ಟೌಂಟನ್: ಡೇವಿಡ್ ವಾರ್ನರ್ ಶತಕ ಹಾಗೂ ನಾಯಕ ಆ್ಯರೋನ್ ಫಿಂಚ್ ಅವರ ಆಕರ್ಷಕ ಅರ್ಧಶತಕದ ನೆರವಿಂದ ಪಾಕಿಸ್ತಾನದ ವಿರುದ್ಧ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 41 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್, ಡೇವಿಡ್ ವಾರ್ನರ್ ಶತಕ (107) ಹಾಗೂ ನಾಯಕ ಆ್ಯರೋನ್ ಫಿಂಚ್ (82)ರ ಅರ್ಧಶತಕದ ನೆರವಿನಿಂದ 49 ಓವರ್ಗಳಲ್ಲಿ 307 ರನ್ಗಳಿತು.
ಒಂದು ಹಂತದಲ್ಲಿ 350 ರನ್ಗಳಿಸುವಂತಿದ್ದ ಆಸ್ಟ್ರೇಲಿಯ, ಮೊಹಮ್ಮದ್ ಅಮೀರ್ ದಾಳಿಗೆ ತತ್ತರಿಸಿ 307 ಕ್ಕೆ ಆಲೌಟ್ ಆಯಿತು. ಮೊಹಮ್ಮದ್ ಅಮೀರ್ 10 ಓವರ್ಗಳಲ್ಲಿ ಕೇವಲ 30 ರನ್ ನೀಡಿ 5 ವಿಕೆಟ್ ಪಡೆದರು. ಇವರಿಗೆ ಸಾಥ್ ನೀಡಿದ ಶಾಹೀನ್ ಆಫ್ರಿದಿ 2, ಹಫೀಜ್, ರಿಯಾಜ್ ಹಾಗೂ ಹಸನ್ ಅಲಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
-
Australia win by 41 runs, but don't be fooled by the scoreline - this was a thriller!
— ICC (@ICC) June 12, 2019 " class="align-text-top noRightClick twitterSection" data="
Pakistan were out of it at 160/6, only for Wahab Riaz's heroic 45 to drag them close. But in the end, Australia just held on.
What a game!#CWC19 pic.twitter.com/PUoV6TPIKY
">Australia win by 41 runs, but don't be fooled by the scoreline - this was a thriller!
— ICC (@ICC) June 12, 2019
Pakistan were out of it at 160/6, only for Wahab Riaz's heroic 45 to drag them close. But in the end, Australia just held on.
What a game!#CWC19 pic.twitter.com/PUoV6TPIKYAustralia win by 41 runs, but don't be fooled by the scoreline - this was a thriller!
— ICC (@ICC) June 12, 2019
Pakistan were out of it at 160/6, only for Wahab Riaz's heroic 45 to drag them close. But in the end, Australia just held on.
What a game!#CWC19 pic.twitter.com/PUoV6TPIKY
ಆಸೀಸ್ ನೀಡಿದ 308 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ 3ನೇ ಓವರ್ನಲ್ಲೇ ಫಾಖರ್ ಜಮಾನ್ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಒಂದಾದ ಬಾಬರ್(30) 2 ವಿಕೆಟ್ಗೆ ಇಮಾಮ್ ಜೊತೆಗೂಡಿ 54 ರನ್ ಕಲೆಹಾಕಿದರು. 28 ಎಸೆತಗಳಲ್ಲಿ 7 ಬೌಂಡರಿ ಸಹಿತ 30 ರನ್ಗಳಿಸಿದ್ದ ಬಾಬರ್, ಕೌಲ್ಟರ್ ನೈಲ್ಗೆ ವಿಕೆಟ್ ಒಪ್ಪಿಸಿದರು.
ಈ ಸಂದರ್ಭದಲ್ಲಿ ಇಮಾಮ್ ಜೊತೆಗೂಡಿದ ಹಫೀಜ್, 2 ನೇ ವಿಕೆಟ್ಗೆ 80 ರನ್ಗಳ ಜೊತೆಯಾಟ ನೀಡಿದರು. 75 ಎಸೆತಗಳಲ್ಲಿ 7 ಬೌಂಡರಿ ಸಹಿತ 53 ರನ್ಗಳಿಸಿದ್ದ ಇಮಾಮ್, ಪ್ಯಾಟ್ ಕಮ್ಮಿನ್ಸ್ ಓವರ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಔಟಾದರೆ, ಇವರ ಬೆನ್ನಲ್ಲೇ 46 ರನ್ಗಳಿಸಿದ್ದ ಹಫೀಜ್, ಫಿಂಚ್ ಸ್ಪಿನ್ ಬಲೆಗೆ ಬಿದ್ದರು.
ನಂತರ ಬಂದ ಮಲಿಕ್ ಸೊನ್ನೆ ಸುತ್ತಿದರೆ, ಆಸಿಫ್ ಅಲಿ ಬಂದಷ್ಟು ಬೇಗನೇ ಮರಳಿ ಪೆವಿಲಿಯನ್ ಸೇರಿಕೊಂಡರು. ಆದರೆ ನಾಯಕ ಸರ್ಫರಾಜ್ ಜೊತೆಗೂಡಿ ಬೌಲರ್ ಹಸನ್ ಅಲಿ ಕೇವಲ 15 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 32 ರನ್ಗಳಿಸಿ ಆಸೀಸ್ ಪಾಳಯದಲ್ಲಿ ನಡುಕ ಹುಟ್ಟಿಸಿದರು. ಕೇನ್ ರಿಚರ್ಡ್ಸನ್ ಓವರ್ನಲ್ಲಿ ಸಿಕ್ಸರ್ ಎತ್ತುವ ಯತ್ನದಲ್ಲಿ ಎಡವಿದ ಹಸನ್, ಖವಾಜಾಗೆ ಕ್ಯಾಚ್ ನೀಡಿ ಔಟಾದರು.
-
WATCH: @Gmaxi_32 was 🔛🎯 to end a thoroughly entertaining match in Taunton!
— ICC (@ICC) June 12, 2019 " class="align-text-top noRightClick twitterSection" data="
Australia proving too good for Pakistan, prevailing by 41 runs #CmonAussie #CWC19 pic.twitter.com/uMH8fx37ym
">WATCH: @Gmaxi_32 was 🔛🎯 to end a thoroughly entertaining match in Taunton!
— ICC (@ICC) June 12, 2019
Australia proving too good for Pakistan, prevailing by 41 runs #CmonAussie #CWC19 pic.twitter.com/uMH8fx37ymWATCH: @Gmaxi_32 was 🔛🎯 to end a thoroughly entertaining match in Taunton!
— ICC (@ICC) June 12, 2019
Australia proving too good for Pakistan, prevailing by 41 runs #CmonAussie #CWC19 pic.twitter.com/uMH8fx37ym
ಇನ್ನೇನ್ನು ಗೆದ್ದೇ ಬಿಟ್ಟೆವು ಎಂದುಕೊಂಡಿದ್ದ ಆಸೀಸ್ಗೆ ವಹಾಬ್ ರಿಯಾಜ್ ಹಾಗೂ ಸರ್ಫರಾಜ್ ಮತ್ತೆ 8 ನೇ ವಿಕೆಟ್ ಜೊತೆಯಾಟದಲ್ಲಿ 64 ರನ್ ಜೊತೆಯಾಟ ನೀಡಿ ಮತ್ತೆ ಆಸೀಸ್ಗೆ ತಲೆನೋವು ತಂದಿದ್ದರು. ಆದರೆ ಈ ಹಂತದಲ್ಲಿ ಆಸೀಸ್ ಟ್ರಂಪ್ಕಾರ್ಡ್ ಸ್ಟಾರ್ಕ್ ದಾಳಿಗಿಳಿದು, ಒಂದೇ ಓವರ್ನಲ್ಲಿ 39 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 45 ರನ್ಗಳಿಸಿದ್ದ ರಿಯಾಜ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಅದೇ ಓವರ್ನಲ್ಲಿ ಅಮೀರ್ರನ್ನು ಕ್ಲೀನ್ ಬೌಲ್ಡ್ ಮಾಡಿ ಗೆಲುವನ್ನು ಖಚಿತ ಪಡಿಸಿದರು. 46 ನೇ ಓವರ್ನಲ್ಲಿ ಸರ್ಫರಾಜ್ ರನ್ಔಟ್ ಆಗುವುದರೊಂದಿಗೆ ಪಾಕಿಸ್ತಾನ ತಂಡ 266 ರನ್ಗಳಿಗೆ ಸರ್ವಪತನಗೊಂಡಿತು.
ಆಕರ್ಷಕ ಬೌಲಿಂಗ್ ಪ್ರದರ್ಶನ ನೀಡಿದ ಪ್ಯಾಟ್ ಕಮ್ಮಿನ್ಸ್ 3, ಸ್ಟಾರ್ಕ್ 2, ಕೇನ್ ರಿಚರ್ಡ್ಸನ್ 2, ಕೌಲ್ಟರ್ ನೈಲ್ ಹಾಗೂ ಫಿಂಚ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪಾಕ್ಗೆ ಸೋಲುಣಿಸುವುದರೊಂದಿಗೆ ಟೂರ್ನಿಯಲ್ಲಿ 3ನೇ ಗೆಲುವು ಪಡೆದ ಆಸೀಸ್, 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.