸ್ ವಿಚಾರ ಸುದ್ದಿಯಾಗುತ್ತಿರೋದಕ್ಕೆ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧೋನಿ ಇಂಗ್ಲೆಂಡ್ಗೆ ಹೋಗಿರುವುದು ಕ್ರಿಕೆಟ್ ಆಡಲು, ಮಹಾಭಾರತ ಯುದ್ದಕ್ಕೆ ಅಲ್ಲ. ಭಾರತದ ಮಾಧ್ಯಮಗಳು ಮೂರ್ಖರಂತೆ ಚರ್ಚೆ ನಡೆಸುತ್ತಿವೆ. ಭಾರತದ ಕೆಲವು ಮಾದ್ಯಮಗಳು ಯುದ್ಧವನ್ನ ಪ್ರಚೋದಿಸಿತ್ತವೆ. ಅಂತವರನ್ನೆಲ್ಲ ಸಿರಿಯಾ, ಅಫ್ಘಾನಿಸ್ತಾನ, ಅಥವಾ ರವಾಂಡಾಗೆ ಕೂಲಿ ಸೈನಿಕರನ್ನಾಗಿ ಕಳುಹಿಸಬೇಕು ಎಂದು ಕಿಡಿಕಾರಿದ್ದಾರೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಭಾರತ ಕ್ರೀಡಾಸಚಿವ ಕಿರಣ್ ರಿಜುಜು, ಕ್ರೀಡಾ ಸಂಸ್ಥೆಗಳ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ, ಏಕೆಂದರೆ ನಿರ್ಣಯ ತೆಗೆದುಕೊಳ್ಳಲು ಅವರು ಸ್ವತಂತ್ರರಿರುತ್ತಾರೆ. ಆದರೆ, ಈ ಸಮಸ್ಯೆಯು ದೇಶದ ಭಾವನೆಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ರಾಷ್ಟ್ರದ ಆಸಕ್ತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಹೇಂದ್ರ ಸಿಂಗ್ ಧೋನಿ ಪ್ರಕರಣದಲ್ಲಿ ಬಿಸಿಸಿಐ ಸೂಕ್ತ ಕ್ರಮ ತೆಗೆದುಕೊಳ್ಳಲು ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.