ಮ್ಯಾಂಚೆಸ್ಟರ್: ಟೀಂ ಇಂಡಿಯಾ ಜತೆ ನಿನ್ನೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಅಶಿಸ್ತಿನ ವರ್ತನೆ ತೋರಿದ ವೆಸ್ಟ್ ಇಂಡೀಸ್ ಆಲ್ ರೌಂಡರ್ ಕಾರ್ಲೋಸ್ ಬ್ರಾತ್ವೇಟ್ಗೆ ಐಸಿಸಿ ದಂಡ ವಿಧಿಸಿದೆ.
ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಅಶಿಸ್ತಿನ ವರ್ತನೆ ತೋರಿದ ಕಾರಣ ಐಸಿಸಿ ನೀತಿ ಸಂಹಿತೆಯ 2.8 ಕಲಂನಂತೆ ಬ್ರಾತ್ವೇಟ್ಗೆ ಒಟ್ಟಾರೆ ನೀಡಲಾದ ಶುಲ್ಕದ ಶೇ.15ರಷ್ಟು ದಂಡ ವಿಧಿಸಲಾಗಿದೆ.
2016 ರ ಸೆಪ್ಟೆಂಬರ್ನಲ್ಲಿ ಪರಿಷ್ಕೃತಗೊಂಡ ನಿಯಮದಂತೆ ಬ್ರಾತ್ವೇಟ್ ವಿರುದ್ಧ ಅಶಿಸ್ತಿನ ಪಾಯಿಂಟ್ ಸಹ ದಾಖಲಾಗಿದೆ.
ನಿನ್ನೆ ಭಾರತದ ವಿರುದ್ಧದ ಪಂದ್ಯದಲ್ಲಿ ಬ್ರಾತ್ವೇಟ್ ವೈಡ್ ಬೌಲಿಂಗ್ ಮಾಡಿದ್ದರು. ಇದನ್ನು ಅಂಪೈರ್ ಘೋಷಿಸುತ್ತಿದ್ದಂತೆ ಅವರೊಂದಿಗೆ ವಾಗ್ವಾದ ನಡೆಸಿದರು. ಅಶಿಸ್ತಿನ ವರ್ತನೆ ತೋರಿದಕ್ಕೆ ಈಗ ಬೆಲೆ ತೆರಬೇಕಿದೆ.