ETV Bharat / sports

ಮಾಹಿ ಫ್ಯಾನ್ಸ್​ಗೆ ಗುಡ್​ ನ್ಯೂಸ್​.. ನಿವೃತ್ತಿ ಬಗ್ಗೆ ನಿರ್ಧಾರ ಮಾಡಿಲ್ವಂತೆ ಧೋನಿ! - ನಿವೃತ್ತಿ

ನಾನು ಯಾವಾಗ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ನನಗೇ ಗೊತ್ತಿಲ್ಲ ಎಂದು ಮಹೇಂದ್ರ ಸಿಂಗ್​ ಧೋನಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಮಾಹಿ ಫ್ಯಾನ್ಸ್​ಗೆ ಗುಡ್​ ನ್ಯೂಸ್
author img

By

Published : Jul 6, 2019, 12:30 PM IST

ನವದೆಹಲಿ: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಆಡುವ ಕೊನೆಯ ಪಂದ್ಯದಲ್ಲಿ ಧೋನಿ ನಿವೃತ್ತಿ ತೆಗೆದುಕೊಳ್ಳುತ್ತಾರೆ ಎನ್ನಲಾಗುತಿತ್ತು. ಆದರೆ, ಇದಕ್ಕೆ ಧೋನಿ ನಕಾರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ನಿವೃತ್ತಿ ಬಗ್ಗೆ ಧೋನಿ ಇನ್ನೂ ನಿರ್ಧಾರ ಮಾಡಿಲ್ಲ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ' ನಾನು ಯಾವಾಗ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ನನಗೇ ಗೊತ್ತಿಲ್ಲ. ಆದರೆ ಸಾಕಷ್ಟು ಜನ ನಾನು ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮೊದಲೇ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಬಯಸುತ್ತಿದ್ದಾರೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಬಾಂಗ್ಲಾದೇಶದ ಮತ್ತು ಇಂಗ್ಲೆಂಡ್​​ ವಿರುದ್ಧದ ಪಂದ್ಯಗಳಲ್ಲಿ ಧೋನಿ ನಿಧಾನಗತಿಯ ಬ್ಯಾಟಿಂಗ್​ ನಡೆಸಿ ಟೀಕೆಗೆ ಗುರಿಯಾಗಿದ್ದರು. ಈ ಹಿಂದಿನಂತೆ ಮಾಹಿ ಬ್ಯಾಟಿಂಗ್​ ಮಾಡುತ್ತಿಲ್ಲ. ಇಲ್ಲಿಗೆ ಅಂತ್ಯ ಹಾಡಿ, ಧೋನಿ ನಿವೃತ್ತಿ ತೆಗೆದುಕೊಳ್ಳುವುದು ಉತ್ತಮ ಎಂದು ಅಭಿಮಾನಿಗಳು ಟ್ವಿಟರ್​​​​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ, ನಿವೃತ್ತಿ ವಿಚಾರವನ್ನ ಕಡೆಗಣಿಸಿರುವ ಮಾಹಿ, ಇಂದು ಶ್ರೀಲಂಕಾ ವಿರುದ್ಧ ನಡೆಯುವ ಪಂದ್ಯದಲ್ಲಿ ಮತ್ತೆ ಕಂಬ್ಯಾಕ್​ ಮಾಡುತ್ತಾರಾ ಕಾದು ನೋಡಬೇಕಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.