ETV Bharat / sports

ಅದ್ಭುತ ಡೈವ್​ ಮಾಡಿ ಬೌಂಡರಿ ತಡೆದ ಥಾಯ್ಲೆಂಡ್ ಆಟಗಾರ್ತಿಯ ಫೀಲ್ಡಿಂಗ್​ಗೆ ನೆಟ್ಟಿಗರು ಫಿದಾ : video - chantam fielding viral

ಶಾರ್ಜಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೂಪರ್​ ನೋವಾಸ್​ ತಂಡದ ಜಮೀಮಾ ರೋಡ್ರಿಗಸ್ ದರ್ಡ್​ಮ್ಯಾನ್​ನಲ್ಲಿ​ ಹೊಡೆದ ಚೆಂಡನ್ನು ಬೆನ್ನಟ್ಟಿದ ನಟ್ಟಕನ್ ಚಾಂಟಮ್​ ಚೆಂಡು ಇನ್ನೇನೋ ಬೌಂಡರಿಗೆ ಗೆರೆಗೆ ಒಂದು ಅಡಿ ದೂರವಿರುವಾಗ ಡೈವ್​ ಮಾಡಿ ಚೆಂಡನ್ನ ತಡೆಯುವಲ್ಲಿ ಯಶಸ್ವಿಯಾದರು..

Thai Nattakan'
ನಟ್ಟಕನ್ ಚಾಂಟಮ್
author img

By

Published : Nov 10, 2020, 5:58 PM IST

ಶಾರ್ಜಾ: ಸೋಮವಾರ ಅಂತ್ಯಗೊಂಡ ವುಮೆನ್ಸ್​ ಟಿ20 ಚಾಲೆಂಜ್​ ಟೂರ್ನಿಯಲ್ಲಿ ಥಾಯ್ಲೆಂಡ್​ನ ನಟ್ಟಕನ್ ಚಾಂಟಮ್​ ಅವರ ಅದ್ಭುತ ಫೀಲ್ಡಿಂಗ್​ ಟ್ವಿಟರ್​ನಲ್ಲಿ ಕಿಚ್ಚೆಬ್ಬಿಸಿದ್ದು, ಅವರ ಕ್ರಿಕೆಟ್​ ಮೇಲಿರುವ ಬದ್ಧತೆಗೆ ಕ್ರಿಕೆಟಿಗರು ಸೇರಿದಂತೆ ಸಾವಿರಾರು ಅಭಿಮಾನಿಗಳು ಶಹಬ್ಬಾಸ್​ಗಿರಿ ನೀಡಿದ್ದಾರೆ.

ಶಾರ್ಜಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೂಪರ್​ ನೋವಾಸ್​ ತಂಡದ ಜಮೀಮಾ ರೋಡ್ರಿಗಸ್ ತರ್ಡ್​ಮ್ಯಾನ್​ನಲ್ಲಿ​ ಹೊಡೆದ ಚೆಂಡನ್ನು ಬೆನ್ನಟ್ಟಿದ ನಟ್ಟಕನ್ ಚಾಂಟಮ್​ ಚೆಂಡು ಇನ್ನೇನು ಬೌಂಡರಿ ಗೆರೆಗೆ ಒಂದು ಅಡಿ ದೂರವಿರುವಾಗ ಡೈವ್​ ಮಾಡಿ ಚೆಂಡನ್ನ ತಡೆಯುವಲ್ಲಿ ಯಶಸ್ವಿಯಾದರು.

  • Sharjah is the place to go for diving boundary stops. This just now from Nattakan Chantam in the Women’s T20 Challenge. Needs to put a bit more effort in, I’d say, she’s left a bit out there pic.twitter.com/XrsqtDB9Dm

    — Paul Radley (@PaulRadley) November 9, 2020 " class="align-text-top noRightClick twitterSection" data=" ">

ಅವರು ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಹಾರಿದಾಗ ಅವರ ಮುಖ ನೆಲಕ್ಕೆ ಬಡಿದಿತ್ತು. ಅದನ್ನು ಲೆಕ್ಕಿಸದೆ ಬೌಂಡರಿಯೊಳಗಿಂದ ಎದ್ದು ಬಂದು ಚೆಂಡನ್ನು ಕೀಪರ್​ ಕೈಗೆ ಎಸೆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ಈ ಆಟಗಾರ್ತಿಗೆ ಕ್ರಿಕೆಟ್​ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ಉತ್ತಮ ಬ್ಯಾಟಿಂಗ್‌ ಮಾಡಬಲ್ಲ ಅವರಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬೌಲರ್​ಗಳ ನಂತರ ಕಳುಹಿಸಿದ್ದಕ್ಕೆ ಕೆಲವು ಕ್ರಿಕೆಟ್​ ತಜ್ಞರು ಅಸಮಾಧಾನ ಹೊರ ಹಾಕಿದ್ದಾರೆ.

ಸೋಮವಾರ ನಡೆದ ವುಮೆನ್ಸ್ ಟಿ20 ಚಾಲೆಂಜ್​ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟ್ರೈಲ್​ಬ್ಲೇಜರ್ಸ್​ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 118 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಸೂಪರ್ ನೋವಾಸ್​ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 102 ರನ್​ಗಳಿಸಲಷ್ಟೇ ಶಕ್ತವಾಯಿತು. ಸತತ 2 ಬಾರಿ ಚಾಂಪಿಯನ್ ಆಗಿದ್ದ ಸೂಪರ್​ ನೋವಾಸ್​ ವಿರುದ್ಧ ಗೆದ್ದ ಸ್ಮೃತಿ ಪಡೆ ಮೊದಲ ಬಾರಿಗೆ ವುಮೆನ್ಸ್ ಟಿ20 ಚಾಲೆಂಜ್ ಟ್ರೋಪಿ ಎತ್ತಿ ಹಿಡಿಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.