ETV Bharat / sports

ವಿಶ್ವಕಪ್​ನಲ್ಲಿ ಕಳಪೆ ಅಂಪೈರಿಂಗ್​.. ವಿಂಡೀಸ್​ ಆಟಗಾರನ ಆಕ್ರೋಶ - undefined

ನಾಟಿಂಗ್​ಹ್ಯಾಮ್​ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಪಂದ್ಯದಲ್ಲಿ ಅಂಪೈರಿಂಗ್​ ಕಳಪೆಯಿಂದ ಕೂಡಿತ್ತು ಎಂದು ವಿಂಡೀಸ್​ ಆಟಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಂಡೀಸ್​ ಆಟಗಾರನಿಂದ ಆಕ್ರೋಶ
author img

By

Published : Jun 7, 2019, 5:10 PM IST

ಇಂಗ್ಲೆಂಡ್​: ನಿನ್ನೆ ನಡೆದ ವೆಸ್ಟ್​ ಇಂಡೀಸ್​ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್​ ಪಂದ್ಯದಲ್ಲಿ ಅಂಪೈರಿಂಗ್​ ತೀರಾ ಕಳಪೆ ಮಟ್ಟದಿಂದ ಕೂಡಿತ್ತು ಎಂದು ವೆಸ್ಟ್​ ಇಂಡೀಸ್​ ತಂಡದ ಆಲ್​ರೌಂಡರ್​ ಕಾರ್ಲೋಸ್​ ಬ್ರಾತ್​ವೈಟ್ ಕಿಡಿ ಕಾರಿದ್ದಾರೆ.

ಇಬ್ಬರು ಅಂಪೈರ್​ಗಳು ಔಟ್​ ಎಂದು ನೀಡಿದ್ದ ನಾಲ್ಕು ತೀರ್ಪುಗಳ ಡಿಆರ್​ಎಸ್​ನಿಂದ ನಾಟ್​ ಔಟ್​ ಎಂದು ಸಾಬೀತಾದವು. ಅದರಲ್ಲಿ ಕ್ರಿಸ್​ ಗೇಲ್​ ಔಟ್​ ಎಂದು ನೀಡಿದ್ದ ಎರಡು ತೀರ್ಪುಗಳು ಕೂಡ ನಾಟ್​ ಔಟ್​ ಆಗಿದ್ದು, ಉತ್ತಮ ಅಂಪೈರಿಂಗ್​ ಮಾಡಿದ್ದರೆ ಗೇಲ್​ ಕೂಡ ಔಟ್​ ಆಗುತ್ತಿರಲಿಲ್ಲ.

ಅಂಪೈರಗಳು ನೀಡುತ್ತಿದ್ದ ಕೆಲವು ತೀರ್ಪುಗಳು ನಮ್ಮನ್ನ ಹತಾಶೆಗೊಳಿಸಿದವು. ನಾವು ಎಸೆದ ಕೆಲವು ಎಸೆತಗಳು ಬ್ಯಾಟ್ಸ್​ಮನ್ ತಲೆಯ ನೇರಕ್ಕಿದ್ದರೂ ಅಂಪೈರ್​ಗಳು ವೈಡ್​ ಎಂದು ತೀರ್ಪು ನೀಡಿದ್ರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾವು ಬ್ಯಾಟಿಂಗ್​ ಮಾಡುವಾಗ ಚೆಂಡು ಪ್ಯಾಡ್​ಗೆ ಬಡಿದರೆ ಸಾಕು, ಅಂಪೈರ್​ಗಳು ಔಟ್​ ಎಂದು ಬೆರಳು ಮೇಲಕ್ಕೆ ಎತ್ತುತ್ತಿದ್ದರು. ಆದ್ರೆ, ನಾವು ಬೌಲಿಂಗ್​ ಮಾಡುವಾಗ ಚೆಂಡು ಅವರ ಪ್ಯಾಡ್​ಗೆ ಬಡಿದರೆ, ಅದೇ ಬೆರಳು ಮೇಲಕ್ಕೆ ಹೋಗುತ್ತಿರಲಿಲ್ಲ ಎಂದು ಅಂಪೈರಿಂಗ್​ ಬಗ್ಗೆ ಈ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:Body:

fsdfsdf

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.