ETV Bharat / sports

ಕಿವೀಸ್​ ವಿರುದ್ಧ ಬಾಂಗ್ಲಾ ಟೈಗರ್ಸ್​ ಫೈಟ್​: ಎರಡನೇ ಗೆಲುವು ಯಾರಿಗೆ?

ವಿಶ್ವಕಪ್​ ಟೂರ್ನಿಯಲ್ಲಿ ಮೊದಲ ಮಂದ್ಯಗಳನ್ನು ಗೆದ್ದಿರುವ ನ್ಯೂಜಿಲೆಂಡ್​ ಮತ್ತು ಬಾಂಗ್ಲಾ ಮತ್ತೊಂದು ಗೆಲುವಿಗಾಗಿ ಸೆಣಸಾಟ ನಡೆಸುತ್ತಿವೆ.

ವೀಸ್​ ವಿರುದ್ಧ ಬಾಂಗ್ಲಾ ಟೈಗರ್ಸ್​ ಫೈಟ್
author img

By

Published : Jun 5, 2019, 6:57 PM IST

ಕಿಂಗ್ಟನ್​ ಓವೆಲ್​​: 2019ರ ವಿಶ್ವಕಪ್​ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ನ್ಯೂಜಿಲೆಂಡ್​ ಮತ್ತು ಬಾಂಗ್ಲಾ ದೇಶ ಇಂದು ಕಿಂಗ್ಟನ್​ ಓವೆಲ್​ನಲ್ಲಿ ಮುಖಾಮುಖಿಯಾಗಿವೆ.

ನ್ಯೂಜಿಲೆಂಡ್​ ತಂಡ ಟಾಸ್ ​ಗೆದ್ದಿದ್ದು ಬೌಲಿಂಗ್​ ಆಯ್ದುಕೊಂಡಿದೆ. ವಿಶ್ವಕಪ್‌ನಲ್ಲಿ ಬಲಾಬಲದ ಲೆಕ್ಕಾಚಾರದಲ್ಲಿ ನ್ಯೂಜಿಲೆಂಡ್‌ ಬಲಿಷ್ಠವಾಗಿದೆ. ಆದ್ರೆ ಬಾಂಗ್ಲಾದೇಶವನ್ನೂ ಕಡೆಗಣಿಸುವಂತಿಲ್ಲ. ಬಲಿಷ್ಟ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಗೆಲುವು ಸಾಧಿಸಿದ್ದು, ಕಿವಿಸ್​ ತಂಡವನ್ನೂ ಮಣಿಸುವ ಹುಮ್ಮಸ್ಸಿನಲ್ಲಿದೆ.

ಬಾಂಗ್ಲಕ್ಕೆ ಬ್ಯಾಟಿಂಗ್​ ಬಲ.. ಕಿವೀಸ್​ ಬ್ಯಾಟಿಂಗ್​-ಬೌಲಿಂಗ್ ಎರಡರಲ್ಲೂ ಬಲಿಷ್ಟ​
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ತಮೀಮ್‌ ಇಕ್ಬಾಲ್, ಸೌಮ್ಯ ಸರ್ಕಾರ್‌, ಶಕಿಬ್‌ ಅಲ್ ಹಸನ್‌, ಮುಶ್ಫಿಕರ್‌ ರಹಿಂ, ಮೊಹಮ್ಮದುಲ್ಲ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತ ಶ್ರೀಲಂಕಾ ವಿರುದ್ಧ 10 ವಿಕೆಟ್‌ಗಳ ಸುಲಭ ಗೆಲುವು ಪಡೆದ ನ್ಯೂಜಿಲೆಂಡ್‌ ಅತ್ಯಂತ ಬಲಿಷ್ಠವಾಗಿದೆ. ಕಾಲಿನ್‌ ಮುನ್ರೊ, ಮಾರ್ಟಿನ್‌ ಗಪ್ಟಿಲ್ ಕಿವೀಸ್​ ತಂಡದ ಬಲಿಷ್ಠರು. ಇತ್ತ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ರಾಸ್‌ ಟೇಲರ್‌ ಕೂಡ ತಂಡಕ್ಕೆ ನೆರವಾಗಬಲ್ಲರು. ಬೌಲಿಂಗ್​ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್​, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಮಿಚೆಲ್ ಸ್ಯಾಂಟ್ನರ್‌ ಎಂತಾ ಬ್ಯಾಟ್ಸ್​ಮನ್​ಗಳನ್ನೂ ಕಟ್ಟಿಹಾಕುವ ಸಾಮರ್ಥ್ಯವಿರುವ ಬೌಲರ್​ಗಳು​.

ಸದ್ಯ ಬಾಂಗ್ಲಾ ತಂಡ ಉತ್ತಮ ಆರಂಭ ಪಡೆದಿದ್ದು ಒಂದು ವಿಕೆಟ್​ ಕಳೆದುಕೊಂಡು ಬ್ಯಾಟಿಂಗ್​ ನಡೆಸುತ್ತಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.