ಲಾಹೋರ್ (ಪಾಕಿಸ್ತಾನ) : 2018ರಿಂದಲೂ ಪಾಕಿಸ್ತಾನ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದ ನ್ಯೂಜಿಲ್ಯಾಂಡ್ನ ಮಾಜಿ ಸ್ಪಿನ್ನರ್ ತದ ನಂತರ ಹೈ ಪರ್ಫಾರ್ಮೆನ್ಸ್ ಕೋಚಿಂಗ್ ಹುದ್ದೆ ಅಲಂಕಾರ ಮಾಡಿದ್ದರು. ಆದರೆ, ಇದೀಗ ಅವಧಿ ಮಕ್ತಾಯಗೊಂಡಿರುವ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹೊಸ ಅವಕಾಶ ಪಡೆದುಕೊಳ್ಳುವ ಉದ್ದೇಶದಿಂದ ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ಅವರು ತಿಳಿಸಿದ್ದಾರೆ. ಪಾಕ್ ತಂಡದೊಂದಿಗೆ ಮೂರು ವರ್ಷಗಳ ಅವಧಿ ಕೊನೆಗೊಳಿಸಿದ್ದಾಗಿ ಪಿಸಿಬಿ ಕೂಡ ಪ್ರಕಟಣೆ ಹೊರಡಿಸಿದೆ.
ಪಾಕ್ ತಂಡದೊಂದಿಗೆ ಸೇವೆ ಸಲ್ಲಿಸಿರುವುದು, ಅನೇಕ ಸವಾಲು ಹಾಗೂ ತಂಡ ಮುನ್ನಡೆಸಲು ಅವಕಾಶ ಪಡೆದುಕೊಂಡಿರುವುದಕ್ಕಾಗಿ ನಾನು ಪಿಸಿಬಿಗೆ ಕೃತಜ್ಞತೆ ಹೇಳುತ್ತೇನೆ ಎಂದು ಪಿಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿರಿ: ಫೋನ್ನಲ್ಲಿ ಬ್ಯುಸಿ: ಮಗುವಿನೊಂದಿಗೆ ಮ್ಯಾನ್ಹೋಲ್ನಲ್ಲಿ ಬಿದ್ದ ಮಹಿಳೆ!
ಪಾಕ್ನ ಪಿಸಿಬಿ ಮುಖ್ಯಸ್ಥರಾಗಿ ರಮೀಝ ರಾಜಾ ಅಧಿಕಾರ ವಹಿಸಿಕೊಂಡ ನಂತರ ಇದೀಗ ಐದನೇ ವ್ಯಕ್ತಿ ರಾಜೀನಾಮೆ ನೀಡುತ್ತಿದ್ದಾರೆ. ಈಗಾಗಲೇ ಪಾಕ್ ತಂಡದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್, ಬೌಲಿಂಗ್ ತರಬೇತುದಾರ ವಕಾರ್ ಯೂನಿಸ್ ರಾಜೀನಾಮೆ ನೀಡಿದ್ದಾರೆ. ಇದಾದ ಬಳಿಕ ವಾಸೀಂ ಖಾನ್ ಹಾಗೂ ಮಾರ್ಕೆಟಿಂಗ್ ಮುಖ್ಯಸ್ಥ ಬಾಬರ್ ಹಮೀದ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
1990 ರಿಂದ 2001ರವರೆಗೆ ನ್ಯೂಜಿಲ್ಯಾಂಡ್ ಪರವಾಗಿ 7 ಟೆಸ್ಟ್ 11 ಏಕದಿನ ಪಂದ್ಯಗಳನ್ನಾಡಿದ್ದ ಆಫ್ ಸ್ಪಿನ್ನರ್ ಗ್ರಾಂಟ್, ನ್ಯೂಜಿಲ್ಯಾಂಡ್ A ಮತ್ತು ಅಂಡರ್-19 ತಂಡದ ತರಬೇತುದಾರರಾಗಿದ್ದರು.