ETV Bharat / sports

'ರಾಯುಡು ಕಡಗಣನೆ, ಧೋನಿ ಕ್ರಮಾಂಕ ಬದಲಾವಣೆ ವಿಶ್ವಕಪ್​ ಸೋಲಿಗೆ ಕಾರಣ'

author img

By

Published : Dec 18, 2019, 3:39 PM IST

ವಿಶ್ವಕಪ್​ಗೂ ಹಿಂದಿನ ಮೂರು ವರ್ಷ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ಅಂಬಾಟಿ ರಾಯುಡರನ್ನು ಆಯ್ಕೆ ಮಾಡದೆ ಟೀಮ್ ಇಂಡಿಯಾದ​ ಮ್ಯಾನೇಜ್​ಮೆಂಟ್​ ದೊಡ್ಡ ತಪ್ಪು ಮಾಡಿತು ಎಂದಿ ಯುವಿ ತಿಳಿಸಿದ್ದಾರೆ.

Yuvraj Singh slams India Team management

ಮುಂಬೈ: ಭಾರತ ತಂಡ ವಿಶ್ವಕಪ್​​ನಲ್ಲಿ ಸೋಲು ಕಾಣಲು ಆಟಗಾರರ ಬ್ಯಾಟಿಂಗ್​ ಕ್ರಮಾಂಕದ ಸಂಯೋಜನೆ ಹಾಗೂ ಸೆಮಿಫೈನಲ್​ನಲ್ಲಿ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ​ ಕಳುಹಿಸದ್ದೇ ಕಾರಣವೆಂದು ಬಿಸಿಸಿಐ ಅಯ್ಕೆ ಸಮಿತಿಯನ್ನು ಮಾಜಿ ಲೆಜೆಂಡ್​ ಆಲ್​ರೌಂಡರ್​ ಯುವರಾಜ್​ ಸಿಂಗ್​ ದೂರಿದ್ದಾರೆ.

ಟೀಮ್ ಇಂಡಿಯಾದ​ ಮ್ಯಾನೇಜ್​ಮೆಂಟ್​ ತಂಡದ ಬ್ಯಾಟಿಂಗ್ ಕ್ರಮಾಂಕ ಸಂಯೋಜನೆಯಲ್ಲಿ ದೊಡ್ಡ ತಪ್ಪು ಮಾಡಿತು. ವಿಶ್ವಕಪ್​ಗೂ ಹಿಂದಿನ ಮೂರು ವರ್ಷ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ಅಂಬಾಟಿ ರಾಯುಡರನ್ನು ತಂಡದಿಂದ ಕೈಬಿಟ್ಟಿದ್ದು ದೊಡ್ಡ ದುರಂತ. ಅವರ ಜಾಗಕ್ಕೆ ಅನುಭವವಿಲ್ಲದ ವಿಜಯ ಶಂಕರ್​ರನ್ನು ಆಯ್ಕೆ ಮಾಡಿದರು. ಧವನ್​ ಹಾಗೂ ಶಂಕರ್​ ಗಾಯಗೊಂಡ ಮೇಲು ಮತ್ತೆ ರಾಯುಡರನ್ನು ಕಡೆಗಣಿಸಿ ಪಂತ್​ಗೆ ಅವಕಾಶ ನೀಡಿದ್ದು ಕೂಡ ಸರಿಯಾದ ಕ್ರಮವಲ್ಲ ಎಂದು ಯುವಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೇವಲ 5 ಏಕದಿನ ಪಂದ್ಯವಾಡಿದ್ದ ಪಂತ್​ ಹಾಗೂ ಶಂಕರ್​ ತಂಡ ಸೇರಿದ್ದಕ್ಕೆ ನನ್ನ ವಿರೋಧವಿಲ್ಲ. ಆದರೆ ಅವರು ಬಂದ ಜಾಗಕ್ಕೆ ರಾಯಡು ತುಂಬಾ ಅನುಭವಿ ಆಟಗಾರರಾಗಿದ್ದರು ಎಂಬುದೇ ನನ್ನ ಅನಿಸಿಕೆ. ಅಲ್ಲದೆ ಅದೇ ವರ್ಷ ರಾಯುಡು ಕಿವೀಸ್​ ವಿರುದ್ಧ 90 ರನ್ ​ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಆಡಿದ್ದರು. ಹಾಗಾಗಿ ರಾಯುಡು 4ನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರನಾಗಿದ್ದರು ಎಂದು ಎರಡು ವಿಶ್ವಕಪ್​ಗಳ ಹೀರೋ ಯುವಿ ಆಯ್ಕೆ ಸಮಿತಿ ನಡೆಯನ್ನು ಖಂಡಿಸಿದ್ದಾರೆ.

Rayudu-yuvraj sing
ಅಂಬಾಟಿ ರಾಯುಡು

ನನ್ನ ಪ್ರಕಾರ ಇಡೀ ಟೂರ್ನಿಯಿಂದ ಹೊರಗುಳಿದಿದ್ದ ದಿನೇಶ್​ ಕಾರ್ತಿಕ್​ ಸೆಮಿಫೈನಲ್​ನಲ್ಲಿ 4ನೇ ಕ್ರಮಾಂಕದಲ್ಲಿ ಆಡಿದ್ದು ಕೂಡ ಚರ್ಚಿಸಬೇಕಾದಂತಹ ವಿಚಾರ. ಅದರಲ್ಲೂ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಕಳುಸಿದ್ದು ಆಡಳಿತ ಮಂಡಳಿಯ ದೊಡ್ಡ ದೋಷ. ಮಹತ್ವದ ಪಂದ್ಯಗಳಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ ಎಂದು ಯುವರಾಜ್​ ತಿಳಿಸಿದ್ದಾರೆ.

ತಂಡದಲ್ಲಿನ 4ನೇ ಕ್ರಮಾಂಕದ ಬ್ಯಾಟ್ಸ್​ಮನ್​ ಇಡೀ ಟೂರ್ನಿಯಲ್ಲಿ 48 ರನ್ ​ಗಳಿಸಿದ್ದೇ ಗರಿಷ್ಠವಾದರೆ ಇದು ಆಯ್ಕೆ ಸಮಿತಿಯ ಅಜ್ಞಾನಕ್ಕೆ ಹಿಡಿದ ಕೈಗನ್ನಡಿ. ಅವರು ಸಂಪೂರ್ಣ ರೋಹಿತ್​ ಶರ್ಮಾ ಹಾಗೂ ವಿರಾಟ್​ ಕೊಹ್ಲಿಯನ್ನು ನಂಬಿಕೊಂಡರು. ಆದರೆ, ತಂಡದಲ್ಲಿ ಇಬ್ಬರ ಆಟದಿಂದ ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ಆಸ್ಟ್ರೇಲಿಯಾ ತಂಡದ ಸಂಯೋಜನೆ ನೋಡಿದರೆ, 2003, 2007, 2015ರಲ್ಲಿ ಹಿಂದೆ ತಂಡದಲ್ಲಿ ಸೆಟ್​ ಆದಂತಹ ಆಟಗಾರರನ್ನು ಸೇರಿಸಿಕೊಂಡಿತ್ತು. ಒಟ್ಟಾರೆ ನಮ್ಮ ವಿಶ್ವಕಪ್​ ತಂಡದ ಸಂಯೋಜನೆ ಸಂಪೂರ್ಣ ಕೆಟ್ಟದಾಗಿತ್ತು ಎಂದು ಯುವರಾಜ್​ ಸಿಂಗ್​ ಅಭಿಪ್ರಾಯಪಟ್ಟಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.