ETV Bharat / sports

'ಇಲ್ಲಿಗೆ ನಿಲ್ಲಿಸಿ ಸಾಕು' ಧೋನಿ ವಿರುದ್ದ ಅಭಿಮಾನಿಗಳ ಆಕ್ರೋಶ: ಮಾಹಿ ಬೆಂಬಲಕ್ಕೆ ನಿಂತ ಸಚಿನ್!

author img

By

Published : Jul 3, 2019, 12:55 PM IST

ಧೋನಿ ನಿಧಾನಗತಿಯ ಬ್ಯಾಟಿಂಗ್​ನಿಂದ ಆಕ್ರೋಶಗೊಂಡಿರುವ ಅಭಿಮಾನಿಗಳು ನಿವೃತ್ತಿ ತೆಗೆದುಕೊಳ್ಳುವಂತೆ ಟ್ವಿಟ್ಟರ್​ನಲ್ಲಿ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಹಿ ಬೆಂಬಲಕ್ಕೆ ನಿಂತ ಸಚಿನ್

ಲಂಡನ್: ವಿಶ್ವಕಪ್​ ಟೂರ್ನಿಯಲ್ಲಿ ನಿಧಾನಗತಿಯ ಬ್ಯಾಟಿಂಗ್​ನಿಂದ ಟೀಕೆಗೆ ಗುರಿಯಾಗಿರುವ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ವಿರುದ್ಧ ಅಭಿಮಾನಿಗಳು ಮತ್ತೆ ಆಕ್ರೋಶಗೊಂಡಿದ್ದಾರೆ.

ನಿನ್ನೆ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ 33 ಎಸೆತಗಳಲ್ಲಿ 4 ಬೌಡರಿ ಸಹಿತ 35 ರನ್​ಗಳಿಸಿದ್ದರು. 39ನೇ ಓವರ್​ನಲ್ಲಿ ಬ್ಯಾಟಿಂಗ್​ಗೆ ಬಂದ ಧೋನಿಯಿಂದ ಹೆಚ್ಚು ರನ್​ ಗಳಿಸುವ ನಿರೀಕ್ಷೆ ಇತ್ತು. ಆದ್ರೆ, ಅಂತಿಮ ಓವರ್​ ವರೆಗೂ ಕ್ರೀಸ್​ನಲ್ಲೆ ಇದ್ದ ಮಾಹಿ ನಿರೀಕ್ಷಿಸಿದಷ್ಟು ರನ್​ ಗಳಿಸಲಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿಂದಿನಂತೆ ಮಾಹಿ ಬ್ಯಾಟಿಂಗ್​ ಮಾಡುತ್ತಿಲ್ಲ. ಇಲ್ಲಿಗೆ ಅಂತ್ಯ ಹಾಡಿ, ಧೋನಿ ನಿವೃತ್ತಿ ತೆಗೆದುಕೊಳ್ಳುವುದು ಉತ್ತಮ ಎಂದು ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.

  • Only singles will be allowed to watch the sequel of MS Dhoni - The untold story.

    — Keh Ke Peheno (@coolfunnytshirt) July 2, 2019 " class="align-text-top noRightClick twitterSection" data=" ">
  • Dhoni doing a great job of slowing down the run rate

    — New Zealandennis (@DennisCricket_) July 2, 2019 " class="align-text-top noRightClick twitterSection" data=" ">
  • This innings yet again underlines that the end is not only near, it's here #Dhoni #CWC19 #IndvBan

    — Amol Karhadkar (@karhacter) July 2, 2019 " class="align-text-top noRightClick twitterSection" data=" ">

ಧೋನಿ ಆಟದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿನ್ ತೆಂಡೂಲ್ಕರ್​, ತಂಡದ ಅಗತ್ಯಕ್ಕೆ ತಕ್ಕಂತೆ ಮಾಹಿ ಆಟವಾಡಿದ್ದಾರೆ. 50ನೇ ಓವರ್​ ವರಗೂ ಕ್ರೀಸ್​ನಲ್ಲಿದ್ದು, ಜೊತೆಗಾರರಿಗೆ ಮಾರ್ಗದರ್ಶನ ನೀಡಬೇಕಿತ್ತು. ಧೋನಿ ಕೂಡ ಅದನ್ನೇ ಮಾಡಿದ್ದಾರೆ ಎಂದು ಮಾಹಿ ಪರ ಬ್ಯಾಟ್​ ಬೀಸಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲೂ ಧೋನಿ ಅವರ ನಿಧಾನಗತಿಯ ಬ್ಯಾಟಿಂಗ್​ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.