ETV Bharat / sports

ಮುರಿದೋಯ್ತಾ ಯಶಸ್ವಿ ಜೈಸ್ವಾಲ್​ಗೆ ನೀಡಿದ್ದ ವಿಶ್ವಕಪ್​ ಸರಣಿ ಶ್ರೇಷ್ಠ ಪ್ರಶಸ್ತಿ ಟ್ರೋಫಿ?! - ಯಶಸ್ವಿ ಜೈಸ್ವಾಲ್​​

ಬಾಂಗ್ಲಾ ವಿರುದ್ಧ ಅಂಡರ್​-19 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿರುವ ಯಶಸ್ವಿ ಜೈಸ್ವಾಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಬಾಜನರಾಗಿದ್ದರು.

Yashasvi Jaiswal
Yashasvi Jaiswal
author img

By

Published : Feb 14, 2020, 7:36 AM IST

Updated : Feb 14, 2020, 7:45 AM IST

ಮುಂಬೈ: ಟೀಂ ಇಂಡಿಯಾ ಅಂಡರ್​​-19 ಕ್ಯಾಪ್ಟನ್​​​ ಯಶಸ್ವಿ ಜೈಸ್ವಾಲ್​​ ವಿಶ್ವಕಪ್​​ನಲ್ಲಿ 400 ರನ್ ​ಗಳಿಸುವ ಮೂಲಕ ಅತಿ ಹೆಚ್ಚು ರನ್​​ ಬಾರಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಲ್ಲದೇ, ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಗೌರವ ಪಡೆದುಕೊಂಡಿದ್ದರು.

Yashasvi Jaiswal
ಯಶಸ್ವಿ ಜೈಸ್ವಾಲ್

ಬಾಂಗ್ಲಾ ವಿರುದ್ಧ ನಡೆದ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಾಣುವ ಮೂಲಕ ಮತ್ತೊಂದು ಅವಧಿಗೆ ವಿಶ್ವಕಪ್​ ಎತ್ತಿ ಹಿಡಿಯುವ ಕನಸು ಕೈಚೆಲ್ಲುವಂತೆ ಆಯಿತು. ಆದರೆ ಸರಣಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದ ಜೈಸ್ವಾಲ್​​ (88, 105*, 62, 57*, 29*, 59)ರನ್ ​ಗಳಿಸಿದ್ದರು.

ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಅವರಿಗೆ ನೀಡಲಾಗಿದ್ದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನ ಎರಡು ತುಂಡುಗಳಾಗಿ ಮುರಿದು ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುರಿದು ಬಿದ್ದಿರುವ ಟ್ರೋಫಿ ಟೇಬಲ್​ ಮೇಲೆ ಕಂಡು ಬಂದಿದೆ ಎಂದು ಖಾಸಗಿ ಸುದ್ದಿವಾಹಿನಿವೊಂದು ಸುದ್ದಿ ಪ್ರಸಾರ ಮಾಡಿದೆ. ಇನ್ನು ಟ್ರೋಫಿ ಹೇಗೆ ಮುರಿದು ಹೋಗಿದೆ ಎಂಬುದು ಜೈಸ್ವಾಲ್​ಗೆ ಗೊತ್ತಿಲ್ಲ ಎಂಬ ಮಾತುಗಳು ಸಹ ಕೇಳಿ ಬಂದಿವೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರ ಕೋಚ್​ ಜ್ವಾಲಾ ಸಿಂಗ್​, ಇದೇ ಮೊದಲ ಸಲ ಅಲ್ಲ. ಅವರು ಕೇವಲ ರನ್​​ ಗಳಿಕೆ ಬಗ್ಗೆ ಮಾತ್ರ ವಿಚಾರ ಮಾಡ್ತಾರೆ. ಟ್ರೋಫಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

Last Updated : Feb 14, 2020, 7:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.