ETV Bharat / sports

ವೈಯಕ್ತಿಕ ಜೀವನದ ಹೊಡೆತ, ಗಾಯ ಹಾಗೂ ಬೊಜ್ಜು...! 'ಹ್ಯಾಟ್ರಿಕ್' ವೀರನಿಂದ ಫಿಟ್ನೆಸ್ ಸೀಕ್ರೆಟ್ ರಿವೀಲ್

ಕಳೆದೊಂದು ವರ್ಷದಲ್ಲಿ ವೈಯಕ್ತಿಕ ಜೀವನದಲ್ಲಿ ಜರ್ಝರಿತರಾಗಿರುವ ಶಮಿ ವಿಶ್ವಕಪ್​​ ತಂಡಕ್ಕೆ ಆಯ್ಕೆಯಾಗಿದ್ದರು. 2015ರ ವಿಶ್ವಕಪ್​ನಲ್ಲಿ ಕಾಣಿಸಿಕೊಂಡಿದ್ದ ಶಮಿ, ಆ ಬಳಿಕ ಬೊಜ್ಜು ಹಾಗೂ ಗಾಯದ ಕಾರಣಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು.

ಶಮಿ
author img

By

Published : Jun 23, 2019, 9:43 PM IST

ಲಂಡನ್​: ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ ಸುಲಭ ಜಯ ದಾಖಲಿಸಲಿದೆ ಎನ್ನುವ ಲೆಕ್ಕಾಚಾರ ಉಲ್ಟಾ ಮಾಡಿದ್ದ ಅಫ್ಘನ್ನರು ವಿರಾಟ್ ಪಡೆಯನ್ನು ಸೋಲಿನ ಸನಿಹ ತಂದು ನಿಲ್ಲಿಸಿದ್ದರು. ಈ ವೇಳೆ ಆಪತ್ಭಾಂಧವನಾಗಿ ಕಾಣಿಸಿಕೊಂಡ ವೇಗಿ ಶಮಿ ಹ್ಯಾಟ್ರಿಕ್ ಮೂಲಕ ಭಾರತಕ್ಕೆ ಗೆಲುವು ತಂದಿತ್ತಿದ್ದರು.

ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾಗೆ ಟೂರ್ನಿಯಲ್ಲಿ ನಾಲ್ಕನೇ ಗೆಲುವು ದಕ್ಕಿಸಿಕೊಟ್ಟ ಮೊಹಮ್ಮದ್ ಶಮಿ ತಮ್ಮ ಫಿಟ್ನೆಸ್ ಸಿಕ್ರೇಟ್ ರಿವೀಲ್ ಮಾಡಿದ್ದಾರೆ.

ಕಳೆದೊಂದು ವರ್ಷದಲ್ಲಿ ವೈಯಕ್ತಿಕ ಜೀವನದಲ್ಲಿ ಜರ್ಝರಿತರಾಗಿರುವ ಶಮಿ ವಿಶ್ವಕಪ್​​ ತಂಡಕ್ಕೆ ಆಯ್ಕೆಯಾಗಿದ್ದರು. 2015ರ ವಿಶ್ವಕಪ್​ನಲ್ಲಿ ಕಾಣಿಸಿಕೊಂಡಿದ್ದ ಶಮಿ, ಆ ಬಳಿಕ ಬೊಜ್ಜು ಹಾಗೂ ಗಾಯದ ಕಾರಣಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು.

ವಿಶ್ವಕಪ್​ನಲ್ಲಿ 32 ವರ್ಷಗಳ ನಂತರ ಹ್ಯಾಟ್ರಿಕ್​ ವಿಕೆಟ್​ ಪಡೆದ ಶಮಿ!

ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿದ ಬಳಿಕ ತಮ್ಮ ಫಿಟ್ನೆಸ್ ಬಗ್ಗೆ ಶಮಿ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಫಿಟ್ನೆಸ್​ಗಾಗಿ ಕಳೆದ ಎರಡು ವರ್ಷದಿಂದ ದೇಹವನ್ನು ವಿವಿಧ ರೀತಿಯಲ್ಲಿ ದಂಡಿಸಿದ್ದೇನೆ. ಗಾಯದ ನಂತರ ಬೊಜ್ಜು ಬಂದಿತ್ತು. ತಂಡದಲ್ಲಿ ಇನ್ನಷ್ಟು ವರ್ಷ ಆಡಬೇಕಾದರೆ ದೇಹವನ್ನು ದಂಡಿಸುವ ಅನಿವಾರ್ಯವಿದೆ ಎನ್ನುವುದು ಈ ವೇಳೆ ನನ್ನ ಅರಿವಿಗೆ ಬಂದಿದೆ."

Mohammed Shami
ಮೊಹಮ್ಮದ್ ಶಮಿ

"ನನ್ನ ಆಹಾರದಲ್ಲಿ ಒಂದಷ್ಟು ಮಾರ್ಪಾಡು ಮಾಡಿಕೊಂಡೆ. ನಾನು ಡಯೆಟ್ ಮಾಡುತ್ತಿದ್ದೇನೆ ಎಂದಾಗ ಹಲವರು ನನ್ನ ನೋಡಿ ನಕ್ಕಿದ್ದರು. ಸಿಹಿತಿಂಡಿ ಹಾಗೂ ಬ್ರೆಡ್​ಗಳಿಂದ ದೂರ ಉಳಿದೆ. ಇದು ನಿಜಕ್ಕೂ ದೊಡ್ಡ ಪರಿಣಾಮ ಬೀರಿತು" ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.

ನನ್ನ ಪ್ಲಾನ್ ಅದೇ ಇತ್ತು; ಮಹಿ ಭಾಯ್ ಸಲಹೆಯೂ ಅದೇ! ರೋಚಕ ಕ್ಷಣ ಬಿಚ್ಚಿಟ್ಟ 'ಹ್ಯಾಟ್ರಿಕ್' ಹೀರೋ

ಟೀಮ್ ಇಂಡಿಯಾದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡಿದ್ದ ಕಾರಣ ಆ ಸ್ಥಾನಕ್ಕೆ ಶಮಿ ಆಯ್ಕೆಯಾಗಿದ್ದರು. ಈ ಬಗ್ಗೆ ಮಾತನಾಡಿದ ಶಮಿ, "ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ದೊರೆಯುವುದು ನಿಜಕ್ಕೂ ಅದೃಷ್ಟ. ಆದರೆ ಇಂತಹ ಅವಕಾಶಕ್ಕೆ ನಾನು ಕಾಯುತ್ತಲಿದ್ದೆ. ಈ ಅವಕಾಶವನ್ನು ಸಂಪೂರ್ಣವಾಗಿ ಬಳಿಸಿಕೊಳ್ಳಲು ಕಾಯುತ್ತಿದ್ದೆ. ಆದರೆ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​​​​ ಪಡೆಯುವುದು ನಿಜಕ್ಕೂ ಅವಿಸ್ಮರಣೀಯ" ಎಂದಿದ್ದಾರೆ.

Intro:Body:

"ನನ್ನ ಆಹಾರದಲ್ಲಿ ಒಂದಷ್ಟು ಮಾರ್ಪಾಡು ಮಾಡಿಕೊಂಡೆ. ನಾನು ಡಯೆಟ್ ಮಾಡುತ್ತಿದ್ದೇನೆ ಎಂದಾಗಹಲವರು ನನ್ನ ನೋಡಿ ನಕ್ಕಿದ್ದರು. ಸಿಹಿತಿಂಡಿ ಹಾಗೂ ಬ್ರೆಡ್​ಗಳಿಂದ ದೂರ ಉಳಿದೆ. ಇದು ನಿಜಕ್ಕೂ ದೊಡ್ಡ ಪರಿಣಾಮ ಬೀರಿತು" ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.

ಟೀಮ್ ಇಂಡಿಯಾದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡಿದ್ದ ಕಾರಣ ಆ ಸ್ಥಾನಕ್ಕೆ ಶಮಿ ಆಯ್ಕೆಯಾಗಿದ್ದರು. ಈ ಬಗ್ಗೆ ಮಾತನಾಡಿದ ಶಮಿ, "ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ದೊರೆಯುವುದು ನಿಜಕ್ಕೂ ಅದೃಷ್ಟ. ಆದರೆ ಇಂತಹ ಅವಕಾಶಕ್ಕೆ ನಾನು ಕಾಯುತ್ತಲಿದ್ದೆ. ಈ ಅವಕಾಶವನ್ನು ಸಂಪೂರ್ಣವಾಗಿ ಬಳಿಸಿಕೊಳ್ಳಲು ಕಾಯುತ್ತಿದ್ದೆ. ಆದರೆ ಹ್ಯಾಟ್ರಿಕ್​​​​ ಪಡೆಯುವುದು ನಿಜಕ್ಕೂ ಅವಿಸ್ಮರಣೀಯ" ಎಂದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.